IND Vs AUS ODI: ಪ್ಯಾಟ್ ಕಮಿನ್ಸ್ ಅಲಭ್ಯತೆ ಏಕದಿನ ಸರಣಿಗೂ ಸ್ಟೀವ್ ಸ್ಮಿತ್ ನಾಯಕ: ಪ್ರಮುಖ ಆಟಗಾರರು ವಾಪಸ್!

ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಬಳಿಕ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ತಾಯಿಯ ಸಾವಿನ ಕಾರಣ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದಲ್ಲೇ ಉಳಿಯಲಿದ್ದು, ಸ್ಟೀವ್ ಸ್ಮಿತ್ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ.
ಪ್ಯಾಟ್ ಕಮಿನ್ಸ್ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡ ಮಂಗಳವಾರ ಪ್ರಕಟಿಸಿದೆ. ಟೆಸ್ಟ್ ಸರಣಿಯ ಮಧ್ಯದಲ್ಲೇ ತವರಿಗೆ ವಾಪಸಾಗಿದ್ದ ಡೇವಿಡ್ ವಾರ್ನರ್ ಮತ್ತು ಆಷ್ಟನ್ ಅಗರ್ ಭಾರತಕ್ಕೆ ಮರಳಿದ್ದಾರೆ. ಏಕದಿನ ಪಂದ್ಯಗಳಲ್ಲಿ ಇವರಿಬ್ಬರೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನ ನಂತರ, ಕಮ್ಮಿನ್ಸ್ ತನ್ನ ತಾಯಿ ಮರಿಯಾರನ್ನು ನೋಡಿಕೊಳ್ಳಲು ತಂಡವನ್ನು ಬಿಟ್ಟು ಆಸ್ಟ್ರೇಲಿಯಾಗೆ ವಾಪಸಾಗಿದ್ದರು. ಅಹಮದಾಬಾದ್ ಪಂದ್ಯದ ಆರಂಭದ ದಿನವೇ ಕಮಿನ್ಸ್ ತಾಯಿ ಕ್ಯಾನ್ಸರ್ ನಿಂದ ನಿಧನರಾದರು. "ಪ್ಯಾಟ್ ಕಮಿನ್ಸ್ ವಾಪಸ್ ಬರುವುದಿಲ್ಲ, ಅವರು ಮನೆಯಲ್ಲೇ ಉಳಿದಿದ್ದು, ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ" ಎಂದು ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಹೇಳಿದ್ದಾರೆ. ಪ್ಯಾಟ್ ಕಮಿನ್ಸ್ ತಾಯಿಯ ಸಾವಿಗೆ ಕೋಚ್ ಸಂತಾಪ ಸೂಚಿಸಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಯಶಸ್ವಿ ನಾಯಕತ್ವ
ಕಮಿನ್ಸ್ ನಾಯಕತ್ವದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಸೋತ ಬಳಿಕ ತಂಡದ ನಾಯಕತ್ವ ವಹಿಸಿಕೊಂಡ ಸ್ಟೀವ್ ಸ್ಮಿತ್, ಮೂರನೇ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
2022ರಲ್ಲಿ ಆರನ್ ಫಿಂಚ್ ನಿವೃತ್ತಿಯ ನಂತರ ನಾಯಕನಾಗಿ ಆಯ್ಕೆಯಾದ ಪ್ಯಾಟ್ ಕಮಿನ್ಸ್ ಇದುವರೆಗೂ ಕೇವಲ ಎರಡು ಏಕದಿನ ಪಂದ್ಯಗಳಲ್ಲಿ ಮಾತ್ರ ತಂಡವನ್ನು ಮುನ್ನಡೆಸಿದ್ದಾರೆ. 2023ರಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯುವುದರಿಂದ ಈ ಏಕದಿನ ಸರಣಿ ಮಹತ್ವದ್ದಾಗಿದೆ.

ಡೇವಿಡ್ ವಾರ್ನರ್, ಮ್ಯಾಕ್ಸ್‌ವೆಲ್ ವಾಪಸ್
ದೆಹಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದ ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದರು, ಆಸ್ಟ್ರೇಲಿಯಾಗೆ ವಾಪಸಾಗಿದ್ದ ವಾರ್ನರ್, ಏಕದಿನ ಸರಣಿಗೆ ಮುನ್ನ ಮತ್ತೆ ಭಾರತಕ್ಕೆ ಮರಳಿದ್ದಾರೆ. ಸರಣಿಯ ಮಧ್ಯದಲ್ಲಿ ವಾಪಸ್ ಹೋಗಿದ್ದ ಮತ್ತೊಬ್ಬ ಆಟಗಾರ ಆಷ್ಟನ್ ಅಗರ್ ಕೂಡ ವಾಪಸ್ ಬಂದಿದ್ದು, ಝಂಪಾ ಜೊತೆ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಗಾಯಗೊಂಡು ಹಲವು ತಿಂಗಳು ವಿಶ್ರಾಂತಿ ಪಡೆದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಏಕದಿನ ಸರಣಿಯಲ್ಲಿ ವಾಪಸಾತಿ ಮಾಡಲು ಸಜ್ಜಾಗಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರೂನ್ ಗ್ರೀನ್ ಸೇರಿದಂತೆ ಪ್ರಮುಖ ಆಲ್‌ರೌಂಡರ್ ಗಳು ಸ್ಥಾನ ಪಡೆದಿದ್ದು, ಭಾರತಕ್ಕೆ ಪೈಪೋಟಿ ನೀಡಲು ಸಜ್ಜಾಗಿದೆ. ಏಕದಿನ ಸರಣಿಯ ಮೊದಲನೇ ಪಂದ್ಯ ಮಾರ್ಚ್ 17ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಏಕದಿನ ಸರಣಿಗೆ ಆಸ್ಟ್ರೇಲಿಯಾ ಭಾರತ ತಂಡ
ಆಸ್ಟ್ರೇಲಿಯಾ : ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ .
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನದ್ಕತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications