Ind vs Aus 1st Test: ಪಿಚ್ ಬಗ್ಗೆ ಟೀಕಿಸಿದ ಆಸ್ಟ್ರೇಲಿಯಾ ಮಾಧ್ಯಮಕ್ಕೆ ಆಸಿಸ್ ಮಾಜಿ ನಾಯಕನಿಂದಲೇ ಚಾಟಿ ಏಟು!

ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಪೈಪೋಟಿಯನ್ನು ಕೂಡ ನೀಡಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಆಸ್ಟ್ರೇಲಿಯಾ ಮಾಧ್ಯಮಗಳು ಹಾಗೂ ಕೆಲ ,ಆಜಿ ಕ್ರಿಕೆಟರ್‌ಗಳು ಪಿಚ್ ವಿಚಾರವಾಗಿ ಮಾಡಿರುವ ಟೀಕೆಗೆ ಈಗ ಕಠಿಣ ಪ್ರತ್ಯುತ್ತರಗಳು ದೊರೆಯಲು ಆರಂಭಿಸಿದೆ. ಸ್ವತಃ ಆಸ್ಟ್ರೇಲಿಯಾದ ಮಾಜಿ ನಾಯಕನೇ ಪಿಚ್ ವಿಚಾರವಾಗಿ ಆಸ್ಟ್ರೇಲಿಯಾದ ಮಾಧ್ಯಮಗಳ ವರ್ತನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ನಾಗ್ಪುರ ಪಿಚ್‌ಅನ್ನು ಭಾರತ ತನಗೆ ಪೂರಕವಾಗಿರುವಂತೆ ಸಿದ್ದಪಡಿಸಿಕೊಂಡಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಟೀಕೆಯನ್ನು ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಸಾಕಷ್ಟು ಕ್ರಿಕೆಟಿಗರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು ತವರಿನ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಆತಿಥೇಯ ತಂಡಕ್ಕೆ ಅನುಕೂಲಕರವಾಗುವಂತಾ ಪಿಚ್ ಸಿದ್ದಪಡಿಸುವುದು ಸಾಮಾನ್ಯ ಎಂದು ಉತ್ತರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನ ಸೊಗಲು ಇರುವುದೇ ಈ ರೀತಿಯ ಸವಾಲಿನ ಪಿಚ್‌ಗಳಲ್ಲಿ ಹೇಗೆ ಆಡುವುದು ಎಂಬುದರಲ್ಲಿ ಇದೆ ಎಂದು ತಿಳಿಸಿದ್ದಾರೆ.
ಹೀಗಿದ್ದರೂ ಮೊಂಡುವಾದವನ್ನು ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಭಾರತ ತನ್ನ ಆಟದ ಮೂಲಕವೇ ಉತ್ತರ ನೀಡಿದ್ದು ಆಸ್ಟ್ರೇಲಿಯಾ ದಾಂಡಿಗರ ಬ್ಯಾಟಿಂಗ್ ಕೌಶಲ್ಯವನ್ನು ಬಹಿರಂಗಪಡಿಸಿದೆ. ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಆಸಿಸ್ ದಾಂಡಿಗರ ಕಳಪೆ ಆಟದಿಂದಾಗಿ ಪಂದ್ಯವನ್ನು ಹೀನಾಯವಾಗಿ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಈ ಫಲಿತಾಂಶದ ಬಳಿಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಪ್ರತಿಕ್ರಿಯೆ ನೀಡಿದ್ದು ಆಸ್ಟ್ರೇಲಿಯಾ ಮಾಧ್ಯಮಗಳತ್ತ ಕಿಡಿಕಾರಿದ್ದಾರೆ.

ಪಿಚ್ ಬಗ್ಗೆ ಮಾಧ್ಯಮಗಳ ಆರೋಪ ಹೊಸದಲ್ಲ
ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ಬರೆದಿರುವ ಅಂಕಣದಲ್ಲಿ ಚಾಪೆಲ್ ಆಸ್ಟ್ರೇಲಿಯಾ ಮಾಧ್ಯಗಳ ಟೀಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಚರ್ಚೆಯಿಂದ ಆಸ್ಟ್ರೇಲಿಯಾ ಆಟಗಾರರು ದೂರ ಉಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ. "ಪಿಚ್ ಬಗ್ಗೆ ಮಾಧ್ಯಮಗಳು ಟೀಕೆ ವ್ಯಕ್ತಪಡಿಸುವುದು ಹೊಸ ವಿಚಾರವಲ್ಲ. ಈ ಕ್ಷುಲ್ಲಕ ವಿಚಾರವನ್ನು ಕಡೆಗಣಿಸುವ ಅಗತ್ಯವಿದೆ. ಇಲ್ಲವಾದರೆ ಇದು ಖಂಡಿತವಾಗಿಯೂ ಪ್ರವಾಸಿ ತಂಡದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಡಾಕ್ಟರಿಂಗ್ ಮಾಡಿದ ಪಿಚ್‌ಗಳು ಹೇಗೆ ವರ್ತಿಸುತ್ತವೆ ಎಂಬುದರ ವಿಚಾರವಾಗಿಯೇ ಹೆಚ್ಚಿನ ಒತ್ತು ನೀಡಲಾಗಿದೆ. ಈ ಪಿಚ್‌ಗಳಲ್ಲಿ ಎರಡು ತಂಡಗಳು ಕೂಡ ಆಡಬೇಕಾಗುತ್ತದೆ"ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು"ಎಂದಿದ್ದಾರೆ ಇಯಾನ್ ಚಾಪೆಲ್..

ಆಸ್ಟ್ರೇಲಿಯಾದ ದೌರ್ಬಲ್ಯ ಬಹಿರಂಗ
ಮುಂದುವರಿದು ಮಾತನಾಡಿದ ಅವರು "ಮೊದಲ ಪಂದ್ಯದಲ್ಲಿ ಟರ್ನಿಂಗ್ ಪಿಚ್‌ಗಳಲ್ಲಿ ಭಾರತದ ಉತ್ಕೃಷ್ಟಮಟ್ಟದ ಸ್ಪಿನ್ನರ್‌ಗಳ ವಿರುದ್ಧ ಆಸ್ಟ್ರೇಲಿಯಾದ ದೌರ್ಬಲ್ಯ ಬಹಿರಂಗವಾಗಿದೆ. ಈ ಹಿನ್ನಡೆಯಿಂದ ಆಟಗಾರು ತಮ್ಮ ಮಾನಸಿಕ ಸಾಮರ್ಥ್ಯವನ್ನು ದುರ್ಬಲಗೊಳಿಸದಂತೆ ಮಾಡಿಕೊಳ್ಳಲು ಸಾಧ್ಯವಾದರೆ ಅದರಿಮದಾಗಿ ಅವರು ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಆಸ್ಟ್ರೇಲಿಯಾ ತಂಡ ಬಹಳ ದೊಡ್ಡ ತೊಂದರೆಗೆ ಸಿಲುಕುತ್ತದೆ"ಎಂದಿದ್ದಾರೆ ಇಯಾನ್ ಚಾಪೆಲ್.

ಎರಡು ಇನ್ನಿಂಗ್ಸ್‌ಗಳಲ್ಲಿಯೂ ಆಸಿಸ್ ಕಳಪೆ ಆಟ
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರವಾಗಿ ಸ್ಟೀವ್ ಸ್ಮಿತ್ ಹಾಗೂ ಲ್ಯಾಬುಶೈನ್ ಜೋಡಿ ಒಂದು ಹಂತದಲಲ್ಇ ಉತ್ತಮ ಜೊತೆಯಾಟ ನೀಡಿದರಾದರೂ ಬಳಿಕ ಜಡೇಜಾ ದಾಳಿಕೆ ಕುಸಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಬಳಿಕ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರೋಹಿತ್ ಶರ್ಮಾ ಶತಕ ಗಳಿಸಿದರೆ ಕೆಳ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣದಿಂದಾಗಿ ಟೀಮ್ ಇಂಡಿಯಾ ಭರ್ಜರಿ 400 ರನ್‌ಗಳನ್ನು ಗಳಿಸಿದೆ. ಬಳಿಕ ಎರಡನೇ ಇನ್ನಿಂಗ್ಸ್ ಆರಂಬಿಸಿದ ಆಸಿಸ್ ಪಡೆ ಮೊದಲ ಇನ್ನಿಂಗ್ಸ್ ಗಿಂತಲೂ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿ ಕೇವಲ 91 ರನ್‌ಗಳಿಗೆ ಮೂರನೇ ದಿನದಾಟದಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications