Ind Vs Aus 1st Test: ರವೀಂದ್ರ ಜಡೇಜಾಗೆ ಆಘಾತ: ಪಂದ್ಯದ ಶುಲ್ಕದ 25 ಪ್ರತಿಶತ ದಂಡ, 1 ಡಿಮೆರಿಟ್ ಅಂಕ ನೀಡಿದ ಐಸಿಸಿ

ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 132 ರನ್‌ಗಳ ಜಯ ಸಾಧಿಸಿದೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಭಾರತ ತಂಡದ ಜಯದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಮೊದಲನೇ ಪಂದ್ಯದ ಗೆಲುವಿನ ಖುಷಿಯಲ್ಲಿದ್ದ ರವೀಂದ್ರ ಜಡೇಜಾಗೆ ಆಘಾತ ಎದುರಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರವೀಂದ್ರ ಜಡೇಜಾಗೆ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದ್ದು, ಒಂದು ಡಿಮೆರಿಟ್ ಅಂಕವನ್ನು ಸಹ ನೀಡಲಾಗಿದೆ.
ಟೆಸ್ಟ್ ಪಂದ್ಯದ ಮೊದಲನೇ ದಿನ ರವೀಂದ್ರ ಜಡೇಜಾ ಮೊಹಮ್ಮದ್ ಸಿರಾಜ್ ಅವರಿಂದ ಕ್ರೀಮ್ ಒಂದನ್ನು ತೆಗೆದುಕೊಂಡು ಎಡಗೈ ತೋರು ಬೆರಳಿಗೆ ಹಚ್ಚಿಕೊಂಡಿದ್ದರು. ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
ಈ ಘಟನೆಯನ್ನು ಮುಂದಿಟ್ಟುಕೊಂಡು ಆಸ್ಟ್ರೇಲಿಯಾ ಮಾಧ್ಯಮಗಳು ವಿವಾದ ಸೃಷ್ಟಿಸಲು ಯತ್ನಿಸಿದ್ದವು. ಆದರೆ, ವೈದ್ಯಕೀಯ ಕಾರಣಗಳಿಗಾಗಿ ಕ್ರೀಮ್ ಬಳಸಲಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದರೆ, ಅಂಪೈರ್ ಗಮನಕ್ಕೆ ತರದೆ ಜಡೇಜಾ ಕ್ರೀಮ್ ಹಚ್ಚಿಕೊಂಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಐಸಿಸಿ ಹೇಳಿದೆ, ಇದಕ್ಕಾಗಿ ಜಡೇಜಾಗೆ ದಂಡ ವಿಧಿಸಲಾಗಿದೆ.

ಅಂಪೈರ್ ಅನುಮತಿ ಪಡೆಯದೆ ಎಡವಟ್ಟು
"ಆಟದ ಉತ್ಸಾಹಕ್ಕೆ ವಿರುದ್ಧವಾದ ನಡವಳಿಕೆಯನ್ನು ಪ್ರದರ್ಶಿಸಲು ಸಂಬಂಧಿಸಿದ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ರವೀಂದ್ರ ಜಡೇಜಾ ಉಲ್ಲಂಘಿಸಿರುವುದು ಕಂಡುಬಂದಿದೆ" ಎಂದು ಐಸಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ.
"ರವೀಂದ್ರ ಜಡೇಜಾ ಬೌಲಿಂಗ್ ವೇಳೆ ಬೆರಳಿನ ಊತಕ್ಕಾಗಿ ಕ್ರೀಮ್ ಹಚ್ಚಿದ್ದಾರೆ ಎಂಧು ಭಾರತ ತಂಡದ ಆಡಳಿತ ಮಂಡಳಿ ವಿವರಣೆ ನೀಡಿದೆ. ಆದರೆ, ಇದನ್ನು ಆನ್-ಫೀಲ್ಡ್ ಅಂಪೈರ್‌ಗಳ ಅನುಮತಿ ಕೇಳದೆ ಮಾಡಲಾಗಿದೆ" ಎಂದು ಹೇಳಲಾಗಿದೆ.

ಹಲವು ಆಟಗಾರರ ಬೆಂಬಲ
"ವೈದ್ಯಕೀಯ ಉದ್ದೇಶಗಳಿಗಾಗಿ ಬೆರಳಿಗೆ ಕ್ರೀಮ್ ಅನ್ನು ಹಚ್ಚಲಾಗಿದೆ. ಕ್ರೀಮ್ ಅನ್ನು ಚೆಂಡಿಗೆ ಹಚ್ಚಿಲ್ಲ. ಚೆಂಡಿನ ಸ್ಥಿತಿಯನ್ನು ಬದಲಾವಣೆ ಮಾಡಿಲ್ಲ. ಇದು ಐಸಿಸಿ ಆಟದ ಷರತ್ತುಗಳ 41.3 ಅನ್ನು ಉಲ್ಲಂಘಿಸುತ್ತದೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮೈಕೆಲ್ ವಾನ್ ಮತ್ತು ಟಿಮ್ ಪೈನ್ ಅವರ ಹೇಳಿಕೆಗಳನ್ನು ಐಸಿಸಿ ತಿರಸ್ಕರಿಸಿದ. ರವೀಂದ್ರ ಜಡೇಜಾ ಚೆಂಡನ್ನು ವಿರೂಪಗೊಳಿಸಲು ಬಳಸಿದ್ದಾರೆ ಎಂದು ಆರೋಪಿಸಿದರು. ಹಲವು ತಜ್ಞರು, ಮಾಜಿ ಕ್ರಿಕೆಟಿಗರು ರವೀಂದ್ರ ಜಡೇಜಾಗೆ ಬೆಂಬಲ ನೀಡಿದರು. ಅದು ಔಷಧಿಯಾಗಿದ್ದು ನೋವಿಗೆ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಪ್ರತಿಪಾದಿಸಿದ್ದರು.

ಭಾರತದ ಗೆಲುವಿಗೆ ಅಮೂಲ್ಯ ಕೊಡುಗೆ
ಮೊದಲನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ರವೀಂದ್ರ ಜಡೇಜಾ ಆಸ್ಟ್ರೇಲಿಯಾಗೆ ಆಘಾತ ನೀಡಿದ್ದರು. ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 177 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್‌ನಲ್ಲಿ ಕೂಡ ಮಿಂಚಿದ್ದ ಸ್ಟಾರ್ ಆಲ್‌ರೌಂಡರ್ 70 ರನ್‌ಗಳಿಸುವ ಮೂಲಕ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 400 ರನ್ ಗಳಿಸಿ 233 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅಶ್ವಿನ್ 5 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 132 ರನ್‌ಗಳ ಸೋಲನುಭವಿಸಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications