Ind Vs Aus 1st Test: ಜಡೇಜಾ-ಅಶ್ವಿನ್‌ಗೆ ಬೌಲಿಂಗ್ ತರಬೇತಿ ಕೊಡಲು ವಿಶೇಷ ವ್ಯಕ್ತಿಗೆ ಆಹ್ವಾನ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಪಂದ್ಯ ಆರಂಭವಾಗಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಉಭಯ ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದೆ.
ನಾಗ್ಪುರ ಪಿಚ್ ಮೊದಲನೇ ದಿನದಿಂದಲೇ ಸ್ಪಿನ್‌ಗೆ ನೆರವು ನೀಡಲಿದೆ ಎನ್ನುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ. ಭಾರತ ತಂಡ ತವರಿನ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ನಾಲ್ವರು ಅಥವಾ ಮೂವರು ಸ್ಪಿನ್ನರ್ ಗಳೊಂದಿಗೆ ಆಡಲು ನಿರ್ಧರಿಸಿದೆ.
ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಪ್ರಮುಖ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್‌ಗೆ ವಿಶೇಷ ತರಬೇತಿ ನೀಡಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಿರ್ಧರಿಸಿದ್ದಾರೆ. ಇಬ್ಬರು ಅನುಭವಿ ಬೌಲರ್ ಗಳಿಗೆ ವಿಶೇಷ ತರಬೇತಿ ನೀಡಲು ಎನ್‌ಸಿಎ ಸ್ಪಿನ್ ಬೌಲಿಂಗ್ ಮುಖ್ಯಸ್ಥ ಸಾಯಿರಾಜ್ ಬಹುತುಲೆ ಅವರಿಗೆ ಆಹ್ವಾನ ನೀಡಿದ್ದಾರೆ.
ಕಳೆದ ವರ್ಷ ಭಾರತ ನ್ಯೂಜಿಲೆಂಡ್‌ಗೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಸಾಯಿರಾಜ್ ಬಹುತುಲೆ ಕೋಚಿಂಗ್ ತಂಡದಲ್ಲಿದ್ದರು. ಅವರು ಭಾರತಕ್ಕಾಗಿ 2 ಟೆಸ್ಟ್ ಮತ್ತು 8 ಏಕದಿನ ಪಂದ್ಯಗಳನ್ನಾಡಿದ್ದಾರೆ. 188 ಪ್ರಥಮ ದರ್ಜೆ ಪಂದ್ಯಗಳಲ್ಲಿ 630 ವಿಕೆಟ್ ಪಡೆದಿದ್ದು, 6176 ರನ್‌ಗಳನ್ನು ಗಳಿಸಿದ್ದಾರೆ.

ತರಬೇತಿ ವೇಳೆ ಸ್ಪಿನ್ ಬೌಲರ್ ಗಳ ದಂಡು
ಭಾರತದ ತರಬೇತಿ ಶಿಬಿರದಲ್ಲಿ ಹಲವು ಸ್ಪಿನ್ನರ್ ಗಳು ಕಾಣಿಸಿಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಸಾಯಿ ಕಿಶೋರ್, ರಾಹುಲ್ ಚಹಾರ್, ಜಯಂತ್ ಯಾದವ್ ಮತ್ತು ಪುಲ್ಕಿತ್ ನಾರಂಗ್ ನೆಟ್ಸ್‌ನಲ್ಲಿ ಭಾರತದ ಬ್ಯಾಟರ್ ಗಳಿಗೆ ಬೌಲಿಂಗ್ ಮಾಡುವ ಮೂಲಕ ನೆರವಾಗಿದ್ದಾರೆ.
"ಆಟಗಾರರು ಮತ್ತು ತರಬೇತುದಾರರಿಗೆ ಮಾನ್ಯತೆ ನೀಡಲು ಅಂತಾರಾಷ್ಟ್ರೀಯ ಸರಣಿಯ ಉತ್ತಮ ಅವಕಾಶವಾಗಿದೆ. ಭಾರತ ತಂಡದ ಎಲ್ಲಾ ವಿಭಾಗಗಳಲ್ಲಿ ಬೆಂಚ್ ಬಲವನ್ನು ಹೆಚ್ಚಿಸುವುದು ಅವರ ಉಪಾಯವಾಗಿದೆ" ಎಂದು ಹೇಳಲಾಗಿದೆ.

ವಿಶೇಷ ತರಬೇತಿ ಪಡೆದಿರುವ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಬ್ಯಾಟರ್ ಗಳು ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ವಿಶೇಷವಾದ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 5 ದಿನ ಅಭ್ಯಾಸ ಮಾಡಿದ ಅವರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಮಹೇಶ್ ಪಿಥಿಯಾ ಸೇರಿದಂತೆ ಭಾರತದ ಯುವ ಸ್ಪಿನ್ನರ್ ಗಳ ಮೊರೆ ಹೋಗಿದ್ದರು.
ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿರುವುದರಿಂದ ದ್ರಾವಿಡ್ ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಬೌಲಿಂಗ್ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವ ಉದ್ದೇಶವಿರಬಹುದು ಎನ್ನಲಾಗಿದೆ.

ಮೊದಲ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್ ಗಳು
ಮೊದಲನೇ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಮೂವರು ಸ್ಪಿನ್ನರ್ ಗಳು ಆಡಲಿದ್ದಾರೆ ಎಂದು ಉಪನಾಯಕ ಕೆಎಲ್ ರಾಹುಲ್ ಮಂಗಳವಾರ ತಿಳಿಸಿದ್ದರು. ಜಡೇಜಾ ಮತ್ತು ಅಶ್ವಿನ್ ಮೊದಲ ಆಯ್ಕೆಯಾಗಿದ್ದು ಉಳಿದ ಒಂದು ಸ್ಥಾನಕ್ಕೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ನಡುವೆ ಪೈಪೋಟಿ ನಡೆಯುತ್ತಿದೆ.
ನಾಗ್ಪುರ ಪಿಚ್ ಬಗ್ಗೆ ಅತೃಪ್ತಿ ಹೊಂದಿರುವ ಕೋಚ್ ರಾಹುಲ್ ದ್ರಾವಿಡ್ ಪಿಚ್ ಟೆಸ್ಟ್ ಆರಂಭಕ್ಕೆ ಮೂರು ದಿನಕ್ಕೆ ಮುನ್ನ ಪಿಚ್ ಬದಲಾವಣೆ ಮಾಡಲು ಕ್ಯುರೇಟರ್ ಗಳಿಗೆ ಒತ್ತಾಯಿಸಿದ್ದರು. ಅಧಿಕಾರಿಗಳು ಮತ್ತು ಕ್ಯುರೇಟರ್ ಗಳು ಪಿಚ್ ಬದಲಾವಣೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications