Ind vs Aus 1st Test: ರವೀಂದ್ರ ಜಡೇಜಾ ಅಮೋಘ ಕಮ್‌ಬ್ಯಾಕ್: 5 ವಿಕೆಟ್ ಪಡೆದು ಆಸಿಸ್‌ಗೆ ಆಘಾತ!

ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದರೂ ಅದರ ಲಾಭವನ್ನು ಬಳಸಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾದ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಪಡೆ 177 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ರವೀಂದ್ರ ಜಡೇಜಾ. ಸುದೀರ್ಘ ಕಾಲದ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಆಘಾತ ನೀಡಿದ್ದಾರೆ.
ಪಂದ್ಯದ ಮೊದಲ ಅವಧಿಯ ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೈನ್ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಮೊದಲ ಸೆಶನ್ ಪೂರ್ತಿ ಅದ್ಭುತವಾಗಿ ಆಡಿದ ಈ ಜೋಡಿ ಭಾರತಕ್ಕೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕೂಡ ಇದ್ದವು. ಭೋಜನ ವಿರಾಮದ ಬಳಿಕ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ರವೀಂದ್ರ ಜಡೇಜಾ ಮತ್ತೆ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದರು. ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಇಬ್ಬರು ಕೂಡ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡರು.

ಪ್ರಮುಖ ಜೊತೆಯಾಟ ಮುರಿದ ಜಡ್ಡು
ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಮೂರನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ 49 ರನ್‌ಗಳಿಸಿದ್ದ ಲ್ಯಾಬುಶೈನ್ ಅವರು ಜಡೇಜಾ ಎಸೆತದಲ್ಲಿ ವಿಕೆಟ್ ಕೀಪರ್ ಭರತ್ ಮಾಡಿದ ಅದ್ಭುತ ಸ್ಟಂಪಿಂಗ್‌ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತು. ಅದಾದ ಮುಂದಿನ ಎಸೆತದಲ್ಲಿಯೇ ರೆನ್ಶಾ ಎಲ್‌ಬಿಡ್ಲ್ಯು ಆಗುವ ಮೂಲಕ ತಮ್ಮ ವಿಕೆಟ್ ಕಳೆದುಕೊಂಡರು.

ಜಡೇಜಾ ಖಾತೆಗೆ ಐದು ವಿಕೆಟ್ ಗೊಂಚಲು
ಅದಾದ ಬಳಿಕ ಸ್ಟೀವ್ ಸ್ಮಿತ್ ಕೂಡ ರವೀಂದ್ರ ಜಡೇಜಾ ಬಲೆಗೆ ಬಿದ್ದರು. 107 ಎಸೆತಗಳಲ್ಲಿ 37 ರನ್‌ಗಳಿಸಿದ ಸ್ಮಿತ್ ಜಡೇಜಾಗೆ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ನಂತರ ಹ್ಯಾಂಡ್ಸ್‌ಕಾಂಬ್ ವಿಕೆಟ್ ಕೂಡ ಜಡೇಜಾ ಪಾಲಾಯಿತು. ಬಳಿಕ ಟಾಡ್ ಮರ್ಫಿ ಜಡೇಜಾ ಎಸೆತದಲ್ಲಿ ಎಲ್‌ಬಿಡ್ಲ್ಯು ಆಗಿ ಫೆವಿಲಿಯನ್‌ಗೆ ಸೇರಿಕೊಂಡರು. ಈ ಮೂಲಕ ಟೀಮ್ ಇಂಡಿಯಾದ ಆಲ್‌ರೌಂಡರ್ 5 ವಿಕೆಟ್‌ಗಳನ್ನು ಗಳಿಸಿ ಭಾರತ ತಂಡಕ್ಕೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

ಏಷ್ಯಾ ಕಪ್ ಬಳಿಕ ತಂಡದಿಂದ ಹೊರಗಿರುವ ಜಡೇಜಾ
ಕಳೆದ ವರ್ಷ ಆಗಸ್ಟ್ ಸಪ್ಟೆಂಬರ್ ತಿಂಗಳಿನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ರವೀಂದ್ರ ಜಡೇಜಾ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳ ಬಳಿಕ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದರು. ಬಳಿಕ ವಿಶ್ವಕಪ್‌ನಿಂದಲೂ ಹೊರಬಿದ್ದ ಜಡೇಜಾ ಸುದೀರ್ಘ ವಿಶ್ರಾಂತಿಯ ಬಳಿಕ ಇತ್ತೀಚೆಗಷ್ಟೇ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರವಾಗಿ ಒಂದು ಪಂದ್ಯ ಆಡಿದ್ದ ಜಡೇಜಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ಗೆ ತಾನು ಸಿದ್ಧ ಎಂದು ಘೋಷಿಸಿದ್ದರು. ಇದೀಗ ಭಾರತ ತಂಡದಲ್ಲಿಯೂ ಜಡ್ಡು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.

177 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್
ಇನ್ನು ಭಾರತದ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 177 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರವಾಗಿ ಯಾವ ಒಬ್ಬ ಆಟಗಾರ ಕೂಡ ಅರ್ಧ ಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ಲ್ಯಾಬುಶೈನ್ ಗಳಿಸಿದ 49 ರನ್ ತಂಡದ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಇನ್ನು ಭಾರತದ ಪರವಾಗಿ ರವೀಂದ್ರ ಜಡೇಜಾ 5 ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications