For Quick Alerts
ALLOW NOTIFICATIONS  
For Daily Alerts
 

IND vs AUS: ಜಸ್ಪ್ರೀತ್ ಬುಮ್ರಾ ಹೆಗಲಿಗೆ ಭಾರತ ಟೆಸ್ಟ್ ತಂಡದ ಜವಾಬ್ದಾರಿ; ಪ್ರತಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನವೆಂಬರ್ 22 ರಿಂದ ಆರಂಭವಾಗಲಿದೆ. ಪರ್ತ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ಟ್ರೋಫಿಯೊಂದಿಗೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಫೋಟೋಶೂಟ್ ಕೂಡ ನಡೆದಿದೆ.

ಗುರುವಾರ ಆಪ್ಟಸ್ ಸ್ಟೇಡಿಯಂನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯೊಂದಿಗೆ ಫೋಟೋಶೂಟ್ ಮುಗಿದ ಬಳಿದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ಸರಣಿಗೂ ಮುನ್ನ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯ ಕಠಿಣ ಸವಾಲಿಗೆ ಭಾರತ ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಮತ್ತು ಕೊಹ್ಲಿ ಬಗ್ಗೆಯೂ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

IND vs AUS 1st Test What did Jasprit Bumrah say at press conference

ಪರ್ತ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಬುಮ್ರಾ ಅವರಿಗೆ ನಾಯಕನಾಗಿ ಸಾಬೀತುಪಡಿಸಿಕೊಳ್ಳು ಈ ಸರಣಿ ಮಹತ್ವದಾಗಿದೆ. ಈ ಬಗ್ಗೆ ಮಾತನಾಡಿರುವ ಅವರು, 'ನೀವು ಗೆದ್ದಾಗ, ಶೂನ್ಯದಿಂದ ಪ್ರಾರಂಭಿಸುತ್ತೀರಿ. ಆದರೆ ನೀವು ಸೋತಾಗ ಅದೇ ನಡೆಯಲಿದೆ. ನಾವು ಭಾರತದಿಂದ ಯಾವುದೇ ಹೊರೆ ತಂದಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ನಾವು ಪಾಠ ಕಲಿತಿದ್ದೇವೆ. ಆದರೆ ಇಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ನಮ್ಮ ಫಲಿತಾಂಶಗಳು ವಿಭಿನ್ನವಾಗಿವೆ. ಟಾಸ್‌ ವೇಳೆಗೆ ಟೀಮ್ ಇಂಡಿಯಾ ಅಂತಿಮ ಹನ್ನೊಂದರ ಬಳಗವನ್ನು ಬಹಿರಂಗಪಡಿಸಲಿದೆ ಎಂದಿದ್ದಾರೆ.

ಕೊಹ್ಲಿ ಬಗ್ಗೆ ಹೇಳಿದ್ದೇನು?

ವಿರಾಟ್ ಕೊಹ್ಲಿ ನಮ್ಮ ತಂಡದ ನಾಯಕರಲ್ಲಿ ಒಬ್ಬರು ಎಂದು ಬುಮ್ರಾ ಹೇಳಿದ್ದಾರೆ. ಅವರ ನಾಯಕತ್ವದಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ. ಬ್ಯಾಟರ್‌ ಆಗಿ ವಿರಾಟ್‌ ಬಗ್ಗೆ ನಾನೇನೂ ಹೇಳುವುದಿಲ್ಲ. ಅವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ನಮ್ಮ ತಂಡದಲ್ಲಿ ಅತ್ಯಂತ ಪರಿಪೂರ್ಣರು. ಒಂದು ಅಥವಾ ಎರಡು ಸರಣಿಗಳು ಮೇಲಕ್ಕೆ ಅಥವಾ ಕೆಳಕ್ಕೆ ಹೋಗಬಹುದು. ಇದೀಗ ಅವರ ಆತ್ಮವಿಶ್ವಾಸ ನಂಬಲಸಾಧ್ಯ. ಹೆಚ್ಚಿಗೆ ಏನನ್ನೂ ಹೇಳುವ ಮೂಲಕ ಅದನ್ನು ಕೆಟ್ಟದಾಗಿ ಮಾಡಲು ನಾನು ಬಯಸುವುದಿಲ್ಲ ಎಂದು ಬುಮ್ರಾ ಕೊಹ್ಲಿ ಅನ್ನು ಹೊಗಳಿದಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ನಮ್ಮ ನಾಯಕ. ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ವೇಗದ ಬೌಲರ್‌ಗಳು ತಂಡದ ನಾಯಕರಾಗುವ ಬಗ್ಗೆ ಪ್ರತಿಕ್ರಿಯಿಸಿದ ಬುಮ್ರಾ, ವೇಗದ ಬೌಲರ್‌ಗಳು ತಂಡದ ನಾಯಕರಾಗಿರುವ ಹಲವಾರು ಉದಾಹರಣೆಗಳಿವೆ, ವೇಗದ ಬೌಲರ್‌ಗಳು ಬುದ್ಧಿವಂತರಾಗಿದ್ದಾರೆ. ಪ್ಯಾಟ್ ಯಶಸ್ವಿಯಾಗಿದ್ದಾರೆ. ಕಪಿಲ್ ದೇವ್ ಈ ಹಿಂದೆಯೂ ಯಶಸ್ವಿಯಾಗಿದ್ದಾರೆ. ಇದು ಹೊಸ ಟ್ರೆಂಟ್‌ನ ಆರಂಭವಾಗಿದೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

ನಾಯಕನಾಗುತ್ತಿರುವುದಕ್ಕೆ ಸಂತಸ

ಭಾರತ ಟೆಸ್ಟ್‌ ತಂಡದ ನಾಯಕನಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಬುಮ್ರಾ, 'ಟೆಸ್ಟ್ ಕ್ರಿಕೆಟ್ ಆಡುವುದಕ್ಕಿಂತ ಮತ್ತು ತಂಡವನ್ನು ಮುನ್ನಡೆಸುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ಈ ಸಾಧನೆಯನ್ನು ಕೆಲವೇ ಆಟಗಗಾರರು ಭಾರತೀಯ ಕ್ರಿಕೆಟ್‌ನಲ್ಲಿ ಮಾಡಿದ್ದಾರೆ. ಇದು ನಾನು ಬಾಲ್ಯದಿಂದಲೂ ಆಡಲು ಬಯಸಿದ ಕ್ರಿಕೆಟ್ ಸ್ವರೂಪವಾಗಿದೆ. ನಾನು ಅದನ್ನು ಸ್ಥಾನವಾಗಿ ನೋಡುವುದಿಲ್ಲ. ಜವಾಬ್ದಾರಿಯನ್ನು ಇಷ್ಟಪಡುತ್ತೇನೆ. ನನಗೆ ಬಾಲ್ಯದಿಂದಲೂ ಕಷ್ಟಪಟ್ಟು ಕೆಲಸ ಮಾಡಬೇಕೆಂಬ ಆಸೆ ಇತ್ತು. ಇದು ನನಗೆ ಹೊಸ ಸವಾಲು ಎಂದು ಬುಮ್ರಾ ಪರ್ತ್ ಟೆಸ್ಟ್‌ ಪಂದ್ಯಕ್ಕೂ ಮುನ್ನ ಮಾತನಾಡಿದ್ದಾರೆ.

Story first published: Thursday, November 21, 2024, 13:05 [IST]
Other articles published on Nov 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+