Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yashasvi Jaiswal: ಯಶಸ್ವಿ ಜೈಸ್ವಾಲ್ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆಯ ರಹಸ್ಯವೇನು?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ ಗೆಲುವಿನೊಂದಿಗೆ ಆರಂಭಿಸಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಭಾರತ ಸೋಲಿಸಿದೆ. ಟೀಮ್ ಇಂಡಿಯಾದ ಗೆಲುವಿನಲ್ಲಿ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಕೊಡುಗೆಯೂ ದೊಡ್ಡದಿದೆ. ಅವರು ತಮ್ಮ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾಕ್ಕೆ ನಡುಕ ಹುಟ್ಟಿಸಿದೆ.

ಪರ್ತ್ ಟೆಸ್ಟ್ ಪಂದ್ಯದಲ್ಲಿ ತಾಳ್ಮೆಯುವ ಆಟವಾಡಿದ ಜೈಸ್ವಾಲ್ ಭರ್ಜರಿ ಶತಕ ಬಾರಿಸಿದರು. ಈ ವೇಳೆ ಶತಕ ಪೂರೈಸಿದ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಮಾಡಿದರು. ಜೈಸ್ವಾಲ್ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೀಗ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆಯನ್ನು ಮಾಡಿದ್ದೇಕೆ ಎಂಬುದರ ಬಗ್ಗೆ ಸ್ವತಃ ಜೈಸ್ವಾಲ್ ಕಾರಣ ಕೊಟ್ಟಿದ್ದಾರೆ.

IND vs AUS 1st Test yashasvi jaiswals celebration of flying kiss secret

ಫ್ಲೈಯಿಂಗ್ ಕಿಸ್ ಆಚರಣೆ

ಪರ್ತ್‌ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳೊಂದಿಗೆ ಜೈಸ್ವಾಲ್ ಮಾತನಾಡದ್ದಾರೆ. ಈ ವೇಳೆ ಶತಕ ಬಾರಿಸಿ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಮಾಡಿದ್ದೇಕೆ ಎಂದು ಹೇಳಿದ್ದಾರೆ. 'ನಾನು ವಿಭಿನ್ನ ರೀತಿಯಲ್ಲಿ ಶತಕವನ್ನು ಪೂರ್ಣಗೊಳಿಸಿದೆ. ಇದಕ್ಕೋಸ್ಕರ ಮನಸಿನಲ್ಲಿ ಇನ್ನೇನೋ ಯೋಚಿಸ್ತಾ ಇದ್ದೆ ಮತ್ತೇನೋ ಆಯಿತು. ಶತಕ ಗಳಿಸಿದ ವೇಳೆ ಏನು ಮಾಡಬೇಕೆಂದು ಯೋಚಿಸಿದೆ, ನಂತರ ಈ ಕ್ಷಣವನ್ನು ಆನಂದಿಸೋಣ ಎಂದು ಯೋಚಿಸಿದೆ. ಹೀಗಾಗಿ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಮಾಡಿದ್ದು, ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಾನು ಮುತ್ತು ನೀಡಿದ್ದೇನೆ. ಈ ಮೂಲಕ ಅವರನ್ನು ತಲುಪಲು ಬಯಸಿದ್ದೇನೆ ಎಂದಿದ್ದಾರೆ.

ಸಿಡಿದೆದ್ದ ಜೈಸ್ವಾಲ್

ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ವಿಕೆಟ್‌ ಕಳೆದುಕೊಂಡಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ತಮ್ಮ ಲಯಕ್ಕೆ ಮರಳಿದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಅರ್ಧಶತಕ ಗಳಿಸಿ ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ರನ್‌ಗಳ ಸುರಿಮಳೆ ಮುಂದುವರಿಸಿದ ಜೈಸ್ವಾಲ್ 150ರ ಗಡಿ ದಾಟಿದರು. ಆದರೆ, ಮತ್ತೊಂದು ದ್ವಿಶತಕದ ಹೊಸ್ತಿಲಲ್ಲಿದ್ದ ಜೈಸ್ವಾಲ್ 161 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು.

Story first published: Tuesday, November 26, 2024, 20:28 [IST]
Other articles published on Nov 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+