ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

ಸಿಡ್ನಿ: ಕೊರೊನಾವೈರಸ್‌ನಿಂದಾಗಿ ದೀರ್ಘಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದ ಟೀಮ್ ಇಂಡಿಯಾ ನವೆಂಬರ್ 27ರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಸರಣಿ ಆಡಲಿದೆ. ಏಕದಿನ ಸರಣಿಯೊಂದಿಗೆ ಇತ್ತಂಡಗಳ ಸರಣಿ ಆರಂಭಗೊಳ್ಳಲಿದ್ದು, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ಒಡಿಐ ಆರಂಭಗೊಳ್ಳಲಿದೆ. ಅದಾಗಿ 3 ಪಂದ್ಯಗಳ ಟಿ20ಐ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಗಳು ನಡೆಯಲಿವೆ.
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ನವೆಂಬರ್ 13ರಂದು ಆಸ್ಟ್ರೇಲಿಯಾಕ್ಕೆ ತಲುಪಿತ್ತು. ತಂಡಕ್ಕೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿತ್ತು. ನವೆಂಬರ್ 15ರ ಭಾನುವಾರ ಭಾರತ ಅಂತರ್ ತಂಡಗಳ ಮಧ್ಯೆ ಅಭ್ಯಾಸ ಪಂದ್ಯ ನಡೆದಿತ್ತು.
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿಯ ತಂಡ ಮೇಲುಗೈ ಸಾಧಿಸಿತ್ತು. ಅಸಲಿ ಹಣಾಹಣಿ ಶುಕ್ರವಾರ ಚಾಲನೆಗೊಳ್ಳಲಿದೆ.

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್
ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಕರೆಯಲಾಗುವ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಟೆಸ್ಟ್ ಸರಣಿಯ ಆರಂಭಿಕ ಪಂದ್ಯ ಡೇ-ನೈಟ್ ಟೆಸ್ಟ್ ಆಗಿರಲಿದೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ ಕೂಡ. ಈ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ 2021ರಲ್ಲಿ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ vs ಆಸ್ಟ್ರೇಲಿಯಾ ಸಂಪೂರ್ಣ ವೇಳಾಪಟ್ಟಿ
* 1ನೇ ಏಕದಿನ: ಎಸ್‌ಸಿಜಿ, ಸಿಡ್ನಿ | ನವೆಂಬರ್ 27 | 9:10 AM IST
* 2ನೇ ಏಕದಿನ: ಎಸ್‌ಸಿಜಿ, ಸಿಡ್ನಿ | ನವೆಂಬರ್ 29 | 9:10 AM IST
* 3ನೇ ಏಕದಿನ: ಮನುಕಾ ಓವಲ್ | ಕ್ಯಾನ್ಬೆರಾ, ಡಿಸೆಂಬರ್ 2 | 9:10 AM IST
* 1ನೇ ಟಿ20ಐ: ಮನುಕಾ ಓವಲ್ | ಕ್ಯಾನ್ಬೆರಾ, ಡಿಸೆಂಬರ್ 4 | 1:40 PM IST
* 2ನೇ ಟಿ20ಐ: ಎಸ್‌ಸಿಜಿ, ಸಿಡ್ನಿ | ಡಿಸೆಂಬರ್ 6 | 1:40 PM IST
* 3ನೇ ಟಿ20ಐ: ಎಸ್‌ಸಿಜಿ, ಸಿಡ್ನಿ | ಡಿಸೆಂಬರ್ 8 | 1:40 PM IST
* 1ನೇ ಟೆಸ್ಟ್: ಅಡಿಲೇಡ್ ಓವಲ್, ಅಡಿಲೇಡ್ | ಡಿಸೆಂಬರ್ 17 - ಡಿಸೆಂಬರ್ 21 | 9:30 AM IST
* 2ನೇ ಟೆಸ್ಟ್: ಎಂಸಿಜಿ, ಮೆಲ್ಬೋರ್ನ್ | ಡಿಸೆಂಬರ್ 26 - ಡಿಸೆಂಬರ್ 30 | 5:00 AM IST
* 3ನೇ ಟೆಸ್ಟ್: ಎಸ್‌ಸಿಜಿ, ಸಿಡ್ನಿ | ಜನವರಿ 7 - ಜನವರಿ 11 | 5:00 AM IST
* 4ನೇ ಟೆಸ್ಟ್: ಗಬ್ಬಾ, ಬ್ರಿಸ್ಬೇನ್ | ಜನವರಿ 15 - ಜನವರಿ 19 | 5:30 AM IST

ಯಾವೆಲ್ಲ ಚಾನೆಲ್‌ಗಳಲ್ಲಿ ನೇರಪ್ರಸಾರ?
ಭಾರತ vs ಆಸ್ಟ್ರೇಲಿಯಾ ನಡುವಿನ ಸರಣಿಯ ಪ್ರಸಾರದ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ಸ್ (ಎಸ್‌ಪಿಎಸ್‌ಎನ್) ಪಡೆದುಕೊಂಡಿದೆ. ಹೀಗಾಗಿ ಇತ್ತಂಡಗಳ ಪಂದ್ಯಗಳು ಸೋನಿ ಸಿಕ್ಸ್, ಸೋನಿ ಟೆನ್ 1, ಸೋನಿ ಟೆನ್ 3 ಚಾನೆಲ್‌ಗಳಲ್ಲಿ ನೇರ ಪ್ರಸಾರ ಸಿಗಲಿದೆ. ಪ್ರೀಮಿಯಮ್ ಸಬ್ಸ್ಕ್ರಿಪ್ಶನ್ ಇದ್ದರೆ ಸೋನಿ Livನಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದು.

ಉಚಿತವಾಗಿ ನೋಡೋದು ಹೇಗೆ?
ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಅಥವಾ ಸೋನಿ Liv ಉಚಿತವಲ್ಲ. ಅವುಗಳಿಗೆ ನೀವು ಚಂದಾದಾರಿಕೆ ಮಾಡಿಸಿಕೊಂಡಿರಬೇಕಿರುತ್ತೆ. ಆದರೆ ಡಿಡಿ ಸ್ಪೋರ್ಟ್ಸ್ ನಿಮಗೆ ಉಚಿತವಾಗಿರುತ್ತದೆ. ಹೀಗಾಗಿ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಟಿ20ಐ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಉಚಿತವಾಗಿ ವೀಕ್ಷಿಸಬಹುದು. ಡಿಡಿ ನ್ಯಾಷನಲ್‌ನಲ್ಲೂ ಭಾರತ-ಆಸೀಸ್ ಪಂದ್ಯಗಳ ಉಚಿತ ನೀವು ನೇರ ಪ್ರಸಾರ ನೋಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications