For Quick Alerts
ALLOW NOTIFICATIONS  
For Daily Alerts
 

IND vs AUS 2nd ODI: ಭಾರತದ ಆಲ್‌ರೌಂಡ್ ಪ್ರದರ್ಶನದ ಮುಂದೆ ಮಂಕಾದ ಆಸ್ಟ್ರೇಲಿಯಾ ಪಡೆ; ಸರಣಿ ಗೆದ್ದ ಮೆನ್ ಇನ್ ಬ್ಲ್ಯೂ

ಭಾನುವಾರ, ಸೆಪ್ಟೆಂಬರ್ 24ರಂದು ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಡಿಎಲ್ಎಸ್ ವಿಧಾನದಡಿ 99 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಇನ್ನೂ ಒಂದು ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 399 ರನ್‌ ಕಲೆಹಾಕುತು.

IND vs AUS 2nd ODI: India Beat Australia By 99 Runs And Clinched The Series By 2-0

400 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಪಡಿಸಿತು. ಈ ವೇಳೆ ಡಕ್ವರ್ಥ್ ಲೂಯಿಸ್ ವಿಧಾನದಡಿ ಪರಿಷ್ಕೃತ ಗುರಿ ಪಡೆದ ಆಸ್ಟ್ರೇಲಿಯಾ 33 ಓವರ್‌ಗಳಲ್ಲಿ 317 ರನ್ ಗಳಿಸುವ ಟಾರ್ಗೆಟ್ ಪಡೆದುಕೊಂಡಿತು.

ಆದರೆ, ಪ್ರವಾಸಿ ಆಸ್ಟ್ರೇಲಿಯಾ ತಂಡ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡು 99 ರನ್‌ಗಳ ಸೋಲು ಕಂಡಿತು ಮತ್ತು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕಳೆದುಕೊಂಡಿತು.

ಗುರಿ ಬೆನ್ನಟ್ಟುವ ವೇಳೆ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿತು. ಪ್ರಸಿದ್ಧ್ ಕೃಷ್ಣ ಎಸೆದ ಎರಡನೇ ಓವರ್‌ನಲ್ಲಿ ಮ್ಯಾಥ್ಯೂ ಶಾರ್ಟ್ ಮತ್ತು ನಾಯಕ ಸ್ಟೀವನ್ ಸ್ಮಿತ್ ಅವರು ಸತತವಾಗಿ ಸೊನ್ನೆಗೆ ಔಟಾದರು.

IND vs AUS 2nd ODI: India Beat Australia By 99 Runs And Clinched The Series By 2-0

ಆ ಬಳಿಕ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಮೂರನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ನಿರ್ಮಿಸಿದರು. ತಂಡದ ಮೊತ್ತ 89 ರನ್‌ಗಳಾಗಿದ್ದ ವೇಳೆ 27 ರನ್ ಗಳಿಸಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಔಟಾದರು.

ಇನ್ನು 39 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 53 ರನ್ ಬಾರಿಸಿ ಅಪಾಯಕಾರಿಯಾಗಿದ್ದ ಡೇವಿಡ್ ವಾರ್ನರ್ ಅವರನ್ನು ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.

ನಂತರ ಬಂದ ಜೋಶ್ ಇಂಗ್ಲಿಸ್ 6 ರನ್, ಅಲೆಕ್ಸ್ ಕ್ಯಾರಿ 14 ರನ್, ಕ್ಯಾಮೆರಾನ್ ಗ್ರೀನ್ 19 ರನ್, ಆಡಮ್ ಝಂಪಾ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಸೀನ್ ಅಬಾಟ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಮೂಲಕ 54 ರನ್ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಜೋಶ್ ಹೇಝಲ್‌ವುಡ್ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 23 ರನ್ ಗಳಿಸಿದರು.

IND vs AUS 2nd ODI: India Beat Australia By 99 Runs And Clinched The Series By 2-0

ಭಾರತದ ಪರ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ 7 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 5.2 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪ್ರಸಿದ್ಧ್ ಕೃಷ್ಣ 6 ಓವರ್‌ಗಳಲ್ಲಿ 56 ರನ್ ನೀಡಿ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 6 ಓವರ್‌ಗಳಲ್ಲಿ 39 ರನ್ ನೀಡಿ 1 ವಿಕೆಟ್ ಪಡೆದರು.

ಭಾರತದ ಪರ ಬ್ಯಾಟಿಂಗ್‌ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಗಾಯದಿಂದ ಚೇತರಿಸಿಕೊಂಡು ಪುನರಾಗಮನ ಮಾಡಿದ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಮೊದಲ ಓವರ್‌ನಿಂದಲೇ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಿದರು. ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳು ಬ್ಯಾಟ್ ಮೂಲಕ ರನ್ ಕೊಡುಗೆ ನೀಡಿದರು.

ಆರಂಭಿಕರಾಗಿ ಬಂದ ಶುಭ್ಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಮೊದಲ ವಿಕೆಟ್‌ಗೆ 16 ರನ್ ಗಳಿಸಿದರು. 3.4 ಓವರ್‌ಗಳಲ್ಲಿ 16 ರನ್‌ಗಳಾಗಿದ್ದಾಗ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ಅವರು 8 ರನ್ ಗಳಿಸಿ ಜೋಶ್ ಹೇಝಲ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಔಟಾದರು.

ಅನಂತರ ಜೊತೆಯಾದ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ಎರಡನೇ ವಿಕೆಟ್‌ಗೆ ಬರೋಬ್ಬರಿ 200 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ನಡುವೆ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಬೆವರಿಳಿಸಿದರು ಮತ್ತು ಮೈದಾನದ ಮೂಲೆಮೂಲೆಗೂ ಚೆಂಡು ಕಳುಹಿಸಿದರು.

ಶ್ರೇಯಸ್ ಅಯ್ಯರ್ 3ನೇ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸಿ, ಗಾಯದಿಂದ ಚೇತರಿಸಿಕೊಂಡು ಅತ್ಯುತ್ತಮವಾಗಿ ಪುನರಾಗಮನ ಮಾಡಿದರು. ಸೀನ್ ಅಬಾಟ್ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 90 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 105 ರನ್ ಬಾರಿಸಿದರು.

ಇನ್ನು ಆರಂಭಿಕ ಶುಭ್ಮನ್ ಗಿಲ್ ಅವರು 97 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 104 ರನ್ ಬಾರಿಸಿ ಕ್ಯಾಮೆರಾನ್ ಗ್ರೀನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಹಿಡಿದ ಕ್ಯಾಚ್‌ಗೆ ಔಟಾದರು.

ಶುಭ್ಮನ್ ಗಿಲ್ ಅವರು 6ನೇ ಏಕದಿನ ಅಂತಾರಾಷ್ಟ್ರೀಯ ಶತಕ ಗಳಿಸಿದರು. ಅಲ್ಲದೆ, 2023ರಲ್ಲೇ 5 ಶತಕಗಳು ಬಂದಿವೆ ಎಂಬುದು ಗಮನಾರ್ಹ ಸಂಗತಿ.

ನಂತರ ನಾಯಕ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ವೇಗವಾಗಿ ರನ್ ಗಳಿಸಲು ನೋಡಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆ ಬಳಿಕ ಜೊತೆಯಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೆಎಲ್ ರಾಹುಲ್ 38 ಎಸೆಗಳನ್ನು ಎದುರಿಸಿ 3 ಬೌಂಡರಿ ಮತ್ತು 3 ಬೃಹತ್ ಸಿಕ್ಸರ್‌ಗಳ ನೆರವಿನಿಂದ 52 ರನ್ ಬಾರಿಸಿ ಔಟಾದರು.

ಇನ್ನು ಕೊನೆಯಲ್ಲಿ ಭಾರತದ ಮಿ.360 ಡಿಗ್ರಿ ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಯಾದವ್ ಅಕ್ಷರಶಃ ರುದ್ರಾವತಾರ ತಾಳಿದರು. ಕ್ಯಾಮೆರಾನ್ ಗ್ರೀನ್ ಅವರ ಓವರ್‌ನಲ್ಲಿ ಸತತ 4 ಸಿಕ್ಸರ್ ಬಾರಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಕೇವಲ 37 ಎಸೆಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 72 ಚಚ್ಚಿದರು. ರವೀಂದ್ರ ಜಡೇಜಾ ಕೂಡ 9 ಎಸೆತಗಳಲ್ಲಿ 13 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲ ಬೌಲರ್‌ಗಳು ದುಬಾರಿಯಾದರು. ಸ್ಪೆನ್ಸರ್ ಜಾನ್ಸನ್ 8 ಓವರ್‌ಗಳಲ್ಲಿ 61 ರನ್ ನೀಡಿ ವಿಕೆಟ್ ರಹಿತರಾದರೆ, ಜೋಶ್ ಹೇಝಲ್‌ವುಡ್ 10 ಓವರ್‌ಗಳಲ್ಲಿ 62 ರನ್ ನೀಡಿ 1 ವಿಕೆಟ್ ಪಡೆದರು. ಸೀನ್ ಅಬಾಟ್ 10 ಓವರ್‌ಗಳಲ್ಲಿ 91 ರನ್ ನೀಡಿ 1 ವಿಕೆಟ್ ಪಡೆದರು.

ಕ್ಯಾಮೆರಾನ್ ಗ್ರೀನ್ 10 ಓವರ್‌ಗಳಲ್ಲಿ ಬರೋಬ್ಬರಿ 103 ರನ್ ನೀಡಿ 2 ವಿಕೆಟ್ ಪಡೆದು ಅತ್ಯಂತ ದುಬಾರಿಯೆನಿಸಿದರು. ಆಡಮ್ ಝಂಪಾ 10 ಓವರ್‌ಗಳಲ್ಲಿ 67 ರನ್ ನೀಡಿ 1 ವಿಕೆಟ್ ಮತ್ತು ಮ್ಯಾಥ್ಯೂ ಶಾರ್ಟ್ 2 ಓವರ್‌ಗಳಲ್ಲಿ 15 ರನ್ ನೀಡಿ ವಿಕೆಟ್ ರಹಿತರಾದರು.

Story first published: Sunday, September 24, 2023, 22:16 [IST]
Other articles published on Sep 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+