Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND Vs AUS 2nd ODI: ವಿಶಾಖಪಟ್ಟಣ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ!

IND VS AUS 2nd ODI: The India Vs Australia 2nd ODI In Vizag Could Be Spoiled By Rain

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಎರಡನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಮಾರ್ಚ್ 19ರಂದು ಭಾನುವಾರ ವಿಶಾಖಪಟ್ಟಣದ ರಾಜಶೇಖರರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

ಮಾರ್ಚ್ 19ರಂದು ವಿಶಾಖಪಟ್ಟಣದಲ್ಲಿ ಮಳೆ ಬೀಳುವ ನಿರೀಕ್ಷೆ ಮಾಡಲಾಗಿದೆ. ಶನಿವಾರ ಕೂಡ ಮಳೆಯಾಗಿದ್ದು ಪಿಚ್‌ ಅನ್ನು ಮುಚ್ಚಲಾಗಿತ್ತು. ಗುಡುಗು ಸಹಿತ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. 31 ರಿಂದ 51 ಪ್ರತಿಶತ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ 5 ಗಂಟೆಗೆ ಮಳೆ ಆರಂಭವಾಗುವ ಸಾಧ್ಯತೆ ಇದೆ.

ಹವಾಮಾನ ವರದಿಯ ಪ್ರಕಾರ ಮಾರ್ಚ್ 19ರಂದು ವಿಶಾಖಪಟ್ಟಣದ ತಾಪಮಾನ ಹಗಲಿನಲ್ಲಿ 26 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಿಗ್ಗೆ ಮಳೆಯಾಗುವ ಸಾಧ್ಯತೆ 80 ಪ್ರತಿಶತ ಇದ್ದರೆ, ರಾತ್ರಿ ಮಳೆಯಾಗುವ ಸಾಧ್ಯತೆ 49 ಪ್ರತಿಶತ ಇರುತ್ತದೆ. ಹಗಲು ಮತ್ತು ರಾತ್ರಿಯಲ್ಲಿ ತೇವಾಂಶವು 94 ಪ್ರತಿಶತ ಇರುತ್ತದೆ.

ಒಂದು ವೇಳೆ ಸಾಧಾರಣ ಮಳೆಯಾದರು ಕೂಡ 50 ಓವರ್ ಗಳ ಪಂದ್ಯವನ್ನು ನೋಡುವುದು ಅನುಮಾನವಾಗಲಿದೆ. ಡಿಎಲ್‌ಎಸ್ ನಿಯಮದ ಪ್ರಕಾರ ಕೂಡ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

IND VS AUS 2nd ODI: The India Vs Australia 2nd ODI In Vizag Could Be Spoiled By Rain

ಸರಣಿ ಗೆಲ್ಲುವ ವಿಶ್ವಾಸದಲ್ಲಿ ಭಾರತ

ವಾಂಖೆಡೆ ಅಂಗಳದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಪಂದ್ಯದಲ್ಲಿ ಗೆಲುವ ಸಾಧಿಸುವ ಮೂಲಕ ಸರಣಿಯನ್ನು ಗೆಲ್ಲುವ ಉತ್ಸಾಹದಲ್ಲಿದೆ. ಕೆಎಲ್ ರಾಹುಲ್ ಫಾರ್ಮ್‌ಗೆ ಬಂದಿರುವದು, ಎರಡನೇ ಏಕದಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಭಾರತ ಇಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ, ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿದ್ದರೆ ಮತ್ತೊಂದು ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಕೊನೆಯಾಗಿತ್ತು. 2019ರಲ್ಲಿ ಭಾರತ ಇಲ್ಲಿ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು.

IND VS AUS 2nd ODI: The India Vs Australia 2nd ODI In Vizag Could Be Spoiled By Rain

ಮಧ್ಯಾಹ್ನ 1.30ಕ್ಕೆ ಆರಂಭ

ಕೊನೆಯ ಬಾರಿ ಭಾರತ ತಂಡ ಇಲ್ಲಿ ಆಡಿದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿ ಮಿಂಚಿದ್ದರು. ಭಾನುವಾರದ ಪಂದ್ಯದಲ್ಲಿ ಕೂಡ ಇವರಿಬ್ಬರಿಂದ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಲಾಗಿದೆ. ಸರಣಿಯ ಕೊನೆಯ ಒಂದ್ಯ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮಾರ್ಚ್ 22ರಂದು ನಡೆಯಲಿದೆ.

ಶನಿವಾರ್ ಪಿಚ್‌ ಅನ್ನು ಮುಚ್ಚಲಾಗಿದ್ದರಿಂದ ಪಿಚ್ ಹೇಗೆ ವರ್ತಿಸಲಿದೆ ಎಂದು ಹೇಳುವುದು ಕಷ್ಟವಾಗಲಿದೆ. ಇಲ್ಲಿ ನಡೆದ ಪಂದ್ಯಗಳನ್ನು ನೋಡುವುದಾದರೆ ಪಿಚ್‌ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮುಖ್ಯಪಾತ್ರ ವಹಿಸಲಿದ್ದಾರೆ.

ಭಾನುವಾರ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದ್ದು, ಡಿಸ್ನಿ + ಹಾಟ್‌ಸ್ಟಾರ್ ನಲ್ಲಿ ಪಂದ್ಯದ ನೇರಪ್ರಾಸರವನ್ನು ನೋಡಬಹುದಾಗಿದೆ. ಟಿವಿಯಲ್ಲಿ ವೀಕ್ಷಿಸುವವರು ಸ್ಟಾರ್‍ ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.

Story first published: Saturday, March 18, 2023, 23:35 [IST]
Other articles published on Mar 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+