For Quick Alerts
ALLOW NOTIFICATIONS  
For Daily Alerts
 

Ind vs Aus Test: ಸಿರಾಜ್ ಬೌನ್ಸರ್ ಎಫೆಕ್ಟ್: ಟೆಸ್ಟ್ ಸರಣಿಯಿಂದಲೇ ಹೊರಬಿದ್ದ ವಾರ್ನರ್

IND vs AUS 2nd Test : David Warner Has Been Ruled Out Of The Border-Gavaskar Trophy Series

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದ ಡೇವಿಡ್ ವಾರ್ನರ್ ಈಗ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಅವರು ಇಡೀ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ವಾರ್ನರ್ ಗಾಯಗೊಂಡಿದ್ದರು. ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಬೌನ್ಸರ್ ಗಳು ಅವರ ತಲೆಗೆ ಬಡಿದಿದ್ದವು. ತೋಳಿಗೆ ಚೆಂಡು ಬಿದ್ದ ನಂತರ ನೋವಿನಿಂದ ನರಳಿದ್ದರು. ಫೀಲ್ಡ್‌ನಲ್ಲೇ ಅವರಿಗೆ ವೈದ್ಯಕೀರ ಆರೈಕೆ ನೀಡಲಾಗಿತ್ತು.

ಮೊದಲನೇ ಇನ್ನಿಂಗ್ಸ್ ಬಳಿಕ ವಾರ್ನರ್ ಭಾರತದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ವೇಳೆ ಫೀಲ್ಡಿಂಗ್‌ಗೆ ಬಂದಿರಲಿಲ್ಲ. ಅವರ ಬದಲಾಗಿ ಮ್ಯಾಟ್‌ ರೆನ್‌ಶಾರನ್ನು ಕನ್‌ಕ್ಯುಶನ್ ಬದಲೀ ಆಟಗಾರನಾಗಿ ಹೆಸರಿಸಲಾಗಿತ್ತು. ರೆನ್‌ಶಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕೂಡ ಮಾಡಲಿದ್ದಾರೆ.

ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಅವರನ್ನು ಟೆಸ್ಟ್ ಸರಣಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ತಲೆ ಮತ್ತು ತೋಳಿಗೆ ಪೆಟ್ಟಾಗಿರುವುದರಿಂದ ಅವರು ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಲಾಗಿದೆ. ಏಕದಿನ ಸರಣಿಗೆ ಅವರು ಮರಳುತ್ತಾರ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

IND vs AUS 2nd Test : David Warner Has Been Ruled Out Of The Border-Gavaskar Trophy Series

ಫಾರ್ಮ್ ಕಳೆದುಕೊಂಡಿರುವ ವಾರ್ನರ್

ಜನವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಮಿಂಚಿದ್ದ ಡೇವಿಡ್ ವಾರ್ನರ್ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿ ಔಟಾಗಿದ್ದರೆ. ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ದೆಹಲಿಯ ಎರಡನೇ ಟೆಸ್ಟ್‌ಗೆ ಮುನ್ನ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನುವಂತಾಗಿತ್ತು. ಆದರೆ, ಅನುಭವಿ ಬ್ಯಾಟರ್ ಮತ್ತೊಂದು ಅವಕಾಶ ಪಡೆಯುವಲ್ಲಿ ಸಫಲರಾಗಿದ್ದರು.

ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಅವರು ಕಳಪೆ ಫಾರ್ಮ್‌ ಮುಂದುವರೆಸಿದ್ದರು. 44 ಎಸೆತಗಳನ್ನು ಎದುರಿಸಿದ ಅವರು 15 ರನ್‌ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದರು.

IND vs AUS 2nd Test : David Warner Has Been Ruled Out Of The Border-Gavaskar Trophy Series

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂಕಷ್ಟ

ಟೆಸ್ಟ್ ಸರಣಿಯಲ್ಲಿ ವಾರ್ನರ್ ವಿಫಲರಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಲೆನೋವು ಶುರುವಾಗಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡಕ್ಕೆ ನಾಯಕರಾಗುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯ ವಾರ್ನರ್ ಕಳಪೆ ಫಾರ್ಮ್‌ನಲ್ಲಿರುವುದು ಮಾತ್ರವಲ್ಲದೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಫ್ರಾಂಚೈಸಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Story first published: Sunday, February 19, 2023, 5:30 [IST]
Other articles published on Feb 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+