Ind vs Aus 2nd Test: ಆ ಇಬ್ಬರ ಜೊತೆಯಾಟವೇ ಪಂದ್ಯದ ಗತಿ ಬದಲಾಯಿಸಿತು: ಕೋಚ್ ದ್ರಾವಿಡ್ ಹೇಳಿದ್ದು ಯಾರ ಬಗ್ಗೆ!

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಮೂರನೇ ದಿನದಾಟದಲ್ಲಿಯೇ ಭಾರತ ಪಂದ್ಯವನ್ನು ಗೆದ್ದುಕೊಂಡಿದ್ದು ಇದರಿಂದಾಗಿ ಸರಣಿಯಲ್ಲಿ 2-0 ಅಂತರದಿಂದ ಭಾರತ ಮುನ್ನಡೆ ಸಾಧಿಸಿದೆ. ಈ ಪಂದ್ಯದ ಗೆಲುವಿನ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು ಟೀಮ್ ಇಂಡಿಯಾದ ಇಬ್ಬರು ಆಟಗಾರರ ಜೊತೆಯಾಟ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಲು ಕಾರಣವಾಯಿತು ಎಂದಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮತ್ತೊಮ್ಮೆ ಮಿಂಚಿದ್ದು ಆಲ್‌ರೌಂಡರ್ ರವೀಂದ್ರ ಜಡೇಜಾ. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದಿದ್ದ ಜಡ್ಡು ಎರಡನೇ ಇನ್ನಿಂಗ್ಸ್‌ನಲ್ಲಿ ಆಸಿಸ್ ಪಡೆಯ ಬರೊಬ್ಬರಿ 7 ವಿಕೆಟ್ ಕಬಳಿಸಿ ಆಘಾತ ನೀಡಿದರು. ಆದರೆ ಜಡೇಜಾ ಅವರ ಬೌಲಿಂಗ್ ಪ್ರದರ್ಶನಗಿಂತಲೂ ಬ್ಯಾಟಿಂಗ್‌ನಲ್ಲಿ ಬಂದ ಆ ಒಂದು ಮಹತ್ವದ ಜೊತೆಯಾಟ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿತು ಎಂದಿದ್ದಾರೆ ರಾಹುಲ್ ದ್ರಾವಿಡ್.

ಅಶ್ವಿನ್- ಅಕ್ಷರ್ ಜೊತೆಯಾಟಕ್ಕೆ ದ್ರಾವಿಡ್ ಮೆಚ್ಚುಗೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಭಾರೀ ಹಿನ್ನಡೆ ಅನುಭವಿತ್ತು. ಒಂದು ಹಂತದಲ್ಲಿ ಭಾರತ 139 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಜೊತೆಯಾದ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಜೋಡಿ ಅದ್ಭುತ ಜೊತೆಯಾಟವನ್ನು ನೀಡಿದರು. ಈ ಜೋಡಿ 114 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದು ತಂಡವನ್ನು ದೊಡ್ಡ ಹಿನ್ನಡೆಯಿಂದ ಪಾರುಮಾಡುವಲ್ಲಿ ಯಶಸ್ವಿಯಾದರು. ಈ ಜೊತೆಯಾಟದ ಬಗ್ಗೆ ರಾಹುಲ್ ದ್ರಾವಿಡ್ ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಹುಲ್ ದ್ರಾವಿಡ್ ಪ್ರಶಂಸೆ
"ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗುತ್ತವೆ. ಆದರೆ ಮೂರನೇ ದಿನದಾಟದಲ್ಲಿ ಪಂದ್ಯ ಅತ್ಯಂತ ವೇಗವಾಗಿ ನಮ್ಮತ್ತ ವಾಲಿತ್ತು. ಅಕ್ಷರ್ ಹಾಗೂ ಅಶ್ವಿನ್ ನಡುವಿನ ಜೊತೆಯಾಟ ಎಲ್ಲವನ್ನೂ ಬದಲಾಯಿಸಿತ್ತು. ನಾವು 200-225 ರನ್‌ಗಳ ಸನಿಹದ ಗುರಿಯನ್ನು ಬೆನ್ನಟ್ಟಲು ಬಯಸಿದ್ದೆವು. ಆ ಜೊತೆಯಾಟ ನಮಗೆ ಬಹಳ ದೊಡ್ಡ ನೆರವು ನೀಡಿತು. ಇಲ್ಲವಾದರೆ ನಾವು ಹಿನ್ನಡೆಯನ್ನು ಅನುಭವಿಸಬೇಕಾಗಿತ್ತು" ಎಂದಿದ್ದಾರೆ ರಾಹುಲ್ ದ್ರಾವಿಡ್.

ಬ್ಯಾಟಿಂಗ್‌ನಲ್ಲಿ ಮತ್ತೆ ಮಿಂಚಿದ ಅಕ್ಷರ್, ಅಶ್ವಿನ್ ಅದ್ಭುತ ಸಾಥ್
ಇನ್ನು ಮೊದಲ ಪಂದ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದಾರೆ. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಕ್ಷರ್ ಪಟೇಲ್ 115 ಎಸೆತಗಳಲ್ಲಿ 74 ರನ್‌ಗಳನ್ನು ಗಳಿಸಿ ತಂಡಕ್ಕೆ ದೊಡ್ಡ ಮೊತ್ತದ ಕೊಡುಗೆ ನೀಡಿದರು. ಇನ್ನು ಇವರಿಗೆ ಸಾಥ್ ನೀಡಿದ ಅನುಭವಿ ಆಟಗಾರ ಆರ್ ಅಶ್ವಿನ್ 37 ರನ್‌ಗಳ ಜೊತೆಯಾಟ ನೀಡಿದರು. ಹೀಗಾಗಿ ಭಾರತ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್‌ಗಳ ಹಿನ್ನಡೆ ಮಾತ್ರವೇ ಅನುಭವಿಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications