Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus 2nd Test: 4 ವಿಕೆಟ್ ಪಡೆದು ಭಾರತಕ್ಕೆ ಶಾಕ್ ಕೊಟ್ಟ ಲಿಯಾನ್ : ಕೊಹ್ಲಿ, ಜಡೇಜಾ ತಾಳ್ಮೆಯ ಆಟ

Ind vs Aus 2nd Test: Nathan Lyon Strikes, India Lost 4 Wickets on Day 2 Before Lunch

ಭಾರತ-ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಭಾರತಕ್ಕೆ ಶಾಕ್ ನೀಡಿದ್ದಾರೆ. ಮೊದಲ ದಿನದಾಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ ಎಚ್ಚರಿಕೆಯಿಂದ ಆಡಿದ್ದ ಭಾರತ ತಂಡ ಎರಡನೇ ದಿನ ಊಟದ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡಿದೆ.

ಎರಡನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅಮೂಲ್ಯ ರನ್‌ ಕಲೆಹಾಕಿದರು. ಆಸ್ಟ್ರೇಲಿಯಾ ಪ್ರಮುಖ ಸ್ಪಿನ್ನರ್ ನಾಥನ್ ಲಿಯಾನ್ ಕೆಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಶಾಕ್ ನೀಡಿದರು.

ಲಿಯಾನ್ ಮುಂದಿನ ಓವರ್ ನಲ್ಲಿ ನಾಯಕ ರೋಹಿತ್ ಶರ್ಮಾರನ್ನು ಕ್ಲೀನ್‌ ಬೌಲ್ಡ್ ಮಾಡುವ ಮೂಲಕ ಮತ್ತೊಂದು ಆಘಾತ ನೀಡಿದರು. ನಂತರ ಬಂದ ಚೇತೇಶ್ವರ ಪೂಜಾರ ತಮ್ಮ 100ನೇ ಟಸ್ಟ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆ ಮಾಡಲಾಗಿತ್ತು.

ಆದರೆ, ಕೇವಲ 6 ಎಸೆತಗಳನ್ನು ಎದುರಿಸಿದ ಪೂಜಾರ ಅವರನ್ನು ರನ್ ಖಾತೆ ತೆರೆಯುವ ಮುನ್ನವೇ ಲಿಯಾನ್‌ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಬದಲಿಗೆ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಆತ್ಮವಿಶ್ವಾಸದಿಂದಲೇ ಇನ್ನಿಂಗ್ಸ್ ಆರಂಭಿಸಿದ ಅವರು, 4 ರನ್ ಗಳಿಸಿದ್ದ ಅವರನ್ನು ಪೀಟರ್ ಹ್ಯಾಂಡ್ಸ್‌ಸ್ಕಾಂಬ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು.

Ind vs Aus 2nd Test: Nathan Lyon Strikes, India Lost 4 Wickets on Day 2 Before Lunch

ನಾಥನ್ ಲಿಯಾನ್ ಮಾರಕ ದಾಳಿ

ಆಸ್ಟ್ರೇಲಿಯಾ ಪರವಾಗಿ ನಾಥನ್ ಲಿಯಾನ್ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಮೇಲೆ ಒತ್ತಡ ಹೇರಿದ್ದಾರೆ. ಎರಡನೇ ದಿನವೇ ದೆಹಲಿ ಪಿಚ್‌ಗೆ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದು, ಬ್ಯಾಟರ್ ಗಳು ಸ್ವಲ್ಪ ಯಾಮಾರಿದರೂ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ.

Ind vs Aus 2nd Test: Nathan Lyon Strikes, India Lost 4 Wickets on Day 2 Before Lunch

ಕೊಹ್ಲಿ- ಜಡೇಜಾ ಆಸರೆ

ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಜಡೇಜಾ ಎಚ್ಚರಿಕೆಯಿಂದ ಆಡುವ ಮೂಲಕ ಆಸರೆಯಾಗಿದ್ದಾರೆ. ನಿಧಾನವಾಗಿ ವಿಕೆಟ್ ಕಳೆದುಕೊಳ್ಳದೆ ಆಡುತ್ತಿರುವ ಈ ಜೋಡಿ ಊಟದ ವಿರಾಮದ ವೇಳೆಗೆ 22 ರನ್ ಕಲೆಹಾಕಿದೆ. ಕೊಹ್ಲಿ ಅಜೇಯ 14 ರನ್ ಗಳಿಸಿದ್ದು, ಜಡೇಜಾ 15 ರನ್‌ ಗಳಿಸಿ ಆಡುತ್ತಿದ್ದಾರೆ.

ಊಟದ ವಿರಾಮಕ್ಕೆ ಮುನ್ನ ಭಾರತ 88 ರನ್ ಗಳಿಸಿದ್ದು ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಸ್ಕೋರ್ ಸರಿಗಟ್ಟಲು ಭಾರತ ಇನ್ನೂ 175 ರನ್ ಗಳಿಸಬೇಕಿದೆ.

Story first published: Saturday, February 18, 2023, 12:04 [IST]
Other articles published on Feb 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+