Ind Vs Aus 2nd Test: ಟೀಂ ಇಂಡಿಯಾ ನೋಯ್ಡಾದಲ್ಲಿ ಉಳಿದುಕೊಂಡರೆ, ಕೊಹ್ಲಿ ಗುರುಗ್ರಾಮದಲ್ಲಿ ಉಳಿದುಕೊಂಡಿದ್ಯಾಕೆ?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಭಾರತ ತಂಡಕ್ಕೆ ವಾಸ್ತವ್ಯದ ಸಮಸ್ಯೆ ಎದುರಾಯಿತು. ಭಾರತ ತಂಡ ದೆಹಲಿಯಲ್ಲಿ ಪಂದ್ಯವನ್ನಾಡುವ ಸಮಯದಲ್ಲಿ ಸಾಮಾನ್ಯವಾಗಿ ದೆಹಲಿಯ ಐಟಿಸಿ ಮೌರ್ಯ ಅಥವಾ ತಾಜ್ ಪ್ಯಾಲೆಸ್‌ನಲ್ಲಿ ತಂಗುತ್ತದೆ.
ಆದರೆ ಪ್ರಸ್ತುತ ನಡೆಯುತ್ತಿರುವ ಜಿ20 ಶೃಂಗಸಭೆ ಮತ್ತು ಬಿಡುವಿಲ್ಲದ ಮದುವೆಯ ಕಾರ್ಯಕ್ರಮಗಳ ಕಾರಣ ಹೋಟೆಲ್‌ಗಳಲ್ಲಿ ಭಾರತ ತಂಡಕ್ಕೆ ರೂಮು ಸಿಗದಂತಾಯಿತು. ಇದರಿಂದಾಗಿ ಟೀಂ ಇಂಡಿಯಾ ನೊಯ್ಡಾದ ಹೋಟೆಲ್ ಲೀಲಾಗೆ ತೆರಳಬೇಕಾಯಿತು.
ಭಾರತ ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮಾತ್ರ ತಂಡದ ಜೊತೆ ಹೋಟೆಲ್‌ನಲ್ಲಿ ಉಳಿದುಕೊಂಡಿಲ್ಲ. ಬದಲಾಗಿ ಗುರುಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ತಂಗಲು ನಿಶ್ಚಯಿಸಿದ್ದಾರೆ. ಇದಕ್ಕಾಗಿ ತಂಡದ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಟೆಸ್ಟ್ ದಿನದ ಮೊದಲನೇ ದಿನದಿಂದ ಅವರು ತಂಡದ ಜೊತೆ ಹೋಟೆಲ್‌ಗೆ ತೆರಳುವ ಸಾಧ್ಯತೆ ಇದೆ.
ಅವರು ತಮ್ಮ ನಿವಾಸದಿಂದಲೇ ಕಾರ್ ನಲ್ಲಿ ಡ್ರೈವ್ ಮಾಡಿಕೊಂಡು ಎರಡು ದಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಆಗಮಿಸಿದ್ದರು. ಲಾಂಗ್‌ಡ್ರೈವ್ ವೇಳೆಯಲ್ಲಿ ದೆಹಲಿಯ ಹಳೆಯ ನೆನಪುಗಳು, ಕ್ರಿಕೆಟ್‌ನ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿರುವ ಅವರು, ಬಹಳ ದಿನಗಳ ನಂತರ ಲಾಂಗ್‌ಡ್ರೈವ್‌ನೊಂದಿಗೆ ಅರುಣ್ ಜೇಟ್ಲಿ ಕ್ರೀಡಾಂಗಣದ ಕಡೆಗೆ ಪಯಣ ಎಂದು ಬರೆದುಕೊಂಡಿದ್ದರು.

ತವರಿನಲ್ಲಿ ಮಿಂಚಲು ಸಿದ್ದವಾದ ಕೊಹ್ಲಿ
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2017ರ ಡಿಸೆಂಬರ್ ತಿಂಗಳನಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅಮೋಘ ದ್ವಿಶತಕ ಸಿಡಿಸಿದ್ದರು. ಅವರ 243 ರನ್‌ಗಳ ಸಹಾಯದಿಂದ ಭಾರತ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಶ್ರೀಲಂಕಾ ವಿರುದ್ಧ ದ್ವಿಶತಕವನ್ನು ಹೊರತುಪಡಿಸಿ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ತವರಿನ ಅಂಗಳದಲ್ಲಿ ಶತಕ ಸಿಡಿಸಿದ್ದರು. ಕೊಹ್ಲಿ ದೆಹಲಿಯಲ್ಲಿ 8 ಇನ್ನಿಂಗ್ಸ್‌ಗಳಲ್ಲಿ 71.83 ಸರಾಸರಿಯಲ್ಲಿ 575 ರನ್ ಗಳಿಸಿದ್ದಾರೆ. ಕೊಹ್ಲಿಯ ನಾಯಕತ್ವದಲ್ಲಿ ಭಾರತ ತಂಡ ದೆಹಲಿಯಲ್ಲಿ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತ್ತು.

ಶತಕದ ನಿರೀಕ್ಷೆಯಲ್ಲಿ ಅಭಿಮಾನಿಗಳು
ಮೂರು ವರ್ಷಗಳ ಶತಕದ ಬರವನ್ನು ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ತೀರಿಸಿಕೊಂಡರು. ನಂತರ ಏಕದಿನ ಮಾದರಿಯಲ್ಲಿ ಕೂಡ ಶತಕಗಳನ್ನು ಸಿಡಿಸಿ ಮಿಂಚಿದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಶತಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ದೆಹಲಿಯಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಅವರು ಶತಕ ಗಳಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು. ಹಲವು ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿ ಶತಕ ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications