Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus 2nd Test: ಲಾಂಗ್‌ ಡ್ರೈವ್‌ ಮೂಲಕ ಆಗಮಿಸಿದ ವಿರಾಟ್ ಕೊಹ್ಲಿ : ಅಭ್ಯಾಸ ಶುರು ಮಾಡಿದ ಟೀಂ ಇಂಡಿಯಾ

Ind vs Aus 2nd Test: Team India Will Start Their First Practice Session At The Arun Jaitley Stadium

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ, ಎರಡನೇ ಟೆಸ್ಟ್ ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದೆ. ಫೆಬ್ರವರಿ 17 ಶುಕ್ರವಾರ ಪಂದ್ಯ ಆರಂಭವಾಗಲಿದೆ.

ಮೊದಲನೇ ಪಂದ್ಯವನ್ನು ಮೂರೇ ದಿನಕ್ಕೆ ಮುಗಿಸಿದ್ದ ಟೀಂ ಇಂಡಿಯಾ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದಿತ್ತು. ಮಂಗಳವಾರ ದೆಹಲಿಗೆ ಆಗಮಿಸಿದ ರೋಹಿತ್ ಶರ್ಮಾ ಪಡೆ ಬುಧವಾರ ಅಭ್ಯಾಸ ಆರಂಭಿಸಿದೆ.

ದೆಹಲಿಯವರೇ ಆದ ವಿರಾಟ್ ಕೊಹ್ಲಿ ಬಹು ದಿನಗಳ ನಂತರ ಕಾರ್‍‌ ನಲ್ಲಿ ಡ್ರೈವ್ ಮಾಡಿಕೊಂಡು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಕೊಹ್ಲಿ ತವರಿನಲ್ಲಿ ಟೆಸ್ಟ ಪಂದ್ಯ ನಡೆಯುತ್ತಿರುವುದರಿಂದ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮೊದಲನೇ ಟೆಸ್ಟ್‌ನಲ್ಲಿ ರನ್ ಗಳಿಸಲು ವಿಫಲರಾಗಿದ್ದ ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ ವಾಪಸಾಗುವ ವಿಶ್ವಾಸದಲ್ಲಿದ್ದಾರೆ.

ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಎರಡನೇ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲವಾದರೂ, ತಂಡದ ಜೊತೆ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗೆದ್ದರೆ ಫೈನಲ್‌ಗೆ ಅರ್ಹತೆ

ಗೆದ್ದರೆ ಫೈನಲ್‌ಗೆ ಅರ್ಹತೆ

ದೆಹಲಿಯ ಟೆಸ್ಟ್ ಗೆದ್ದರೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಲಿದೆ. ದೆಹಲಿ ಪಂದ್ಯ ಗೆದ್ದು ಉಳಿದ ಎರಡು ಟೆಸ್ಟ್‌ಗಳನ್ನು ಡ್ರಾ ಮಾಡಿಕೊಂಡರು ಭಾರತ-ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಕಳೆದ 36 ವರ್ಷಗಳಿಂದ ದೆಹಲಿ ಅಂಗಳದಲ್ಲಿ ಸೋಲು ಕಾಣದಿರುವ ಭಾರತ ತಂಡ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಸೋತಿರುವ ಆಸ್ಟ್ರೇಲಿಯಾ ತಪ್ಪುಗಳನ್ನು ಸರಿಪಡಿಸಿಕೊಂಡು ಕಠಿಣ ಪೈಪೋಟಿ ನೀಡಲು ಸಿದ್ಧವಾಗಿದೆ.

ಸ್ಪಿನ್‌ಗೆ ಹೆಚ್ಚಿನ ನೆರವು

ಸ್ಪಿನ್‌ಗೆ ಹೆಚ್ಚಿನ ನೆರವು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲಿನಿಂದಲೂ ಸ್ಪಿನ್ನರ್ ಗಳು ಹೆಚ್ಚಿನ ನೆರವು ಪಡೆಯುತ್ತಿದ್ದಾರೆ. ಪಂದ್ಯದ ಮೊದಲ ಎರಡು ದಿನ ಬ್ಯಾಟಿಂಗ್‌ ಮಾಡಲು ಕೂಡ ಉತ್ತಮವಾಗಿರುತ್ತದೆ. ಆದರೆ ನಂತರದ ಮೂರು ದಿನಗಳು ಸ್ಪಿನ್ನರ್ ಗಳು ಪಾರಮ್ಯ ಮೆರೆಯಲಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ನಾಲ್ವರು ಸ್ಪಿನ್ನರ್ ಗಳೊಂದಿಗೆ ಆಡುವ ಸಾಧ್ಯತೆ ಇದೆ. ಕುಲದೀಪ್ ಯಾದವ್ ತಂಡಕ್ಕೆ ಬರುವ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ, ಕುಲದೀಪ್‌ಗೆ ಯಾರು ಜಾಗ ಬಿಟ್ಟುಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

ಚೇತನ್ ಶರ್ಮಾ ವಿವಾದ

ಚೇತನ್ ಶರ್ಮಾ ವಿವಾದ

ಎರಡನೇ ಟೆಸ್ಟ್‌ಗೆ ಮುನ್ನ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಝೀ ಸುದ್ದಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ಫಿಟ್‌ನೆಸ್‌ಗಾಗಿ ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ ಎಂದು ಗಂಭಿರವಾದ ಆರೋಪ ಮಾಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಸೌರವ್ ಗಂಗೂಲಿ ದ್ವೇಷಿಸುತ್ತಿದ್ದರು, ಅವರನ್ನು ಉದ್ದೇಶಪೂರ್ವಕವಾಗಿಯೇ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಬಿಸಿಸಿಐ ಏನೂ ಸ್ಪಷ್ಟನೆ ನೀಡಿಲ್ಲವಾದರೂ, ಆಸ್ಟ್ರೇಲಿಯಾ ಮಾಧ್ಯಮಗಳು ಇದನ್ನೇ ಮುಂದಿಟ್ಟುಕೊಂಡು ವಿವಾದಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

Story first published: Wednesday, February 15, 2023, 13:35 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+