Ind vs Aus 3rd ODI: ಹೀನಾಯ ಸೋಲಿನ ಬಳಿಕವೂ ತಂಡದಲ್ಲಿಲ್ಲ ಬದಲಾವಣೆ: ಕಾರಣ ವಿವರಿಸಿದ ನಾಯಕ ರೋಹಿತ್

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದೆ. ಎರಡು ತಂಡಗಳು ಕೂಡ ಮೊದಲ ಎರಡು ಪಂದ್ಯಗಳ ಪೈಕಿ ತಲಾ ಒಂದೊಂದು ಗೆಲುವು ಸಾಧಿಸಿರುವ ಕಾರಣ ಚೆನ್ನೈನಲ್ಲಿ ನಡೆಯುತ್ತಿರುವ ಈ ಏಕದಿನ ಪಂದ್ಯ ಸರಣಿಯ ನಿರ್ಣಾಯಕ ಪಂದ್ಯ ಎನಿಸಿಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಚ್ಚರಿಯ ನಿರ್ಧಾರವನ್ನು ತಗೆದುಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿದಿದೆ. ಅಂದರೆ ಈ ಹಿಂದೆ ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ತಮಡದ ವಿರುದ್ಧ ಹೀನಾಯ ಸೋಲು ಅನುಭವಿಸಿದ ಸಂಪೂರ್ಣ ತಂಡದೊಂದಿಗೆ ಭಾರತ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಈ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ವಿಚಾರವಾಗಿ ಮಾತನಾಡಿರುವ ನಾಯಕ ರೋಹಿತ್ ಶರ್ಮಾ ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿದ್ದು ಡೇವಿಡ್ ವಾರ್ನರ್ ಹಾಗೂ ಆಸ್ಟನ್ ಅಗರ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಟಾಸ್ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಾವು ಕೂಡ ಫಿಲ್ಡಿಂಗ್ ಮಾಡುವುದನ್ನೇ ಬಯಸಿದ್ದೆವು ಎಂದರು. ಈ ಸಂದರ್ಭದಲ್ಲಿ ಭಾರತ ತಂಡ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯುತ್ತಿದೆ ಎಂದಿದ್ದು ಸ್ಪಿನ್ನರ್‌ಗಳ ಆಯ್ಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿರುವುದಾಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ವಿಶಾಖಪಟ್ಟಣಂನಲ್ಲಿ ಪಡೆದುಕೊಂಡ ಫಲಿತಾಂಶದ ಬಳಿಕ ಅದೇ ತಂಡದೊಂದಿಗೆ ಮತ್ತೆ ಕಣಕ್ಕಿಳಿಯುವುದು ಸವಾಲಿನ ವಿಚಾರ, ಬಹಳ ಒತ್ತಡದಲ್ಲಿ ಆಡಬೇಕಾಗುತ್ತದೆ ಎಂದಿರುವ ರೋಹಿತ್ ಶರ್ಮಾ ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
"ನಾವು ಕೂಡ ಫೀಲ್ಡಿಂಗ್ ನಡೆಸುವುದನ್ನೇ ಬಯಸಿದ್ದೆವು. ಇಲ್ಲಿ ಬೌಲರ್‌ಗಳಿಗೆ ನೆರವು ದೊರೆಯಲಿದ್ದು ಮೂವರು ಸ್ಪಿನ್ನರ್‌ಗಳೊಂದಿಗೆ ಆಡುತ್ತಿದ್ದೇವೆ. ಈ ಒಣ ಪಿಚ್‌ನಲ್ಲಿ ನಮ್ಮ ಸ್ಪಿನ್ ಬೌಲಿಂಗ್ ಆಯ್ಕೆಯನ್ನು ಹೆಚ್ಚಿಸಿಕೊಳ್ಳಲು ನಾವು ಬಯಸುತ್ತೇವೆ. ಇದು ಮುಖ್ಯವಾದ ಪಂದ್ಯವಾಗಿದ್ದು ನಿರ್ಣಾಯಕ ಪಂದ್ಯ ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಇಂತಾ ಪರಿಸ್ಥಿತಿಗಳಿಗೆ ಸಿಲುಕಿಕೊಳ್ಳುವುದು ನಮಗೂ ಕೂಡ ಬಹಳ ಉತ್ತಮ. ಒತ್ತಡದಲ್ಲಿ ಕಣಕ್ಕಿಳಿದು ಉತ್ತಮ ಕ್ರಿಕೆಟ್ ಆಡುವುದು ಯಾವಾಗಲೂ ಸವಾಲಾಗಿತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.
ಮುಂದುವರಿಸು ಮಾತನಾಡಿರುವ ಅವರು "ನಾವು ಉತ್ತಮ ಹೆಜ್ಜೆಗಳನ್ನಿಟ್ಟಿದ್ದೇವೆ ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾ ಬಲುಷ್ಠವಾದ ತಂಡವಾಗಿದ್ದು ನಿಮ್ಮ ತಂಡದ ಸಾಮರ್ಥ್ಯದ ಆಳವನ್ನು ಇಲ್ಲಿ ಪರೀಕ್ಷಿಸಬಹುದು. ಇಲ್ಲಿ ನಾಲ್ಕು ವೇಗಿಗಳೊಂದಿಗೆ ಆಡಲು ಆರಂಬದಲ್ಲಿ ನಿರ್ಧರಿಸಿದ್ದೆವು. ಆದರೆ ಇಲ್ಲಿನ ಪರಿಸ್ಥಿತಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವಂತಿದೆ. ಹಾಗಾಗಿ ಮೂವರು ಸ್ಪಿನ್ನರ್‌ಗ:ಒಂದಿಗೆ ಆಡುತ್ತಿದ್ದೇವೆ" ಎಂದು ವಿವರಿಸಿದ್ದಾರೆ ರೋಹಿತ್ ಶರ್ಮಾ.
ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಶೈನ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯ್ನಿಸ್, ಆಷ್ಟನ್ ಅಗರ್, ಶಾನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications