Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಶತಕ ಸಿಡಿಸಿ ಅಪರೂಪದ ದಾಖಲೆ ನಿರ್ಮಿಸಿದ ರುತುರಾಜ್ ಗಾಯಕ್ವಾಡ್!

ಭಾರತ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಬಾರಿಸುವ ಮೂಲಕ ಭಾರತೀಯ ಆರಂಭಿಕ ಗಣ್ಯರ ಪಟ್ಟಿಯನ್ನು ಸೇರಿಕೊಂಡರು.

ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡವು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 222 ರನ್ ಕಲೆಹಾಕಿತು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರುತುರಾಜ್ ತಮ್ಮ ಮೊದಲ ಶತಕದ ಅಂಕಿಅಂಶದೊಂದಿಗೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ನಂತರ ಈ ಸಾಧನೆ ಮಾಡಿದ 5ನೇ ಭಾರತೀಯ ಆರಂಭಿಕ ಆಟಗಾರ ಎನಿಸಿದರು.

ruturaj-gaikwad-makes-a-rare-record

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 123 ರನ್ ಗಳಿಸಿ ಅಜೇಯರಾಗುಳಿದರು. ಕುತೂಹಲಕಾರಿಯಾಗಿ, ರುತುರಾಜ್ ಗಾಯಕ್ವಾಡ್ ಆಸ್ಟ್ರೇಲಿಯಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ.

ಆರಂಭದಲ್ಲಿ ನಿಧಾನಗತಿ ಆಟವಾಡುತ್ತಿದ್ದ ರುತುರಾಜ್ ಗಾಯಕ್ವಾಡ್ ನಾಯಕ ಸೂರ್ಯಕುಮಾರ್ ಯಾದವ್ ಔಟಾದ ಬಳಿಕ ಬ್ಯಾಟಿಂಗ್ ಗೀಯರ್ ಚೇಂಜ್ ಮಾಡಿದರು. ಸಿಕ್ಸರ್, ಬೌಂಡರಿಗಳ ಮೂಲಕ ತಂಡದ ಮೊತ್ತ ಹೆಚ್ಚಿಸುವ ಜೊತೆಗೆ ತಮ್ಮ ವೈಯಕ್ತಿಕ ರನ್‌ಗಳನ್ನು ಹೆಚ್ಚಿಸಿಕೊಂಡರು.

ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಆರೋನ್ ಹಾರ್ಡಿ ಅವರ ಬೌಲಿಂಗ್‌ನಲ್ಲಿ 24 ರನ್ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಎಸೆದ ಅಂತಿಮ ಓವರ್‌ನಲ್ಲಿ 30 ರನ್‌ಗಳನ್ನು ಬಾಚಿದರು.

ರುತುರಾಜ್ ಗಾಯಕ್ವಾಡ್ 20ನೇ ಓವರ್‌ನಲ್ಲಿ ತಮ್ಮ ಶತಕವನ್ನು ಪೂರೈಸಿದರು. ಕೇವಲ 52 ಎಸೆತಗಳಲ್ಲಿ ಮೂರಂಕಿ ಸಂಖ್ಯೆ ಮುಟ್ಟಲು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಓವರ್‌ ಅನ್ನು ಛಿದ್ರಗೊಳಿಸಿದರು.

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಗಾಯಕ್ವಾಡ್ ಅವರು ಒಂದೇ ಒಂದು ಎಸೆತ ಎದುರಿಸದೆ ರನೌಟ್ ಆದ ಕಾರಣ ಡೈಮಂಡ್ ಡಕ್‌ಗೆ ಔಟಾಗಿದ್ದರು.

ಆದರೆ, ತಿರುವನಂತಪುರಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತದ ಬೃಹತ್ ಗೆಲುವಿನಲ್ಲಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅರ್ಧಶತಕ ಬಾರಿಸುವುದರೊಂದಿಗೆ ಪುನರಾಗಮನ ಮಾಡಿದರು.

ಭಾರತ ಪರ ಟಿ20 ಶತಕ ಬಾರಿಸಿದ ಆರಂಭಿಕ ಆಟಗಾರರು

1) ರೋಹಿತ್ ಶರ್ಮಾ (4) - 2015ರಿಂದ 2018

2) ಶುಭ್ಮನ್ ಗಿಲ್ (1) - 2023

3) ವಿರಾಟ್ ಕೊಹ್ಲಿ (1) - 2022

4) ಯಶಸ್ವಿ ಜೈಸ್ವಾಲ್ (1) - 2023

5) ರುತುರಾಜ್ ಗಾಯಕ್ವಾಡ್ (1) - 2023

Story first published: Tuesday, November 28, 2023, 21:43 [IST]
Other articles published on Nov 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+