IND vs AUS 3rd Test: ಟೀಮ್ ಇಂಡಿಯಾ ಗೆಲುವಿಗೆ 275 ರನ್ ಗುರಿ ನೀಡಿದ ಆಸ್ಟ್ರೇಲಿಯಾ
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಹೆಚ್ಚಿಸಿದೆ. ಈ ಪದ್ಯದಲ್ಲಿ ಎಲ್ಲ ಫಲಿತಾಂಶಗಳು ನಿರೀಕ್ಷೆ ಇದೆ. ಡ್ರಾ, ಸೋಲು, ಗೆಲುವು ಸೇರಿದಂತೆ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 89 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 275 ರನ್‌ಗಳ ಗುರಿಯನ್ನು ನೀಡಿದೆ.
ಟೀಮ್ ಇಂಡಿಯಾ ಬುಧವಾರದ ಪಂದ್ಯದಲ್ಲಿ 9 ವಿಕೆಟ್‌ಗೆ 252 ರನ್‌ಗಳಿಂದ ಆಟ ಮುಂದುವರಿಸಿದ ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್ ಜೋಡಿ ಮಂಗಳವಾರದ ರನ್‌ಗಳಿಗೆ 8 ರನ್ ಸೇರಿಸಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಯಿತು. ಆಕಾಶ್ ದೀಪ್ 44 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿದರು. ಬುಮ್ರಾ ಅಜೇಯ 10 ರನ್ ಬಾರಿಸಿದರು.

ಹೊಡಿ ಬಡಿ ಆಟಕ್ಕೆ ಮಣೆ ಹಾಕಿದ ಆಸೀಸ್
ಭರ್ಜರಿ 185 ರನ್‌ಗಳ ಇನಿಂಗ್ಸ್ ಮುನ್ನಡೆಯನ್ನು ಹೊಂದಿದ್ದ ಆಸ್ಟ್ರೇಲಿಯಾ, ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಅಬ್ಬರದ ಆಟಕ್ಕೆ ಮಣೆ ಹಾಕಿದರು. ಆಸೀಸ್ ತಂಡದ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ಬ್ಯಾಟ್ ಮಾಡುವ ಸೂಚನೆಯನ್ನೇ ನೀಡಲಿಲ್ಲ. ಕ್ರೀಸ್‌ಗೆ ಬಂದ ಆಟಗಾರರು ದೊಡ್ಡ ದೊಡ್ಡ ಹೊಡೆತಕ್ಕೆ ಮುಂದಾದರು. ಆಸ್ಟ್ರೇಲಿಯಾದ ಆರಂಭಿಕರಾದ ನಾಥನ್ ಮೆಕ್‌ಸ್ವೀನಿ (4), ಉಸ್ಮಾನ್ ಖವಾಜ್ (8), ಮಾರ್ನಸ್ ಲಂಬುಶೇನ್ (1), ಮಿಚೆಲ್ ಮಾರ್ಷ್ (2) ಪಟ ಪಟನೇ ಔಟ್ ಆದರು.
ಸ್ಟೀವನ್ ಸ್ಮಿತ್ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಸ್ಮಿತ್ 4 ರನ್‌ಗಳಿಗೆ ಔಟ್ ಆದರು. ಭಾರತ ತಂಡವನ್ನು ಬಹುವಾಗಿ ಕಾಡಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 17, ಅಲೆಕ್ಸ್ ಕ್ಯಾರಿ ಅಜೇಯ 19, ಪ್ಯಾಟ್ ಕಮಿನ್ಸ್ 2 ಬೌಂಡರಿ, 2 ಸಿಕ್ಸರ್ ಬಾರಿಸಿ ಮಿಂಚಿದರು. ಇವರು ಜಸ್ಟ್ 10 ಎಸೆತಗಳಲ್ಲಿ 22 ರನ್ ಸಿಡಿಸಿ ಔಟ್ ಆದರು. ಆಸ್ಟ್ರೇಲಿಯಾ 7 ವಿಕೆಟ್‌ಗೆ 89 ರನ್ ಗಳಿಸಿದ್ದಾಗ ಆತಿಥೇಯ ತಂಡ ಡಿಕ್ಲೇರ್ ಮಾಡಿಕೊಂಡಿತು.
18 ಓವರ್‌ಗಳಲ್ಲಿ 7 ವಿಕೆಟ್
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 18 ಓವರ್ ಬ್ಯಾಟ್ ಮಾಡಿ 89 ರನ್ ಸೇರಿಸಿತು. ವೇಗಿ ಜಸ್ಪ್ರಿತ್ ಬುಮ್ರಾ 6 ಓವರ್ ಬೌಲ್ ಮಾಡಿ 18 ರನ್ ನೀಡಿ ಮೂರು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications