For Quick Alerts
ALLOW NOTIFICATIONS  
For Daily Alerts
 

IND Vs AUS 3rd Test: ಕುಹ್ನೆಮನ್ ಸ್ಪಿನ್ ಮೋಡಿ, ಖವಾಜ ಅರ್ಧಶತಕ: ಆಸ್ಟ್ರೇಲಿಯಾಗೆ ಮೊದಲ ದಿನದ ಗೌರವ

IND Vs AUS 3rd Test : Australia shone on day one of the Indore Test, taking a 46-run lead

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ. ಮೊದಲ ದಿನದಾಟ ಮುಕ್ತಾಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದ್ದು 47 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಯೋಜನೆನ್ನು ತಲೆಕೆಳಗು ಮಾಡಿದ್ದು ಮಾತ್ರ ಆಸ್ಟ್ರೇಲಿಯಾದ ಸ್ಪಿನ್ನರ್ ಗಳು.

ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿತು. ಕೆಎಲ್ ರಾಹುಲ್ ಬದಲಿಗೆ ಶುಭಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆದು ನಾಯಕ ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಆರಂಭಿಸಿದರು. ಶುಭಮನ್ ಗಿಲ್‌ರಿಂದ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಲಾಗಿತ್ತು.

12 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಮ್ಯಾಥ್ಯೂ ಕುಹ್ನೆಮನ್‌ಗೆ ವಿಕೆಟ್ ಒಪ್ಪಿಸಿದರು. ಶುಭಮನ್ ಗಿಲ್ 18 ಎಸೆತಗಳಲ್ಲಿ 3 ಬೌಂಡರಿ ಸಹಿತ 21 ರನ್ ಗಳಿಸಿ ಔಟಾದರು. ನಂತರ ಬಂದ ಪೂಜಾರ ಲಿಯಾನ್‌ರ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಭಾರತ ಬ್ಯಾಟಿಂಗ್ ವೈಫಲ್ಯ

ಭಾರತ ಬ್ಯಾಟಿಂಗ್ ವೈಫಲ್ಯ

ಭಾರತದ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ಹೆಚ್ಚಿನ ಸಮಯ ನಿಲ್ಲಲಿಲ್ಲ. ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 22 ರನ್ ಗಳಿಸಿ ಉತ್ತಮವಾಗಿ ಆಡುತ್ತಿರುವಾಗಲೇ ಟಾಡ್ ಮುರ್ಫಿ ಬೌಲಿಂಗ್‌ನಲ್ಲಿ ಔಟಾದರು. ರವೀಂದ್ರ ಜಡೇಜಾ 4 ರನ್‌ಗಳಿಗೆ ಔಟಾದರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.

ಶ್ರೀಕರ್ ಭರತ್ 17 ರನ್ ಗಳಿಸಿ ಔಟಾದರೆ, ಅಕ್ಷರ್ ಪಟೇಲ್ ಅಜೇಯ 12 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ 3 ರನ್, ಉಮೇಶ್ ಯಾದವ್ 17 ರನ್ ಗಳಿಸಿದರೆ, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ರನೌಟ್ ಆದರು.

ಸ್ಪಿನ್ ದಾಳಿಗೆ ತತ್ತರಿಸಿ ಟೀಂ ಇಂಡಿಯಾ

ಸ್ಪಿನ್ ದಾಳಿಗೆ ತತ್ತರಿಸಿ ಟೀಂ ಇಂಡಿಯಾ

ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ ಆಸ್ಟ್ರೇಲಿಯಾ ಮೂರನೇ ಪಂದ್ಯದಲ್ಲಿ ರಣತಂತ್ರದೊಂದಿಗೆ ಕಣಕ್ಕಿಳಿಯಿತು. ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತ ತಂಡವನ್ನು ಕಟ್ಟಿಹಾಕುವಲ್ಲಿ ಸಫಲವಾಯಿತು.

ದೆಹಲಿ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಮ್ಯಾಥ್ಯೂ ಕುಹ್ನೆಮನ್ ಎರಡನೇ ಟೆಸ್ಟ್‌ನಲ್ಲೇ ಮಿಂಚಿದರು. 5 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮಾರಕವಾದರು. ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಕೂಡ 3 ವಿಕೆಟ್ ಪಡೆದರು, ಟಾಡ್ ಮುರ್ಫಿ 1 ವಿಕೆಟ್ ಪಡೆದರು.

47 ರನ್‌ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ

47 ರನ್‌ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ

ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲನೇ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಟ್ರಾವಿಸ್ ಹೆಡ್ 9 ರನ್ ಗಳಿಸಿದ್ದಾಗ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಔಟಾದರು.

ನಂತರ ಬಂದ ಉಸ್ಮಾನ್ ಖವಾಜ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಅತ್ಯುತ್ತಮ ಜೊತೆಯಾಟ ಆಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 94 ರನ್‌ಗಳನ್ನು ಕಲೆಹಾಕಿತು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಖವಾಜ ರನ್ ಖಾತೆ ತೆರೆಯುವ ಮುನ್ನವೇ ಔಟಾಗಿದ್ದರು ಅದು ನೋಬಾಲ್ ಆಗಿತ್ತು.

ಖವಾಜಾ 60 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾಗೆ ಆಸರೆಯಾದರು. ಮಾರ್ನಸ್ ಲ್ಯಾಬುಸ್ಚಾಗ್ನೆ 31 ರನ್ ಗಳಿಸಿದೆ, ಸ್ಟೀವ್ ಸ್ಮಿತ್ 26 ರನ್ ಗಳಿಸಿ ಔಟಾದರು. ಪೀಟರ್ ಹ್ಯಾಂಡ್ಸ್‌ಕಬ್ ಅಜೇಯ 7 ಮತ್ತು ಕ್ಯಾಮೆರಾನ್ ಗ್ರೀನ್ ಅಜೇಯ 6 ರನ್ ಗಳಿಸಿದ್ದು 2ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

ಮೊದಲನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸುವ ಮೂಲಕ 47 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ. ಎಲ್ಲಾ ನಾಲ್ಕು ವಿಕೆಟ್‌ಗಳನ್ನು ರವೀಂದ್ರ ಜಡೇಜಾ ಪಡೆದುಕೊಂಡಿದ್ದಾರೆ.

Story first published: Wednesday, March 1, 2023, 17:33 [IST]
Other articles published on Mar 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+