IND vs AUS 3rd Test: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 445ಕ್ಕೆ ಆಲೌಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಸೋಮವಾರ ಮೂರನೇ ದಿನದಾಟವನ್ನು ಆಸ್ಟ್ರೇಲಿಯಾ ಆರಂಭಿಸಿ 445 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 405 ರನ್‌ಗಳಿಂದ ಮುಂದುವರೆಸಿತು. ಆತಿಥೇಯ ತಂಡವನ್ನು ಭಾರತ, ಮೊದಲಾವಧಿಯಲ್ಲೇ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದಲ್ಲಿ ಜಸ್ಟ್ 40 ರನ್ ಸೇರಿಸಿತು.
ಭಾನುವಾರ ದಿನದಾಟದಂತ್ಯಕ್ಕೆ ಮಿಚೆಲ್ ಸ್ಟಾರ್ಕ್ ಹಾಗೂ ಅಲೆಕ್ಸ್ ಕ್ಯಾರಿ ಇನಿಂಗ್ಸ್ ಮುನ್ನಡೆಯ ಹೊಣೆ ಹೊತ್ತರು. ಮೂರನೇ ದಿನದಾಟದ ಮೊದಲ ವಿಕೆಟ್ ದಿನದ ಐದನೇ ಓವರ್‌ನಲ್ಲಿ ಸಿಕ್ಕಿತು. ಮಿಚೆಲ್ ಸ್ಟಾರ್ಕ್ 30 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ನೆರವಿನಿಂದ 18 ರನ್ ಸಿಡಿಸಿದರು. ಇವರು ಜಸ್ಪ್ರಿತ್ ಬುಮ್ರಾ ಅವರು ಎಸೆದ ಸ್ಟಂಪ್ ಮೇಲೆ ಬಂದ ಎಸೆತವನ್ನು ತಪ್ಪಾಗಿ ಗ್ರಹಿಸಿ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ವಿಕೆಟ್ ಪಡೆಯಿತು.

ಅಲೆಕ್ಸ್ ಕ್ಯಾರಿ ಅರ್ಧಶತಕ
ಆಸ್ಟ್ರೇಲಿಯಾ ಕೆಳ ಕ್ರಮಾಂದ ಬ್ಯಾಟರ್ ನಾಥನ್ ಲಿಯಾನ್ 2 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಅಲೆಕ್ಸ್ ಕ್ಯಾರಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ಮೂರನೇ ದಿನದಾಟವನ್ನು 45 ರನ್‌ಗಳಿಂದ ಆಟ ಮುಂದುವರಿಸಿ 70 ರನ್ ಬಾರಿಸಿದರು. ಇವರ ಕ್ಲಾಸ್ ಇನಿಂಗ್ಸ್‌ನಲ್ಲಿ 7 ಬೌಂಡರಿ, 2 ಸಿಕ್ಸರ್ ಸೇರಿವೆ. ಇವರಿಗೆ ಖೆಡ್ಡಾ ತೋಡುವಲ್ಲಿ ಯುವ ವೇಗದ ಬೌಲರ್ ಆಕಾಶ್ ದೀಪ್ ಯಶಸ್ವಿ ಯಾದರು. ಅಲೆಕ್ಸ್ ದೊಡ್ಡ ಹಿಟ್ ಬಾರಿಸುವ ಪ್ರಯತ್ನದಲ್ಲಿ ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿದರು.
ಬುಮ್ರಾ 6 ವಿಕೆಟ್
ಟೀಮ್ ಇಂಡಿಯಾದ ಉಪನಾಯಕ ಜಸ್ಪ್ರಿತ್ ಬುಮ್ರಾ ಅವರು 28 ಓವರ್‌ಗಳನ್ನು ಬೌಲ್ ಮಾಡಿ 76 ರನ್ ನೀಡಿ 6 ವಿಕೆಟ್ ಪಡೆದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ 12ನೇ ಬಾರಿ ಐದಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡಿದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧವೇ ಮೂರನೇ ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಮೊಹಮ್ಮದ್ ಸಿರಾಜ್ 97 ರನ್ ನೀಡಿ 2 ವಿಕೆಟ್ ಪಡೆದರು. ಆಕಾಶ್ ದೀಪ್ ಹಾಗೂ ಆಲ್‌ರೌಂಡರ್ ನೀತಿಶ್ ಕುಮಾರ್ ರೆಡ್ಡ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಧಾರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications