Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus: ಕನ್ನೇಮನ್, ಲಿಯಾನ್ ಮ್ಯಾಜಿಕ್‌ಗೆ ಭಾರತದ ಅಗ್ರ ಕ್ರಮಾಂಕ ತತ್ತರ!

Ind vs Aus 3rd Test: Indias top-order failed, Matthew Kuhnemann and Nathan Lyon shine in Indore Test

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಆರಂಭವನ್ನು ಪಡೆದುಕೊಂಡಿದ್ದು ಆಸಿಸ್ ವಿರುದ್ಧ ಬ್ಯಾಟಿಂಗ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾದ ಯಾವ ಪ್ರಮುಖ ಆಟಗಾರ ಕೂಡ ನೆಲಕಚ್ಚಿನ ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲವಾಗಿದ್ದಾರೆ. ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ 84 ರನ್‌ಗಳಿಸಿದ್ದು 7 ವಿಕೆಟ್ ಕಳೆದುಕೊಂಡಿದ್ದು ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಕ್ರೀಸ್‌ನಲ್ಲಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನಲ್ಲಿಯೇ ಎರಡು ಬಾರಿ ಜೀವದಾನ ಪಡೆದುಕೊಂಡರು. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ನಾಯಕ ವಿಫಲವಾದರು. ತಂಡದ ಮೊತ್ತ 27 ರನ್‌ಗಳಿದ್ದಾಗ12 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತದ ಫೆವಿಲಿಯನ್ ಪೆರೇಡ್ ಆರಂಭವಾಯಿತು. ಬಳಿಕ ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ನಾಲ್ಕನೇ ಕ್ರಮಾಂಖದಲ್ಲಿ ಬಂದ ರವೀಂದ್ರ ಜಡೇಜಾ ಅಗ್ಗಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ 22 ರನ್‌ಗಳಿಗೆ ವಿಕೆಟ್ ಕಳೆದುಕೊಂಡರೆ ಶ್ರೇಯಸ್ ಐಯ್ಯರ್ ಶೂನ್ಯ ಸಂಪಾದಿಸಿದರು. ಇನ್ನು ಶ್ರೀಕರ್ ಭರತ್ ಬ್ಯಾಟ್‌ನಿಂದ 17 ರನ್ ಮಾತ್ರವೇ ಬಂದಿದೆ. ಈ ಮೂಲಕ ಟೀಮ್ ಇಂಡಿಯಾ ಮೊದಲ ಅವಧಿಯಲ್ಲಿಯೇ ಭಾರೀ ಹಿನ್ನಡೆಯಲ್ಲಿದೆ.

ಭಾರತಕ್ಕೆ ಈ ಪ್ರಮಾಣದಲ್ಲಿ ಆಘಾತ ನೀಡಿದ್ದು ಆಸ್ಟ್ರೇಲಿಯಾದ ಸ್ಪಿನ್ ಜೋಡಿಯಾದ ಮ್ಯಾಥ್ಯೂ ಕನ್ನೇಮನ್ ಹಾಗೂ ನಾಥನ್ ಲಿಯಾನ್. ಇವರಿಬ್ಬರು ಕೂಡ ತಲಾ ಮೂರು ವಿಕೆಟ್ ಪಡೆದುಕೊಳ್ಳುವ ಮೂಲಕ ಭೋಜನ ವಿರಾಮಕ್ಕೂ ಮುನ್ನವೇ ಭಾರತ ತಂಡದ ಬ್ಯಾಟಿಂಗ್ ವಿಭಾಗದ ಮೇಲೆರಗಿದ್ದಾರೆ. ಇನ್ನು ಒಂದು ವಿಕೆಟ್ ಟಾಡ್ ಮರ್ಫಿ ಪಾಲಾಯಿತು.

ಅಂದ ಹಾಗೆ ಇಂದೋರ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಸ್ವತಃ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತೆ ಯಾವ ಆಟಗಾರನಿಂದಲೂ ಪ್ರದರ್ಶನ ಬಾರಲಿಲ್ಲ. ಸ್ವತಃ ರೋಹಿತ್ ಶರ್ಮಾ ಕೂಡ ವೈಫಲ್ಯ ಕಂಡಿದ್ದಾರೆ. ಆರಂಭದಿಂದಲೂ ಸ್ಪಿನ್‌ಗೆ ಅದ್ಭುತವಾಗಿ ಸ್ಪಂದಿಸುತ್ತಿರುವ ಪಿಚ್‌ನಲ್ಲಿ ಆಸಿಸ್ ನಾಯಕ ಸ್ಟೀವ್ ಸ್ಮಿತ್ ತಮ್ಮ ಬೌಲರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಆರಂಭಿಕ ಯಶಸ್ಸು ಸಾಧಿಸಿದ್ದಾರೆ.

ಇತ್ತಂಡಗಳ ಸ್ಕ್ವಾಡ್
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (WK), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಮಿಚೆಲ್ ಸ್ಟಾರ್ಕ್, ಅಥಾನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್

Story first published: Wednesday, March 1, 2023, 11:55 [IST]
Other articles published on Mar 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+