Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಸ್ ದಿಗ್ಗಜ ಶೇನ್ ವಾರ್ನ್ ದಾಖಲೆ ಮುರಿದ ನಾಥನ್ ಲಿಯಾನ್

Ind vs Aus 3rd Test: Nathan Lyon breaks Shane Warne record to become the most successful visiting bowler in Asia

ಆಸ್ಟ್ರೇಲಿಯಾದ ಅನುಭವಿ ಬೌಲರ್ ನಾಥನ್ ಲಿಯಾನ್ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಮೂಲಕ ತಾನು ಭಾರತ ಪ್ರವಾಸದಲ್ಲಿ ಯಾವಾಗಲೂ ಅತ್ಯುತ್ತಮ ಬೌಲರ್ ಎಂದ ಸಾರಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ದಾಖಲೆಯೊಂದನ್ನು ಮುರಿದಿದ್ದಾರೆ.

ಏಷ್ಯಾ ಖಂಡ ಪ್ರವಾಸ ಕೈಗೊಂಡು ಅತ್ಯಂತ ಹೆಚ್ಚು ವಿಕೆಟ್ ಒಡೆದ ಬೌಲರ್ ಎಂಬ ದಾಖಲೆಗೆ ಈಗ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಶೇನ್ ವಾರ್ನ್ ಹೆಸರಿನಲ್ಲಿತ್ತು. ಆದರೆ ಈ ದಾಖಲೆಯನ್ನು ನಾಥನ್ ಲಿಯಾನ್ ಈಗ ತಮ್ಮ ಹೆಸರಿಗೆ ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯಾದಲ್ಲಿ ನಾಥನ್ ಲಿಯಾನ್ 129 ಟೆಸ್ಟ್ ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ವಾರ್ನ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಔಟ್ ಮಾಡುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ. ಏಷ್ಯಾ ಪ್ರವಾಸದಲ್ಲಿ ಭಾರತದ ವಿರುದ್ಧ ಲಿಯಾನ್ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು 45 ವಿಕೆಟ್ ಪಡೆದುಕೊಂಡಿದ್ದಾರೆ.

ಈ ಮೂಲಕ ಈ ಅಪರೂಪದ ಪಟ್ಟಿಯಲ್ಲಿ ಲಿಯಾನ್ ವಾರ್ನ್ ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶೇನ್ ವಾರ್ನ್ ಏಷ್ಯಾದಲ್ಲಿ 127 ವಿಕೆಟ್ ಪಡೆದುಕೊಂಡಿದ್ದರೆ ಡೇನಿಯಲ್ ವೆಟ್ಟೋರಿ 98, ಡೇಲ್ ಸ್ಟೇಯ್ನ್ 92, ಜೇಮ್ಸ್ ಆಂಡರ್ಸನ್ 82, ಹಾಗೂ ಕೋರ್ಟ್ನೀ ವಾಲ್ಶ್ 77 ವಿಕೆಟ್ ಪಡೆದು ಈ ಪಟ್ಟಿಯಲ್ಲಿರುವ ಉಳಿದ ಐವರು ಬೌಲರ್‌ಗಳಾಗಿದ್ದಾರೆ.

ಮಿಂಚಿದ ಆಸಿಸ್ ಬೌಲರ್‌ಗಳು: ಇನ್ನು ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್‌ನಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನ ಟಾಸ್ ಸೋತು ಬೌಲಿಂಗ್ ನಡೆಸುವ ಸವಾಲು ಪಡೆದ ಆಸ್ಟ್ರೇಲಿಯಾ ತಂಡ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಸ್ಪಿನ್ನರ್‌ಗಳಾದ ಮ್ಯಾಥ್ಯೂ ಕನ್ನೇಮನ್ ಹಾಗೂ ನಾಥನ್ ಲಿಯೋನ್ ಭಾರತದ ಬ್ಯಾಟರ್‌ಗಳನ್ನು ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಕನ್ನೇಮನ್ 5 ವಿಕೆಟ್‌ಗಳ ಗೊಂಚಲು ಪಡೆದರೆ ಲಿಯಾನ್ 3 ವಿಕೆಟ್ ಪಡೆದರು.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 109 ರನ್‌ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರವಾಗಿ ಯಾವ ಜೋಡಿ ಕೂಡ ಕ್ರೀಸ್‌ನಲ್ಲಿ ನೆಲೆಯೂರಿ ಉತ್ತಮ ಜೊತೆಯಾಟ ನೀಡಲು ವಿಫಲವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲ ದಿನದ ಸಂಪೂರ್ಣ ಯಶಸ್ಸು ತನ್ನದಾಗಿಸಿದೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ಆಸಿಸ್ ಪಡೆ ಉತ್ತಮ ಪ್ರದರ್ಶನ ನೀಡುತ್ತಿದೆ.

ಇತ್ತಂಡಗಳ ಸ್ಕ್ವಾಡ್
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (WK), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಮಿಚೆಲ್ ಸ್ಟಾರ್ಕ್, ಅಥಾನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್

Story first published: Wednesday, March 1, 2023, 16:32 [IST]
Other articles published on Mar 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+