For Quick Alerts
ALLOW NOTIFICATIONS  
For Daily Alerts
 

ಇದು ಸಂಪೂರ್ಣ ತಂಡದ ನಿರ್ಧಾರವಾಗಿತ್ತು: ಸೋಲಿನ ಬಳಿಕ ನಾಯಕ ರೋಹಿತ್ ಹೇಳಿಕೆ

IND vs AUS 3rd Test: Rohit Sharma statement on pitch discussion said it is collective decision

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಕೂಡ ಮೂರನೇ ದಿನಕ್ಕೆ ಮುಕ್ತಾಯವಾಗಿದೆ. ಆದರೆ ಈ ಬಾರಿ ಭಾರತ ತಂಡಕ್ಕೆ ಪ್ರವಾಸಿ ಆಸ್ಟ್ರೇಲಿಯಾ ಸೋಲಿನ ರುಚಿ ತೋರಿಸಿದ್ದು ಸರಣಿಯಲ್ಲಿನ ಹಿನ್ನಡೆಯನ್ನು ಆಸ್ಟ್ರೇಲಿಯಾ 1-2ಕ್ಕೆ ತಗ್ಗಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿನ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಇಂದೋರ್‌ನಂಥಾ ಪಿಚ್‌ನಲ್ಲಿ ಆಡುವುದು ತಂಡದ ಒಟ್ಟಾರೆ ನಿರ್ಧಾರವಾಗಿತ್ತು ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಭಾರತ ಗೆದ್ದಾಗ ಯಾರೂ ಕೂಡ ಭಾರತದ ಬ್ಯಾಟಿಂಗ್ ಬಗ್ಗೆ ಮಾತನಾಡುವುದಿಲ್ಲ. ಆದರೆ ತಂಡ ಸೋತರೆ ತಂಡದ ಬ್ಯಾಟಿಂಗ್ ವಿಚಾರವಾಗಿ ಟೀಕೆಗಳು ಬರುತ್ತವೆ ಎಂದಿದ್ದಾರೆ.

ಇದು ಒಟ್ಟು ತಂಡದ ನಿರ್ಧಾರ

ಇದು ಒಟ್ಟು ತಂಡದ ನಿರ್ಧಾರ

"ಇಂಥಾ ಪಿಚ್‌ನಲ್ಲಿ ಆಡುವುದು ತಂಡದ ಒಟ್ಟಾರೆ ನಿರ್ಧಾರವಾಗಿತ್ತು. ಬ್ಯಾಟರ್‌ಗಳ ಮೇಲೆ ನಾಯವು ಹೆಚ್ಚುವರಿ ಒತ್ತಡವನ್ನು ಹೇರಲು ಬಯಸವುದಿಲ್ಲ. ನಾವು ಗೆದ್ದಾಗ ಯಾರು ಕೂಡ ಬ್ಯಾಟಿಂಗ್ ಬಗ್ಗೆ ಮಾತನಾಡುವುದಿಲ್ಲ. ನಾವು ಸೋಲು ಅನುಭವಿಸಿದಾಗ ಮಾತ್ರವೇ ಇದು ಸಾರ್ವಜನಿಕ ಚರ್ಚೆಯಾಗುತ್ತದೆ. ತಾವು ತಂಡವಾಗಿ ಇಂಥಾ ಪಿಚ್‌ನಲ್ಲಿ ಆಡುವ ನಿರ್ಧಾರವನ್ನು ತೆಗೆದುಕೊಂಡಿದ್ದೆವು. ನಮಗೆ ಬ್ಯಾಟಿಂಗ್ ನಡೆಸಲು ಕೂಡ ಇದು ಸವಾಲಾಗಲಿದೆ ಎಂಬುದು ತಿಳಿದಿದ್ದರೂ ನಾವು ಅದನ್ನು ಎದುರಿಸಲು ಸಿದ್ಧವಾಗಿದ್ದೆವು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಪಿಚ್ ಬಗ್ಗೆ ಮಾತನಾಡಿ ಸಾಕಾಗಿದೆ ಎಂದ ರೋಹಿತ್

ಪಿಚ್ ಬಗ್ಗೆ ಮಾತನಾಡಿ ಸಾಕಾಗಿದೆ ಎಂದ ರೋಹಿತ್

ಇನ್ನು ಇಂದೋರ್ ಪಿಚ್‌ ಬಗೆಗಿನ ಚರ್ಚೆಗೂ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಚ್ ಬಗ್ಗೆ ಮಾತನಾಡಿ ಸಾಕಾಗಿದೆ ಎಂದ ರೋಹಿತ್ ಶರ್ಮಾ ಭಾರತದಲ್ಲಿ ಟೆಸ್ಟ್ ಆಡಿದಾಗ ಯಾವಾಗಲೂ ಪಿಚ್ ಬಗ್ಗೆಯೇ ಚರ್ಚೆಯಾಗುತ್ತದೆ ಎಂದಿದ್ದಾರೆ. ಇಂದೋರ್‌ನಲ್ಲಿ ಎರಡು ತಂಡಗಳು ಕೂಡ ಬ್ಯಾಟಿಂಗ್ ನಡೆಸಲು ಸಾಕಷ್ಟು ಪರದಾಡಿದ್ದು ಆತಿಥೇಯ ಭಾರತ ತಂಡ ಇಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 163 ರನ್‌ಗಳಿಸಿದ್ದಾರೆ.

"ಈಗ ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಪ್ರತಿ ಭಾರಿ ನಾವು ಭಾರತದಲ್ಲಿ ಆಡಿದಾಗಲೂ ಪಿಚ್ ಚರ್ಚೆಯ ಕೇಂದ್ರ ಬಿಂದುವಾಗಿರುತ್ತದೆ. ಯಾರೂ ಕೂಡ ನನ್ನಲ್ಲಿ ಲಿಯಾನ್ ಬಗ್ಗೆಯಾಗಲಿ ಪೂಜಾರ ಹಾಗೂ ಖವಾಜಾ ಎಷ್ಟು ಉತ್ತಮವಾಗಿ ಆಡಿದರು ಎಂಬುದನ್ನು ಕೇಳುವುದೇ ಇಲ್ಲ. ಅದರ ಬಗ್ಗೆ ಕೇಳಿದರೆ ನಾವು ವಿವರವಾಗಿ ಹೇಳಬಹುದು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

IND vs AUS 3rd Test: ಭಾರತ ತಂಡದಲ್ಲಿ ಆತನೊಬ್ಬ ಇದ್ದಿದ್ದರೆ ಇವರಿಬ್ಬರ ಆಟ ನಡೆಯುತ್ತಿರಲಿಲ್ಲ; ಕನೇರಿಯಾ

ಕೆಲ ಆಟಗಾರರು ಒತ್ತಡದಲ್ಲಿದ್ದಾರೆ

ಕೆಲ ಆಟಗಾರರು ಒತ್ತಡದಲ್ಲಿದ್ದಾರೆ

"ನಾವು ಆಡಲು ಬಯಸುವುದು ಇಂಥಾ ಪಿಚ್‌ನಲ್ಲಿಯೇ.ಇದು ನಮ್ಮ ಸಾಮರ್ಥ್ಯ. ಹೊರಗಡೆ ಜನರು ಏನು ಮಾತನಾಡುತ್ತಾರೆ ಎಂಬುದನ್ನು ನಾವು ತೆಲೆಕೆಡಿಸುವುದಿಲ್ಲ. ನಾವು ಫಲಿತಾಂಶಗಳನ್ನು ಪಡೆಯದಿದ್ದರೆ ಅದು ವಿಭಿನ್ನವಾಗಿರುತ್ತಿತ್ತು. ಆದರೆ ನಾವು ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ಕೆಲ ಬ್ಯಾಟರ್‌ಗಳು ಒತ್ತಡದಲ್ಲಿದ್ದಾರೆ, ಕೆಲವು ಆಟಗಾರರು ಕಠಿಣ ಫಾರ್ಮ್‌ನಲ್ಲಿದ್ದಾರೆ ಆದರೆ ಅದು ಸರಿ ಹೋಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಇಂದೋರ್ ಟೆಸ್ಟ್ ಮೂರು ದಿನಕ್ಕೆ ಮುಕ್ತಾಯವಾದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂತಿಮ ಟೆಸ್ಟ್‌ಗಾಗಿ ಅಹ್ಮದಾಬಾದ್‌ಗೆ ಪ್ರಯಾಣಿಸಲಿದೆ. ಮಾರ್ಚ್ 9ರಿಂದ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆರಂಭವಾಗಲಿದೆ.

Story first published: Friday, March 3, 2023, 14:50 [IST]
Other articles published on Mar 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+