Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND Vs AUS 4th Test: ಇಶಾನ್ ಕಿಶನ್ ಏನು ನಿಮ್ಮ ಸೇವಕನಾ? ರೋಹಿತ್ ಶರ್ಮಾ ವಿರುದ್ಧ ಅಭಿಮಾನಿಗಳ ಕೋಪ

IND Vs AUS 4th Test: Fans Slam Rohit Sharma For Trying To Slap Ishan Kishan During The Drinks Break

ಭಾರತ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಯುವ ಕ್ರಿಕೆಟಿಗ ಇಶಾನ್ ಕಿಶನ್ ಜೊತೆ ನಡೆದುಕೊಂಡಿರುವ ರೀತಿಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಯುವ ಕ್ರಿಕೆಟಿಗನಿಗೆ ರೋಹಿತ್ ಶರ್ಮಾ ಅಗೌರವ ತೋರಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಈ ಘಟನೆ ನಡೆಯಿತು. ಇಶಾನ್ ಕಿಶನ್ ಫೀಲ್ಡರ್ ಗಳಿಗೆ ನೀರಿನ ಬಾಟಲಿಯನ್ನು ನೀಡಲು ತೆರಳಿದರು, ರೋಹಿತ್ ಶರ್ಮಾ ನೀರು ಕುಡಿದು ಬಾಟಲಿಯನ್ನು ವಾಪಸ್ ಕೊಡುವಾಗ ಬಾಟಲ್ ಕೈಜಾರಿ ನೆಲಕ್ಕೆ ಬಿದ್ದಿತು.

ಅದನ್ನು ಎತ್ತಿಕೊಳ್ಳಲು ವಾಪಸ್ ಬಂದ ಇಶಾನ್‌ ಕಿಶನ್‌ರನ್ನು ರೋಹಿತ್ ಶರ್ಮಾ ಹೊಡೆಯಲು ಯತ್ನಿಸಿದರೆ. ಆದರೆ, ಇಶಾನ್ ಕಿಶನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಲುಗೆಯಿಂದ ರೋಹಿತ್ ಶರ್ಮಾ ಇಶಾನ್‌ ಕಿಶನ್‌ಗೆ ಹೊಡೆಯಲು ಯತ್ನಿಸಿದರೂ, ಅದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಲವರು ರೋಹಿತ್ ಶರ್ಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶಾನ್‌ರನ್ನು "ಮ್ಯಾನ್‌ಹ್ಯಾಂಡ್ಲಿಂಗ್" ಮಾಡಲು ಯತ್ನಿಸಿದ್ದಾರೆ, ಮತ್ತು ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಂದೋರ್ ಟೆಸ್ಟ್‌ನಲ್ಲಿ ಕೋಪಗೊಂಡಿದ್ದ ರೋಹಿತ್

ಇಂದೋರ್ ಟೆಸ್ಟ್‌ನಲ್ಲಿ ಕೂಡ ರೋಹಿತ್ ಶರ್ಮಾ ಇಶಾನ್ ಕಿಶನ್ ಜೊತೆ ಭಾವೋದ್ರಿಕ್ತ ಸಂಭಾಷಣೆಗಳ ವಿಡಿಯೋ ಆನ್‌ಲೈನ್‌ಲ್ಲಿ ವೈರಲ್ ಆಗಿತ್ತು. ಪೂಜಾರ ಬ್ಯಾಟಿಂಗ್ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಕೋಪದಲ್ಲಿ ಮಾತನಾಡಿದ್ದರು.

ರೋಹಿತ್ ಶರ್ಮಾ ಇಶಾನ್ ಕಿಶನ್ ಜೊತೆ ಸಲುಗೆಯನ್ನು ಹೊಂದಿರುವುದು ನಿಜ, ಐಪಿಎಲ್‌ನಲ್ಲಿ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಾರೆ. ಆದರೂ, ರೋಹಿತ್ ನಾಯಕನಾಗಿ ಆಟಗಾರರ ಮೇಲೆ ಕೋಪ ತೋರಿಸುವುದು ಉತ್ತಮವಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ರೋಹಿತ್ ಶರ್ಮಾ ಇಶಾನ್‌ ಕಿಶನ್‌ರನ್ನು ಹೊಡೆಯಲು ಯತ್ನಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಕೆಲವರು, "ಇಶಾನ್ ಕಿಶನ್ ಏನು ನಿಮ್ಮ ಮನೆ ಕೆಲಸದವರಾ? ಭಾರತ ತಂಡದ ನಾಯಕನಾಗಿ ಕಿರಿಯ ಆಟಗಾರರ ಜೊತೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

IND Vs AUS 4th Test: Fans Slam Rohit Sharma For Trying To Slap Ishan Kishan During The Drinks Break

ಉತ್ತಮ ಸ್ಥಿತಿಯಲ್ಲಿ ಆಸ್ಟ್ರೇಲಿಯಾ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಎರಡನೇ ದಿನವೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡಿದ್ದು 400 ರನ್‌ಗಳ ಗಡಿ ದಾಟಿದೆ. ಬ್ಯಾಟಿಂಗ್‌ಗೆ ನೆರವಾಗಿರುವ ಪಿಚ್‌ನಲ್ಲಿ ಆಸ್ಟ್ರೇಲಿಯಾ ಶಿಸ್ತಿನ ಬ್ಯಾಟಿಂಗ್ ಮಾಡುತ್ತಿದೆ.

ಕ್ಯಾಮೆರಾನ್ ಗ್ರೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಉಸ್ಮಾನ್ ಖವಾಜಾ ಬ್ಯಾಟಿಂಗ್ ಮುಂದುವರೆಸಿದ್ದು ಅಜೇಯ 170 ರನ್ ಗಳಿಸಿ ದ್ವಿಶತಕ ಸಿಡಿಸುವತ್ತ ಮುನ್ನಡೆದಿದ್ದಾರೆ.

Story first published: Friday, March 10, 2023, 14:03 [IST]
Other articles published on Mar 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+