Steve Smith: ಭಾರತದ ನೆಲದಲ್ಲಿ ಅದುವೇ ನಮ್ಮ ದೊಡ್ಡ ಸಾಧನೆಯಾಗಲಿದೆ: ಅಹ್ಮದಾಬಾದ್ ಟೆಸ್ಟ್‌ಗೂ ಮುನ್ನ ಸ್ಟೀವ್ ಸ್ಮಿತ್ ಹೇಳಿಕೆ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಗುರುವಾರದಿಂದ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಈ ಪಂದ್ಯಕ್ಕಾಗಿ ಎರಡು ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸಿದ್ದು ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ. ಈ ಪಂದ್ಯಕ್ಕೂ ಮುನ್ನಾದಿನ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದು ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲ್ಲುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ತಂಡ ಅಂತಿಮ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು ಡ್ರಾ ಗೊಳಿಸಿದರೂ ಅದು ಶ್ರೇಷ್ಠ ಸಾಧನೆಯಾಗಲಿದೆ ಎಂದಿದ್ದಾರೆ. ಈ ಸರಣಿಯನ್ನು ಗೆಲ್ಲು ಸಾಧ್ಯವಾಗದಿದ್ದರೂ ಡ್ರಾ ಸಾಧಿಸಿದರೆ ಈ ತಂಡದ ಅತ್ಯಂತ ದೊಡ್ಡ ಸಾಧನೆ ಎನಿಸಲಿದೆ ಎಂದಿದ್ದಾರೆ ಆಸ್ ತಂಡದ ಹಂಗಾಮಿ ನಾಯಕ ಹಾಗೂ ಅನುಭವಿ ಆಟಗಾರ ಸ್ಟೀವ್ ಸ್ಮಿತ್.
"ನನ್ನ ಪ್ರಕಾರ ಈ ಸರಣಿಯನ್ನು ಡ್ರಾ ಗೊಳಿಸಲು ಸಾಧ್ಯವಾದರೆ ಅದು ಈ ತಂಡದ ದೊಡ್ಡ ಸಾಧನೆ ಎನಿಸಲಿದೆ. ಯಾವುದೇ ತಂಡಕ್ಕಾದರೂ ಅದು ಶ್ರೇಷ್ಠ ಸಾಧನೆ. ಅದು ಕೂಡ ಭಾರತಕ್ಕೆ ಆಗಮಿಸಿ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಸಣ್ಣ ಸಾಧನೆಯಲ್ಲ" ಎಂದಿದ್ದಾರೆ. ಮುಂದುವರಿದು ಅವರು, "ದುರದೃಷ್ಟವಶಾತ್ ಸರಣಿಯ ಆರಂಭದಲ್ಲಿ ಗೆಲುವು ಸಾಧಿಸಲು ನಮಗೆ ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಸರಣಿ ಗೆಲ್ಲುವ ಅವಕಾಶವೂ ನಮಗಿತ್ತು. ಆದರೆ ಈಗ ಡ್ರಾ ಸಾಧಿಸಿದರೂ ಅದು ದೊಡ್ಡ ಸಾಧನೆಯೆನಿಸಲಿದೆ" ಎಂದಿದ್ದಾರೆ.
ಇನ್ನು ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಂದೋರ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಅಂತರದ ಅಮೋಘ ಗೆಲುವು ಸಾಧಿಸಿತು. ಹೀಗಾಗಿ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಆದರೆ ಭಾರತ ತಂಡ ಇನ್ನು ಕೂಡ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿಲ್ಲ. ಅಂತಿಮ ಪಂದ್ಯದಲ್ಲಿ ಗೆದ್ದರೆ ಫೈನಲ್‌ನಲ್ಲಿ ಭಾರತದ ಸ್ಥಾನ ಖಚಿತವಾಗಲಿದೆ.
ಸಂಭಾವ್ಯ ಆಡುವ ಬಳಗ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್.
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವ್ ಸ್ಮಿತ್ (ನಾಯಕ), ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪೀಟರ್ ಹ್ಯಾಂಡ್ಸ್ಕಾಂಬ್, ಮಿಚೆಲ್ ಸ್ಟಾರ್ಕ್, ಮ್ಯಾಟ್ ಕುನ್ನೇಮನ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications