Ind vs Aus 4th Test: ಈ ಮೂರು ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಭಾರತ ಗೆಲ್ಲಲು ಸಾಧ್ಯ

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಸೋಲನುಭವಿಸಿದೆ. ಇಂದೋರ್ ನಲ್ಲಿ ನಡೆದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ಪ್ರದರ್ಶನ ನೀಡಿತು.
ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ತಂತ್ರಗಳನ್ನು ಸರಿಯಾಗಿ ಜಾರಿಗೊಳಿಸುವ ಮೂಲಕ ಸುಲಭ ಜಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಿನ ಸುಳಿಗೆ ಸಿಲುಕಿತು.
ಆಸ್ಟ್ರೇಲಿಯಾ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 197 ರನ್ ಕಲೆಹಾಕುವ ಮೂಲಕ 88 ಅಮೂಲ್ಯ ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು. 163 ರನ್‌ಗಳಿಗೆ ಆಲೌಟ್ ಆಗುವ ಮೂಲಕ 75 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಒಂದು ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದ ಆಸ್ಟ್ರೇಲಿಯಾ ಮೂರೇ ದಿನಕ್ಕೆ ಪಂದ್ಯವನ್ನು ಮುಗಿಸಿ, 9 ವಿಕೆಟ್‌ಗಳ ಜಯ ಸಾಧಿಸಿತ್ತು.
ಮೂರನೇ ಟೆಸ್ಟ್ ಪಂದ್ಯವನ್ನು ಸೋತರೂ ಭಾರತ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡ ಹಲವು ವಿಚಾರಗಳಲ್ಲಿ ಎಡವಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸಬೇಕಾದರೆ ಈ ಮೂರು ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿದೆ.

ಸುಧಾರಿಸಬೇಕಿದೆ ಭಾರತದ ಬ್ಯಾಟಿಂಗ್
ಇಡೀ ಸರಣಿಯಲ್ಲಿ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಸ್ಥಿರವಾದ ಪ್ರದರ್ಶನ ನೀಡಿಲ್ಲ. ನಾಯಕ ರೋಹಿತ್ ಶರ್ಮಾ ಮಾತ್ರ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು, ಅವರು ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಂಡಿಲ್ಲ.
ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ವಿಫಲವಾದ ಬಳಿಕ ಶುಭಮನ್ ಗಿಲ್ ಮೂರನೇ ಪಂದ್ಯದಲ್ಲಿ ಅವಕಾಶ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಚೇತೇಶ್ವರ ಪೂಜಾರ ಈ ಸರಣಿಯಲ್ಲಿ ಕೇವಲ ಒಂದು ಅರ್ಧಶತಕವನ್ನು ಹೊಂದಿದ್ದಾರೆ, ಆದರೆ ವಿರಾಟ್ ಕೊಹ್ಲಿ ಇನ್ನೂ ಒಂದು ಅರ್ಧಶತಕವನ್ನೂ ಗಳಿಸಿಲ್ಲ.
ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲೇ ಭಾರತದ ಬ್ಯಾಟರ್ ಗಳು ಹೀಗೆ ವಿಫಲವಾದರೆ ಇನ್ನು ವಿದೇಶಿ ಪಿಚ್‌ಗಳಲ್ಲಿ ಹೇಗೆ ಎನ್ನುವಂತಾಗಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಕೆಳ ಕ್ರಮಾಂಕದ ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕಾರಣ ಭಾರತದ ಬ್ಯಾಟಿಂಗ್ ವೈಫಲ್ಯ ಪರಿಣಾಮ ಬೀರಿರಲಿಲ್ಲ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ಜೋಡಿಯ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ್ದು ಗೆಲುವಿಗೆ ಕಾರಣವಾಗಿತ್ತು.
ಅಹಮದಾಬಾದ್ ಪಿಚ್ ಬ್ಯಾಟಿಂಗ್‌ಗೆ ನೆರವಾಗುವ ಪಿಚ್ ಎನಿಸಿಕೊಂಡಿದೆ. ಏನೇ ಆದರೂ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ರನ್ ಗಳಿಸಲೇಬೇಕಿದೆ. ಹಾಗಾದರೆ ಮಾತ್ರ ಭಾರತಕ್ಕೆ ಗೆಲುವಿನ ಅವಕಾಶ ಇರುತ್ತದೆ.

ಪಿಚ್ ನಿರ್ಮಾಣದಲ್ಲಿ ಜಾಗೃತಿ ಬೇಕು
ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ನಂತರ ಮೂರನೇ ಟೆಸ್ಟ್‌ಗೂ ಸ್ಪಿನ್ ಪಿಚ್ ನಿರ್ಮಾಣ ಮಾಡಿದ್ದು ಭಾರತಕ್ಕೆ ಮುಳುವಾಯಿತು ಎನಿಸುತ್ತದೆ. ಅತಿಯಾದ ಆತ್ಮವಿಶ್ವಾಸ, ಜಡೇಜಾ ಅಶ್ವಿನ್ ಮೇಲೆ ಹೆಚ್ಚಿನ ಅವಲಂಬನೆ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ತೀರಾ ಸ್ಪಿನ್‌ಗೆ ಸಾಕಷ್ಟು ನೆರವು ನೀಡುವ ಪಿಚ್‌ಗಳನ್ನು ನಿರ್ಮಾಣ ಮಾಡುವುದು ಭಾರತ ತಂಡಕ್ಕೆ ಅಪಾಯಕಾರಿ. ಭಾರತದ ಪ್ರಮುಖ ಬ್ಯಾಟರ್ ಗಳು ಸ್ಪಿನ್ ವಿರುದ್ಧ ರನ್ ಗಳಿಸಲು ವಿಫಲವಾಗುತ್ತಿರುವುದು ತಂಡಕ್ಕೆ ಸಮಸ್ಯೆಯಾಗಿದೆ.
ಭಾರತ ತಂಡ ಅಹಮದಾಬಾದ್ ಪಂದ್ಯಕ್ಕಾಗಿ ಸಿದ್ಧಪಡಿಸಿದ ಪಿಚ್ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಮನಾಗಿ ನೆರವಾಗುವ ಪಿಚ್ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕಿದೆ.

ಡಿಆರ್‌ಎಸ್ ಬಗ್ಗೆ ರೋಹಿತ್ ಶರ್ಮಾ ಸುಧಾರಿಸಬೇಕು
ಇಂದೋರ್ ಟೆಸ್ಟ್‌ನಲ್ಲಿ ಭಾರತಕ್ಕೆ ಮುಳುವಾದ ಅಂಶಗಳನ್ನು ಡಿಆರ್‌ಎಸ್ ನಿರ್ಧಾರ ಕೂಡ ಒಂದಾಗಿದೆ. ಭಾರತ ತೆಗೆದುಕೊಂಡ ಡಿಆರ್‌ಎಸ್ ನಿರ್ಧಾರಗಳಲ್ಲಿ ಬಹುತೇಕ ಎಲ್ಲವೂ ವಿಫಲವಾಗಿದ್ದವು. 3ನೇ ಟೆಸ್ಟ್‌ನಲ್ಲಿ ಭಾರತ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಫಲಿತಾಂಶವೇ ಬದಲಾಗುವ ಸಾಧ್ಯತೆ ಇರುತ್ತಿತ್ತು.
ಅಹಮದಾಬಾದ್ ಟೆಸ್ಟ್‌ನಲ್ಲಿ ಭಾರತ ಡಿಆರ್‌ಎಸ್ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ವಿಕೆಟ್ ಕೀಪರ್ ಶ್ರೀಕರ್ ಭರತ್ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು, ನಾಯಕನಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications