Ind vs Aus 4th Test: ರೋಹಿತ್ ಶರ್ಮಾ ಯೋಜನೆಯಲ್ಲಿ ಬದಲಾವಣೆ : ಮತ್ತೊಂದು ಸ್ಪಿನ್ ಸ್ನೇಹಿ ಪಿಚ್?

ಇಂದೋರ್‌ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯದಲ್ಲಿ ಸೋತ ಬಳಿಕ, 4ನೇ ಪಂದ್ಯಕ್ಕಾಗಿ ಭಾರತ ತಂಡದ ಯೋಜನೆಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಹಮದಾಬಾದ್‌ನಲ್ಲಿ ಮತ್ತೊಂದು ಸ್ಪಿನ್ ಸ್ನೇಹಿ ಪಿಚ್ ನಿರ್ಮಾಣವಾಗುವ ಸಾಧ್ಯತೆ ಇದೆ.
ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಬಳಿಕ ಇಂದೋರ್ ಪಿಚ್ ಸ್ಪಿನ್ ಸ್ನೇಹಿ ಎಂದು ಅರಿತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಅಹಮದಾಬಾದ್‌ನಲ್ಲಿ ಗ್ರೀನ್ ಪಿಚ್ ನಿರ್ಮಾಣ ಮಾಡಲು ಸಲಹೆ ನೀಡಿದ್ದರು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುವ ಕಾರಣ ಗ್ರೀನ್ ಪಿಚ್‌ನಲ್ಲಿ ಆಡುವ ಲೆಕ್ಕಾಚಾರದಲ್ಲಿದ್ದರು.
ಆದರೆ, ಇಂದೋರ್ ಟೆಸ್ಟ್‌ನಲ್ಲಿ ಸೋಲನುಭವಿಸಿದ ಬಳಿಕ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ನೇರವಾಗಿ ಅರ್ಹತೆ ಪಡೆಯಲು ಅಹಮದಾಬಾದ್‌ನಲ್ಲಿ ನಡೆಯಲಿರುವ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾಗಿದೆ.
ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಿರುವ ನಾಯಕ ರೋಹಿತ್ ಶರ್ಮಾ ಕೊನೆಯ ಪಂದ್ಯದಲ್ಲಿ ಸ್ಪಿನ್ ಸ್ನೇಹಿ ಪಿಚ್ ನಿರ್ಮಾಣ ಮಾಡಲು ಸೂಚನೆ ನೀಡುವ ಸಾಧ್ಯತೆ ಇದೆ.

ಇಂದೋರ್ ಟೆಸ್ಟ್‌ನಲ್ಲಿ ಸೋಲು
ಇಂದೋರ್ ಟೆಸ್ಟ್‌ನಲ್ಲಿ ಭಾರತ 9 ವಿಕೆಟ್‌ಗಳ ಸೋಲನುಭವಿಸಿತು. ಸ್ಪಿನ್‌ಗೆ ಹೆಚ್ಚಿನ ನೆರವು ಸಿಕ್ಕಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳು ಮಿಂಚಿದ್ದರು ನಾಥನ್ ಲಿಯಾನ್ 11 ವಿಕೆಟ್ ಪಡೆಯುವ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದರು. ಮೂರನೇ ಟೆಸ್ಟ್‌ನಲ್ಲಿ ಒಟ್ಟು 31 ವಿಕೆಟ್‌ಗಳು ಉರುಳಿದ್ದು, ಅದರಲ್ಲಿ 26 ವಿಕೆಟ್‌ಗಳನ್ನು ಸ್ಪಿನ್ನರ್ ಗಳೇ ಪಡೆದುಕೊಂಡಿದ್ದರು.
ಇಂದೋರ್ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ಅರ್ಹತೆ ಪಡೆಯಲು ಇನ್ನೊಂದು ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾಗಿದೆ.

ಸಾಮಾನ್ಯ ಪಿಚ್ ನಿರ್ಮಾಣ
"ಭಾರತ ತಂಡದ ಆಡಳಿತ ಮಂಡಳಿಯಿಂದ ಯಾವುದೇ ಸೂಚನೆಗಳು ಬಂದಿಲ್ಲ, ಸ್ಥಳೀಯ ಕ್ಯುರೇಟರ್‌ಗಳು ನಾವು ಯಾವಾಗಲೂ ಋತುವಿನ ಮೂಲಕ ಮಾಡಿದಂತೆ ಸಾಮಾನ್ಯ ಟ್ರ್ಯಾಕ್ ಅನ್ನು ಸಿದ್ಧಪಡಿಸುತ್ತಿದ್ದಾರೆ" ಎಂದು ರಾಜ್ಯದ ಸಂಘದ ಮೂಲ ಪಿಟಿಐಗೆ ತಿಳಿಸಿರುವುದಾಗಿ ವರದಿ ಮಾಡಿದೆ.
ಬಿಸಿಸಿಐ ಅಥವಾ ತಂಡದ ಆಡಳಿತದಿಂದ ಯಾವುದೇ ಸೂಚನೆಯಿಲ್ಲದೆ, ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಕ್ಯುರೇಟರ್‌ಗಳು ಉತ್ತಮ ಬ್ಯಾಟಿಂಗ್ ಪಿಚ್ ಅನ್ನು ಸಿದ್ಧಪಡಿಸುತ್ತಿದ್ದಾರೆ.

ರಣಜಿ ಪಂದ್ಯದಲ್ಲಿ ಬಂದಿತ್ತು 500 ರನ್
ಕೊನೆಯ ರಣಜಿ ಪಂದ್ಯದಲ್ಲಿ ರೈಲ್ವೇಸ್ ಗುಜರಾತ್ ವಿರುದ್ಧ 508 ರನ್‌ಗಳನ್ನು ಕಲೆಹಾಕಿತ್ತು. ಗುಜರಾತ್ ಎರಡೂ ಇನ್ನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ರೈಲ್ವೆ ಇನ್ನಿಂಗ್ಸ್ ಮತ್ತು 56 ರನ್‌ಗಳಿಂದ ಗೆದ್ದಿತ್ತು, ಅದೇ ಮಾದರಿಯ ವಿಕೆಟ್ ಮತ್ತೆ ನಿರ್ಮಾಣವಾಗುವ ಸಾಧ್ಯತೆ ಇದೆ.
ಬಿಸಿಸಿಐ ಕ್ಯುರೇಟರ್‌ಗಳಾದ ತಪೋಶ್ ಚಟರ್ಜಿ ಮತ್ತು ಆಶಿಶ್ ಭೌಮಿಕ್ ಅಧಿಕಾರ ವಹಿಸಿಕೊಂಡ ನಂತರ ಪಿಚ್ ಮೇಲಿನ ಹುಲ್ಲನ್ನು ಸಂಪೂರ್ಣವಾಗಿ ಕತ್ತರಿಸುವ ಮೂಲಕ ಒರಟಾದ ಕಪ್ಪು ಮಣ್ಣಿನ ಮೇಲ್ಮೈಯನ್ನು ಉಳಿಸಲಾಗುತ್ತದೆ. ಇದು ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡಲಿದೆ.

ಟೆಸ್ಟ್ ಸರಣಿಗೆ ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್ , ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಸ್ವೆಪ್ಸನ್ ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications