For Quick Alerts
ALLOW NOTIFICATIONS  
For Daily Alerts
 

IND Vs AUS 4th Test: ಸಿಂಗಲ್ ನೀಡಲು ನಿರಾಕರಿಸಿದ ಭರತ್: ಖಡಕ್ಕಾಗಿ ಲುಕ್ ಕೊಟ್ಟ ವಿರಾಟ್ ಕೊಹ್ಲಿ

IND Vs AUS 4th Test: Virat Kohli Gave A Stare To KS Bharat For Refusing To Give A Single

ವಿರಾಟ್ ಕೊಹ್ಲಿ 3 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದರು. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಸದ್ಯ ಭಾರತ ಮೇಲುಗೈ ಸಾಧಿಸಿದೆ.

ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲವಾಗಿದ್ದ ಕೊಹ್ಲಿ 4ನೇ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ. 150 ರನ್‌ಗಳ ಗಡಿಯನ್ನು ದಾಟಿರುವ ಕೊಹ್ಲಿ ಸದ್ಯ ದ್ವಿಶತಕ ಗಳಿಸುವತ್ತ ಮುನ್ನಡೆಯುತ್ತಿದ್ದಾರೆ.

ಭಾರತದ ಎಲ್ಲಾ ಬ್ಯಾಟರ್ ಗಳು ಉತ್ತಮ ಆಟ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಶ್ರೀಕರ್ ಭರತ್ ಕೂಡ 64 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು. ಶ್ರೀಕರ್ ಭರತ್ ಅಮೂಲ್ಯ 44 ರನ್ ಗಳಿಸಿ ಔಟಾದರು. 2 ಬೌಂಡರಿ 3 ಸಿಕ್ಸರ್ ಸಹಿತ ಉತ್ತಮವಾಗಿ ಆಡುತ್ತಿದ್ದ ಅವರು ಲಿಯಾನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಫಿಟ್‌ನೆಸ್ ಹೊಂದಿರುವ ಆಟಗಾರ. ಬೌಂಡರಿ ಮಾತ್ರವಲ್ಲದೆ, ರನ್‌ಗಳನ್ನು ಓಡುವುದರಲ್ಲಿ ಕೂಡ ಸಾಕಷ್ಟು ವೇಗವಾಗಿರುತ್ತಾರೆ. ಅವರ ಜೊತೆ ಇನ್ನೊಂದು ಬದಿಯಲ್ಲಿ ಆಡುವವರು ಕೂಡ ಕೊಹ್ಲಿ ವೇಗಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.

ಭರತ್‌ಗೆ ಕಣ್ಣಲ್ಲೇ ವಾರ್ನಿಂಗ್

ವಿರಾಟ್ ಕೊಹ್ಲಿ-ಕೆಎಸ್ ಭರತ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಒಮ್ಮೆ ಚೆಂಡನ್ನು ಸ್ಕ್ವೇರ್ ಲೆಗ್‌ಗೆ ಕಡೆಗೆ ಬಾರಿಸಿದರು, ನಂತರ ಸಿಂಗಲ್ ರನ್ ಓಡಲು ಯತ್ನಿಸಿದರು. ಕೊಹ್ಲಿ ಸ್ವಲ್ಪ ದೂರ ಓಡಿದ ನಂತರ ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿದ್ದ ಕೆಎಸ್ ಭರತ್ ರನ್ ಓಡಲು ನಿರಾಕರಿಸಿ ಕೊಹ್ಲಿಯನ್ನು ವಾಪಸ್ ಕಳಿಸಿದರು.

ತಕ್ಷಣ ಎಚ್ಚೆತ್ತ ವಿರಾಟ್ ಕೊಹ್ಲಿ ಸುರಕ್ಷಿತವಾಗಿ ವಾಪಸ್‌ ಕ್ರೀಸ್‌ಗೆ ತೆರಳುವಲ್ಲಿ ಯಶಸ್ವಿಯಾದರು. ಆದರೆ, ಭರತ್ ಮಾಡಿದ ಕೆಲಸದಿಂದ ಕೊಹ್ಲಿ ಕುಪಿತಗೊಂಡಿದ್ದು ಸ್ಪಷ್ಟವಾಗಿ ಕಾಣಿಸಿತು. ಕ್ರೀಸ್‌ಗೆ ತೆರಳಿದ ನಂತರ ತಿರುಗಿ ಭರತ್‌ಗೆ ಕಣ್ಣಿನಲ್ಲೇ ವಾರ್ನಿಂಗ್ ನೀಡಿದರು.

IND Vs AUS 4th Test: Virat Kohli Gave A Stare To KS Bharat For Refusing To Give A Single

ಅತ್ಯುತ್ತಮ ಸ್ಥಿತಿಯಲ್ಲಿ ಭಾರತ

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಸ್ಥಿತಿಯಲ್ಲಿದೆ. ಶುಭಮನ್ ಗಿಲ್ 126 ರನ್ ಗಳಿಸಿ ಔಟಾದ ನಂತರ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ ವಿರಾಟ್ ಕೊಹ್ಲಿ ತಮ್ಮ 75ನೇ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಿದರು.

ಅಲ್ಲದೆ 150 ರನ್‌ಗಳನ್ನು ಪೂರೈಸಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇಡೀ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಅಕ್ಷರ್ ಪಟೇಲ್ ಕೂಡ ಅರ್ಧಶತಕ ಪೂರೈಸಿದ್ದು, ಶತಕ ಗಳಿಸುವತ್ತ ಮುನ್ನಡೆಯುತ್ತಿದ್ದಾರೆ. ಭಾರತ ಈಗಾಗಲೇ 500 ರನ್‌ಗಳನ್ನು ಪೂರೈಸಿದ್ದು ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಒಂದು ವೇಳೆ ಡ್ರಾ ಮಾಡಿಕೊಂಡರೆ, ಅದು ಶ್ರೀಲಂಕಾ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಫಲಿತಾಂಶಕ್ಕೆ ಕಾಯಬೇಕಾಗುತ್ತದೆ. ಶ್ರೀಲಂಕಾ ಎರಡು ಟೆಸ್ಟ್‌ಗಳಲ್ಲಿ ಒಂದು ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೂ ಭಾರತ ಫೈನಲ್‌ಗೆ ಅರ್ಹತೆ ಪಡೆಯಲಿದೆ.

Story first published: Sunday, March 12, 2023, 15:51 [IST]
Other articles published on Mar 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+