IND vs AUS 5Th Test: ಸಿಡ್ನಿ ಟೆಸ್ಟ್‌ನ ಎರಡನೇ ದಿನ ಬಿತ್ತು ಒಟ್ಟು 15 ವಿಕೆಟ್
ಭಾರತ ಐದನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ರನ್ ಮುನ್ನಡೆ
ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ ಸಿರಾಜ್ ಪ್ರಸಿದ್
ಆಫ್ ಸ್ಟಂಪ್ ಆಚೆಗಿನ ಚೆಂಡಿಗೆ ಬಲಿಯಾದ ವಿರಾಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು 6 ವಿಕೆಟ್ ಕಳೆದುಕೊಂಡಿದ್ದು 141 ರನ್ ಕಲೆ ಹಾಕಿದೆ. ಈ ಮೂಲಕ ತನ್ನ ಮುನ್ನಡೆಯನ್ನು 145 ರನ್‌ಗಳಿಗೆ ಹೆಚ್ಚಿಸಿಕೊಂಡಿದೆ. ಟೀಮ್ ಇಂಡಿಯಾದ ಪರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅಮೋಘ ಬ್ಯಾಟಿಂಗ್ ನಡೆಸಿ, ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು.
ಶನಿವಾರದ ಆಟವನ್ನು ಮುಂದುವರೆಸಿದ ಆಸ್ಟ್ರೇಲಿಯಾ 1 ವಿಕೆಟ್‌ಗೆ 9 ರನ್‌ಗಳಿಂದ ಆಟ ಮುಂದುವರಿಸಿ, ಮೊದಲ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. 4 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 141 ರನ್ ಕಲೆ ಹಾಕಿದೆ. ಭಾನುವಾರ ನಡೆಯಲಿರುವ ಮೂರನೇ ದಿನದಾಟವನ್ನು ಟೀಮ್ ಇಂಡಿಯಾದ ರವೀಂದ್ರ ಜಡೇಜಾ (ಅಜೇಯ 8 ರನ್), ವಾಷಿಂಗ್ಟನ್ ಸುಂದರ್ (ಅಜೇಯ 6 ರನ್) ಬ್ಯಾಟಿಂಗ್ ಆರಂಭಿಸಲಿದ್ದಾರೆ.

ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ
ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾದ 9 ಹಾಗೂ ಟೀಮ್ ಇಂಡಿಯಾದ 6 ವಿಕೆಟ್‌ಗಳು ಬಿದ್ದವು. ಪರಿಣಾಮ ಎರಡನೇ ದಿನದಾಟದಲ್ಲಿ ಒಟ್ಟು 15 ವಿಕೆಟ್ ಬಿದ್ದವು. ಆಸ್ಟ್ರೇಲಿಯಾದ ಪರ ಬ್ಯೂ ವೆಬ್‌ಸ್ಟಾರ್ ಅಮೋಘ ಪ್ರದರ್ಶನ ನೀಡಿದರು. ಇವರು ಆಸೀಸ್ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. 105 ಎಸೆತಗಳಲ್ಲಿ ವೆಬ್‌ಸ್ಟಾರ್ 57 ರನ್ ಸಿಡಿಸಿದರು. ಉಳಿದಂತೆ ಆಸೀಸ್ ಪರ ಸ್ಯಾಮ್ ಕನ್‌ಸ್ಟಾಸ್ 23, ಸ್ಟೀವನ್ ಸ್ಮಿತ್ 33, ಅಲೆಕ್ಸ್ ಕ್ಯಾರಿ 21, ಪ್ಯಾಟ್ ಕಮಿನ್ಸ್ 10 ರನ್ ಬಾರಿಸಿ ಹಿನ್ನಡೆಯ ಅಂತರವನ್ನು ಕಡಿಮೆ ಮಾಡಿದರು.
ಪ್ರಸಿದ್ಧ, ಸಿರಾಜ್‌ಗೆ 3 ವಿಕೆಟ್
ಭಾರತದ ಪರ ಪ್ರಸಿದ್ಧ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಹಾಗೂ ಜಸ್ಪ್ರಿತ್ ಬುಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು.

ಹಳೆಯ ದಾಟಿಯಲ್ಲಿ ವಿರಾಟ್ ಔಟ್
4 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲೇ ನಾಲ್ಕು ಬೌಂಡರಿ ಬಾರಿಸಿ ತಂಡದ ಮನಸ್ಥಿತಿಯನ್ನು ತಿಳಿಸಿದರು. ಕೆಎಲ್ ರಾಹುಲ್ 13 ರನ್ ಗಳಿಸಿದ್ದಾಗ ಬೋಲೆಂಡ್ಗೆ ಬೋಲ್ಡ್ ಆದರು. ಮೊದಲ ವಿಕೆಟ್‌ಗೆ ಈ ಜೋಡಿ 42 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಯಶಸ್ವಿ ಜೈಸ್ವಾಲ್ 23 ರನ್ ಬಾರಿಸಿ ಪೆವೆಲಿಯನ್ ಸೇರಿದರು.
ಶುಭಮನ್ ಗಿಲ್ 13 ಹಾಗೂ ವಿರಾಟ್ ಕೊಹ್ಲಿ 6 ರನ್ ಬಾರಿಸಿ ಔಟ್ ಆದರು. ವಿರಾಟ್ ಕೊಹ್ಲಿ ಮಾಡಿದ ತಪ್ಪನ್ನೇ ಬಾರ್ಡರ್ ಗವಾಸ್ಕರ್ ಸರಣಿಯುದ್ದಕ್ಕೂ ಮಾಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಪಂತ್ ಅಬ್ಬರ
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಕ್ಲಾಸ್ ಬ್ಯಾಟಿಂಗ್ ನಡೆಸುವಲ್ಲಿ ಕೊಂಚ ಹಿಂದೆ ಬಿದ್ದ ರಿಷಭ್ ಪಂತ್, ಇಂದು ತಮ್ಮ ನೈಜ ಆಟವನ್ನು ಆಡಿದರು. ಇವರು ಕೇವಲ 33 ಎಸೆತಗಳಲ್ಲಿ 184.84ರ ಸರಾಸರಿಯಲ್ಲಿ 61 ರನ್ ಸಿಡಿಸಿದರು. ಇದರಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳು ಸೇರಿವೆ. ಇವರ ಅಮೋಘ ಆಟದ ಫಲವಾಗಿ ಟೀಮ್ ಇಂಡಿಯಾದ ಮೊತ್ತ ಹಿಗ್ಗುತ್ತಾ ಸಾಗಿತು.
ಟೂರ್ನಿಯಲ್ಲಿ ಸ್ಥಿರವಾಗಿ ರನ್ ಕಲೆ ಹಾಕಿರುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 4 ರನ್‌ಗಳಿಗೆ ಆಟ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications