IND VS AUS Adelaide Test: ಪಿಂಕ್ ಬಾಲ್ ಎದುರಿಸಲು ಟೀಮ್ ಇಂಡಿಯಾ ಬ್ಯಾಟರ್ ಪರದಾಟ: 180 ರನ್‌ಗೆ ಆಲೌಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ವೈಫಲ್ಯ ಕಂಡು ಬಂದಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಜೊತೆಯಾಟವನ್ನು ನೀಡುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಪಿಂಕ್ ಬಾಲ್ ಗುರುತಿಸುವಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ಹಿಂದೆ ಬಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 180 ರನ್‌ಗಳಿಗೆ ಆಲೌಟ್ ಆಯಿತು.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸೇರಿದರೂ, ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರಿಗೆ ನೀಡಲಾಯಿತು. ಈ ವೇಳೆ ಯಶಸ್ವಿ ಜೈಸ್ವಾಲ್ ತಾವು ಎದುರಿಸಿದ ಮೊದಲ ಪಿಂಕ್ ಬೌಲ್‌ನಲ್ಲೇ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಿಂಕ್ ಬಾಲ್‌ನ ಮೊದಲ ಎಸೆತದಲ್ಲಿ ಔಟ್ ಆದ ಮೊದಲ ಆಟಗಾರ ಎಂಬ ಖ್ಯಾತಿ ಯಶಸ್ವಿ ಪಾಲಾಯಿತು.

ಎರಡನೇ ವಿಕೆಟ್‌ಗೆ 69 ರನ್ ಜೊತೆಯಾಟ
ಎರಡನೇ ವಿಕೆಟ್‌ಗೆ ಕೆಎಲ್ ರಾಹುಲ್ ಅವರನ್ನು ಸೇರಿಕೊಂಡ ಶುಭಮನ್ ಗಿಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಹಾಕಿಕೊಂಡ ರಣ ತಂತ್ರದಂತೆ ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಈ ಜೋಡಿ ಟೀಮ್ ಇಂಡಿಯಾದ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ ಎರಡನೇ ವಿಕೆಟ್‌ಗೆ 113 ರನ್ ಎದುರಿಸಿ 69 ರನ್ ಸೇರಿಸಿತು.
ಮೈದಾನದಲ್ಲಿ ನಡೆಯಿತು ಡ್ರಾಮಾ
ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಜೀವದಾನವನ್ನು ಪಡೆದರೂ ಇದನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ವಿಫಲರಾದರು. ರಾಹುಲ್ 18 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವಲ್ಲಿ ವಿಫಲರಾದರು. ಆದರೆ ಈ ವೇಳೆ ಬೌಲಿಂಗ್ ಮಾಡಲು ಬಂದ ಬೋಲೆಂಡ್ ಅವರ ಎಸೆತವನ್ನು ಗುರುತಿಸುವಲ್ಲಿ ವಿಫಲರಾಗಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಅಂಪೈರ್ ಇದನ್ನು ಔಟ್ ಎಂದು ನೀಡಿದರು. ರಾಹುಲ್ ಸುಮ್ಮನೆ ಪೆವಿಲಿಯನ್‌ನತ್ತ ಮುಖ ಮಾಡಿದ್ದರು. ವಿರಾಟ್ ಕೊಹ್ಲಿ ಸಹ ಡ್ರೆಸಿಂಗ್ ರೂಮ್ ಬಿಟ್ಟು ಬೌಂಡರಿ ಲೈನ್ ಕಡೆ ಬಂದು ಆಗಿತ್ತು. ಆದರೆ ಮೂರನೇ ಅಂಪೈರ್ ನೋಬಾಲ್ ಎಂದು ನೀಡಿದರು. ಇದರ ಲಾಭವನ್ನು ರಾಹುಲ್ ಪಡೆಯುವಲ್ಲಿ ವಿಫಲರಾದರು. ಇವರು 64 ಎಸೆತಗಳಲ್ಲಿ 37 ರನ್ ಸಿಡಿಸಿ ಔಟ್ ಆದರು.

ಬ್ಯಾಟರ್‌ಗಳ ವೈಫಲ್ಯ
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್ 51 ಎಸೆತಗಳಲ್ಲಿ 31, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 21, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 3 ರನ್ ಬಾರಿಸಿ ಔಟ್ ಆದರು. ವಾಷಿಂಗ್ಟನ್ ಸುಂದರ್ ಅವರ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಅಶ್ವಿನ್ 22 ರನ್ ಬಾರಿಸಿದರು.
ಟೀಮ್ ಇಂಡಿಯಾದ ಪರ ಗರಿಷ್ಠ ರನ್ ಕಲೆ ಹಾಕಿದ ಕೀರ್ತಿ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸಲ್ಲುತ್ತದೆ. ಇವರು 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿ ಔಟ್ ಆದರು.
ಸ್ಟಾರ್ಕ್ ಪಂಚ್
ಆಸ್ಟ್ರೇಲಿಯಾ ತಂಡದ ಪರ ಅಮೋಘ ದಾಳಿಯನ್ನು ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಅಬ್ಬರಿಸಿದರು. ಇವರು 14.1 ಓವರ್‌ಗಳಲ್ಲಿ 48 ರನ್ ನೀಡಿ 6 ವಿಕೆಟ್ ಪಡೆದರು. ಉಳಿದಂತೆ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications