Ind Vs Aus 2nd Test: ದೆಹಲಿ ಟೆಸ್ಟ್‌ಗೆ ಪ್ರಮುಖ ಆಲ್‌ರೌಂಡರ್ ಫಿಟ್ನೆಸ್ ಬಗ್ಗೆ ಅಲೆಕ್ಸ್ ಕ್ಯಾರಿ ಮಹತ್ವದ ಮಾಹಿತಿ

ಬಾರ್ಡರ್ -ಗವಾಸ್ಕರ್ ಟ್ರೋಫಿ ಸರಣಿಗೆ ಮುನ್ನ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಫಿಟ್‌ನೆಸ್ ಬಗ್ಗೆ ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಮಹತ್ವದ ಮಾಹಿತಿ ನೀಡಿದ್ದಾರೆ. ಪ್ರಮುಖ ಆಟಗಾರರು ಅಲಭ್ಯರಾಗಿದ್ದ ಮೊದಲನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿತ್ತು.
ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಪ್ರಮುಖ ಆಟಗಾರರು ತಂಡಕ್ಕೆ ಮರಳುವ ಬಗ್ಗೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸುಳಿವು ನೀಡಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ದೆಹಲಿ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿದೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಹೊರಗುಳಿದಿದ್ದ ಆಸ್ಟ್ರೇಲಿಯಾದ ಪ್ರಮುಖ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಬೆರಳಿನ ಗಾಯದ ಕಾರಣದಿಂದ ಮೊದಲನೇ ಟೆಸ್ಟ್ ಪಂದ್ಯವನ್ನು ಕಳೆದುಕೊಂಡರು. ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಅವರು ಫಿಟ್ ಆಗಿದ್ದು, ಅವರು ವಾಪಸಾಗುವ ಬಗ್ಗೆ ಕ್ಯಾರಿ ಮಾತನಾಡಿದ್ದಾರೆ.
"ಅಭ್ಯಾಸದ ವೇಳೆಯಲ್ಲಿ ಗ್ರೀನ್ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ಅವರು 100 ಪ್ರತಿಶತ ಸುಧಾರಿಸಿಕೊಂಡಿರುವ ಬಗ್ಗೆ ನನಗೆ ಖಚಿತವಾಗಿಲ್ಲ. ಅವರು ಅದ್ಭುತ ಆಲ್‌ರೌಂಡರ್. ಅವರು ಶೀಘ್ರದಲ್ಲೇ ತಂಡಕ್ಕೆ ಮರಳಿದರೆ ಸಂತೋಷವಾಗುತ್ತದೆ. ಅವರು ಸದ್ಯ ಫಿಟ್ ಆಗಿರುವಂತೆ ಕಾಣುತ್ತಿದ್ದು, ಎರಡನೇ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಆಯ್ಕೆದಾರರು ನಿರ್ಧರಿಸಲಿದ್ದಾರೆ" ಎಂದು ಕ್ಯಾರಿ ಹೇಳಿದ್ದಾರೆ.

ಬೆರಳಿನ ಗಾಯಕ್ಕೆ ತುತ್ತಾಗಿದ್ದ ಗ್ರೀನ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆಯಲ್ಲಿ ಕ್ಯಾಮೆರಾನ್ ಗ್ರೀನ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡುವ ವಿಶ್ವಾಸ ಹೊಂದಿದ್ದರು. ಆದರೆ, ಗ್ರೀನ್ ಬೌಲಿಂಗ್ ಮಾಡಲು ಇನ್ನೂ ಫಿಟ್ ಆಗಿಲ್ಲದ ಕಾರಣ ಮೊದಲನೇ ಪಂದ್ಯದಲ್ಲಿ ಹೊರಗಿಡಲಾಗಿತ್ತು.
ಕ್ಯಾಮೆರಾನ್ ಗ್ರೀನ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಸಮತೋಲನ ಕಾಪಾಡುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗ್ರೀನ್ ಅನುಪಸ್ಥಿತಿ ಕಾಡಿತ್ತು.

ನಾಗ್ಪುರದಲ್ಲಿ ತರಬೇತಿ ಪಡೆದ ಆಸ್ಟ್ರೇಲಿಯಾ
ನಾಗ್ಪುರದಲ್ಲಿ ಮೂರೇ ದಿನಕ್ಕೆ ಪಂದ್ಯ ಮುಕ್ತಾಯವಾದ ಬಳಿಕ ಆಸ್ಟ್ರೇಲಿಯಾ ಆಟಗಾರರು ಹೆಚ್ಚಿನ ತರಬೇತಿ ಪಡೆದರು. ಈ ವೇಳೆ ಕ್ಯಾಮೆರಾನ್ ಗ್ರೀನ್ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಮಾಡಿದರು. ಆದರೆ, ಫೀಲ್ಡಿಂಗ್ ಸಂದರ್ಭದಲ್ಲಿ ಅವರು ಸಾಫ್ಟ್‌ಬಾಲ್ ಬಳಸಿದರು. ಇದು ಅವರು ಇನ್ನೂ ಫಿಟ್ ಆಗಬೇಕು ಎನ್ನುವುದನ್ನು ಸೂಚಿಸುತ್ತದೆ.
ಮೊದಲನೇ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications