IND vs AUS: ಟ್ರಾವಿಸ್ ಹೆಡ್ ಕಟ್ಟಿ ಹಾಕುವುದು ಹೇಗೆ? ಈ ಬೌಲರ್ ಪರಿಣಾಮಕಾರಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾ ಆ ಒಬ್ಬ ಪ್ಲೇಯರ್ ಕಟ್ಟಿ ಹಾಕಲು ರಣ ತಂತ್ರವನ್ನು ಸಿದ್ಧ ಪಡಿಸಿಕೊಳ್ಳುತ್ತಿದೆ. ಈ ಪ್ಲೇಯರ್ ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಸಿಂಹ ಸ್ವಪ್ನರಾಗಿ ಕಾಡಿದ್ದಾರೆ. ಐಸಿಸಿ ಬಿಗ್ ಈವೆಂಟ್‌ಗಳಲ್ಲಿ ಇವರ ಬ್ಯಾಟ್ ಆರ್ಭಟಿಸಿದೆ. ಈ ಪ್ಲೇಯರ್ ಕಟ್ಟಿ ಹಾಕುವ ಬಗ್ಗೆಈಗ ಟೀಮ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಎಲ್ಲ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನೇ ಆಡುವ ಇರಾದೆಯನ್ನು ಹೊಂದಿರುತ್ತಾರೆ. ಐಸಿಸಿ ಬಿಗ್ ಮ್ಯಾಚ್‌ಗಳಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಅಮೂಲ್ಯ ಕಾಣಿಕೆ ನೀಡುವ ಇರಾದೆಯನ್ನು ಹೊಂದಿರುತ್ತಾರೆ. ಅದೇ ರೀತಿ ಐಸಿಸಿಯ ದೊಡ್ಡ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿ ಕಾಣಿಸಿಕೊಂಡವರು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್..

ಟ್ರಾವಿಸ್ ಹೆಡ್ ತಮ್ಮ ನೈಜ್ಯ ಆಟವನ್ನು ಭಾರತದ ವಿರುದ್ಧ ಯಾವಾಗಲೂ ಆಡುತ್ತಲೇ ಇರುತ್ತಾರೆ. ಇದಕ್ಕೆ ಇತ್ತೀಚಿಗೆ ನಡೆದ ಬಾರ್ಡರ್ ಗವಾಸ್ಕರ್ ಸರಣಿಯೇ ಸಾಕ್ಷಿ. ಈ ಸರಣಿಯಲ್ಲಿ ಹೆಡ್ ಆಡಿದ 5 ಪಂದ್ಯಗಳ 9 ಇನಿಂಗ್ಸ್‌ನಲ್ಲಿ 448 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 1 ಅರ್ಧಶತಕ ಸೇರಿದೆ. ಈ ಸರಣಿಯಲ್ಲಿ ಇವರನ್ನು ಕಟ್ಟಿ ಹಾಕುವುದೇ ಟೀಮ್ ಇಂಡಿಯಾಕ್ಕೆ ತಲೆ ನೋವಾಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಭಾರತ ಮಾಡಿದೆ.
ಭಾರತದ ವಿರುದ್ಧ ಹೆಡ್ ಪ್ರದರ್ಶನ ಹೇಗಿದೆ?
ಟ್ರಾವಿಸ್ ಹೆಡ್ ಅಬ್ಬರದ ಆಟವನ್ನು ಆಡಿ ಆರಂಭದಲ್ಲಿ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡಬಲ್ಲ ಪ್ಲೇಯರ್. ಇವರು ಟೀಮ್ ಇಂಡಿಯಾ ವಿರುದ್ಧ ಈಗಾಗಲೇ 9 ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದು, 345 ರನ್ ಸಿಡಿಸಿದ್ದಾರೆ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹ ಸೇರಿದೆ. ಹೆಡ್ ಒಟ್ಟಾರೆಯಾಗಿ ಭಾರತದ ವಿರುದ್ಧ ಹೆಡ್ ಭಾರತದ ವಿರುದ್ಧ 32 ಪಂದ್ಯಗಳಲ್ಲಿ 44.07 ಸರಾಸರಿಯಲ್ಲಿ 4 ಶತಕಗಳು ಮತ್ತು 6 ಅರ್ಧಶತಕಗಳು ಸೇರಿದಂತೆ 1,763 ರನ್ ಗಳಿಸಿದ್ದಾರೆ. ಇದರಲ್ಲಿ ಏಕದಿನ ವಿಶ್ವಕಪ್ ಫೈನಲ್ ಶತಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಶತಕವೂ ಸೇರಿದೆ.

ಯಾರು ಕಟ್ಟಿ ಹಾಕಬಲ್ಲರು?
ಟ್ರಾವಿಸ್ ಹೆಡ್ ಅವರಿಗೂ ಆ ಒಂದು ಸಮಸ್ಯೆ ಬಹುವಾಗಿ ಕಾಡುತ್ತದೆ. ಶಾರ್ಟ್ ಪಿಚ್ ಎಸೆತಗಳನ್ನು ಎಸೆತದಲ್ಲಿ ಇವರು ತೊಂದರೆಗೆ ಒಳಗಾಗುತ್ತಾರೆ. ಇವರಿಗೆ ಹಾರ್ದಿಕ್ ಪಾಂಡ್ಯ ಖೆಡ್ಡಾ ತೋಡಬಲ್ಲರು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಹೆಡ್ ಪಾಂಡ್ಯ ಬೌಲಿಂಗ್ ವಿರುದ್ಧ 14 ಎಸೆತಗಳಲ್ಲಿ 21 ರನ್ ಗಳಿಸಿದ್ದು ಎರಡು ಬಾರಿ ಔಟಾಗಿದ್ದಾರೆ. ಇವರು ಟ್ರಾವಿಸ್ ಹೆಡ್ ಅವರಿಗೆ ತೊಂದರೆ ನೀಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications