KL Rahul: ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವುದು ಪಕ್ಕಾ
ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೆಸ್ಟ್ ಸರಣಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡಲಾಗುತ್ತದೆ. ಈ ಸರಣಿಯಲ್ಲಿ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ, ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ. ಈ ನಡುವೆ ಕೆಎಲ್ ರಾಹುಲ್ ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಆರಂಭಿಕರಾಗಿ ಆಡುವ ಅವಕಾಶವನ್ನು ಕೆಎಲ್ ರಾಹುಲ್ ಪಡೆದರು. ಸಿಕ್ಕ ಅವಕಾಶವನ್ನು ಕೆಎಲ್ ರಾಹುಲ್ ಎರಡೂ ಕೈಯಿಂದ ಬಳಸಿಕೊಂಡು ಅಬ್ಬರಿಸಿದರು. ಪರ್ತ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ರಾಹುಲ್, ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕದ ಇನಿಂಗ್ಸ್ ಕಟ್ಟಿ ಅಬ್ಬರಿಸಿದರು. ಇಬ್ಬರು ಆರಂಭಿಕರು ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಸೇರಿ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿ ಹೊಸ ದಾಖಲೆ ನಿರ್ಮಿಸಿದರು.

ರಾಹುಲ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್?
ರೋಹಿತ್ ಶರ್ಮಾ ತಂಡಕ್ಕೆ ಮರಳುತ್ತಿದ್ದಂತೆ ರಾಹುಲ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳು ಇದ್ದವು. ಇದಕ್ಕೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಈ ವೇಳೆ ರೋಹಿತ್ ನೀಡಿದ ಉತ್ತರ ನಿಜಕ್ಕೂ ಅಭಿಮಾನಿಗಳ ಮನದಲ್ಲಿ ನೆಮ್ಮದಿ ನೀಡಿದೆ.
"ನಾನು ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಆಗಿರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಸೇರಿದ್ದೇನೆ. ಮೊದಲ ಪಂದ್ಯದಲ್ಲಿ ರಾಹುಲ್ ಆರಂಭಿಕರಾಗಿ ಆಡಿದ ಧಾಟಿ ಉತ್ತಮವಾಗಿತ್ತು. ಇವರ ಆಟವನ್ನು ಕಂಡು ಖುಷಿ ಆಯಿತು. ಎರಡನೇ ಟೆಸ್ಟ್‌ನಲ್ಲಿ ಇದೇ ರಿಧಮ್‌ನಲ್ಲಿ ಬ್ಯಾಟ್ ಮಾಡಬಹುದು" ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ತಂಡದ ಹಿತದ ದೃಷ್ಟಿಯಿಂದ ನಿರ್ಧಾರ
ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ನಮಗೆ ಉತ್ತಮ ಜೊತೆಯಾಟ ನೀಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಜೋಡಿಯ ಮೇಲೆ ಮ್ಯಾನೇಜ್ಮೆಂಟ್‌ಗೆ ಭರವಸೆ ಇದೆ. ಮೊದಲ ಟೆಸ್ಟ್‌ನಲ್ಲಿ ಆಡಿದ ಆರಂಭಿಕ ಜೋಡಿಯೇ ಎರಡನೇ ಟೆಸ್ಟ್‌ನಲ್ಲಿ ಆಡಲಿದೆ. ಇದು ತಂಡದ ಹಿತದೃಷ್ಟಿಯಿಂದ ಮತ್ತು ಇದು ತುಂಬಾ ಒಳ್ಳೆಯದಾಗಿದೆ. ಇದರರ್ಥ ಮುಂದಿನ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಮುನ್ನ ರೋಹಿತ್ ಶರ್ಮಾ ಮಿಡ್ಲ್ ಆರ್ಡರ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಇನಿಂಗ್ಸ್ ಆರಂಭಿಸಿದ್ದಾರೆ. 2172 ದಿನಗಳ ನಂತರ, ರೋಹಿತ್ ಶರ್ಮಾ ಈಗ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡಬಹುದು. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications