ಟ್ರಾವಿಸ್ ಹೆಡ್.. ಈ ಹೆಸರು ಕೇಳಿದರೆ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಉರಿ.. ಕಾರಣ ಇಷ್ಟೇ ಇವರು ಆಸ್ಟ್ರೇಲಿಯಾ ಪರ ಮಹತ್ವದ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅದು ಟೆಸ್ಟ್ ಪಂದ್ಯವೇ ಆಗಿರಲಿ, ಏಕದಿನ, ಟಿ20 ಪಂದ್ಯವೇ ಆಗಿರಲಿ, ಭಾರತ ತಂಡಕ್ಕೆ ಕಾಟ ನಾನು ರೆಡಿ ಎಂದು ಟ್ರಾವಿಸ್ ಹೆಡ್ ಪ್ಯಾಡ್ ಕಟ್ಟಿ ತಯಾರಾಗುತ್ತಾರೆ. ಇವರು ಮತ್ತೊಮ್ಮೆ ಆಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳಿಗೆ ಕಾಟ ನೀಡಿದ್ದು, ಆತಿಥೇಯ ತಂಡಕ್ಕೆ ನೆರವಾಗಿದ್ದಾರೆ.
ಟ್ರಾವಿಸ್ ಹೆಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 163 ರನ್ ಗಳ ಕ್ಲಾಸಿಕ್ ಇನಿಂಗ್ಸ್ ಕಟ್ಟಿ ನೆರವಾಗಿದ್ದ ಇವರು, ಆಸೀಸ್ ಗೆಲುವಿನ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇನ್ನು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಟ್ರಾವಿಸ್ ಹೆಡ್ 15 ಬೌಂಡರಿ, 4 ಸಿಕ್ಸರ್ ಸಹಯಾದಿಂದ 137 ರನ್ ಸಿಡಿಸಿ ರೋಹಿತ್ ಪಡೆಗೆ ಕಾಟ ನೀಡಿದ್ದರು. ಇದೇ ಆಟವನ್ನು ಆಡಿಲೇಡ್‌ನಲ್ಲಿ ಮುಂದುವರೆಸಿದರು.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೇ ಇನಿಂಗ್ಸ್‌ನಲ್ಲೂ ಟ್ರಾವಿಸ್ ಹೆಡ್ 8 ಬೌಂಡರಿ ನೆರವಿನಿಂದ 89 ರನ್ ಬಾರಿಸಿ ಟೀಮ್ ಇಂಡಿಯಾ ಗೆಲುವಿನ ಅಂತರವನ್ನು ಕಡಿಮೆ ಮಾಡಿದರು. ಇದೇ ಫಾರ್ಮ್‌ನ್ನು ಆಡಿಲೇಡ್‌ನಲ್ಲಿ ಟ್ರಾವಿಸ್ ಹೆಡ್ ಮುಂದುವರೆಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಟ್ರಾವಿಸ್ ಹೆಡ್ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಮನಮೋಹಕ ಇನಿಂಗ್ಸ್ ಕಟ್ಟಿದರು.
ಟ್ರಾವಿಸ್ ಹೆಡ್ ಆಡಿಲೇಡ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದರು. ಭಾರತದ ಬೌಲರ್‌ಗಳನ್ನು ಕಾಡಿದ ಇವರು 111 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು ಮತ್ತು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕದ ತಮ್ಮದೇ ಆದ ದಾಖಲೆಯನ್ನು ಅಳಿಸಿ ಹಾಕಿದರು. ಇದಕ್ಕೂ ಮೊದಲು, 2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ನಲ್ಲಿ 112 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 141 ಎಸೆತಗಳಲ್ಲಿ 17 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ನೆರವಿನಿಂದ 140 ರನ್ ಗಳಿಸಿದ್ದಾರೆ. ಇದು ಹೆಡ್ ಟೆಸ್ಟ್ ವೃತ್ತಿ ಬದುಕಿನ 8ನೇ ಶತಕವಾಗಿದೆ. ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಇವರ ಮೂರನೇ ಶತಕವಾಗಿದೆ.

ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಎಂಬ ಕೀರ್ತಿ ಮಾರ್ನಸ್ ಲಂಬುಶೇನ್ ಅವರ ಪಾಲಾಗಿದೆ. ಇವರ ನಂತರದ ಸ್ಥಾನದಲ್ಲಿ ಟ್ರಾವಿಸ್ ಹೆಡ್ ಇದ್ದು ಅಸದ್ ಶಫೀಕ್, ದಿಮುತ್ ಕರುಣರತ್ನ ತಲಾ ಎರಡು ಶತಕ ಬಾರಿಸಿದರು.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಲು ಸಾಧ್ಯವಾಯಿತು.