IND vs AUS Final: ಮೊಟೆರಾ ಸ್ಟೇಡಿಯಂ ಇತಿಹಾಸ: ಇಲ್ಲಿ ಆಸೀಸ್ ವಿರುದ್ಧ ಭಾರತದ ಮೊದಲ ಪ್ರದರ್ಶನ ಹೇಗಿತ್ತು?
ವಿಶ್ವದಲ್ಲಿರುವ ಎಲ್ಲ ಕ್ರೀಡಾಂಗಣಗಳಿಗೂ ತನ್ನದೇ ಆದ ಇತಿಹಾಸವಿದೆ. ಇಂತಹದ್ದೇ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹಲವು ಪ್ರದೇಶಗಳು ತಮ್ಮ ಇತಿಹಾಸವನ್ನು ಸಾರಿ ಹೇಳುತ್ತವೆ. ಕಾಲ ಬದಲಾದಂತೆ, ತಂತ್ರಜ್ಞಾನ ಬದಲಾದಂತೆ ಮೈದಾನಗಳೂ ಸಹ ಬದಲಾಗಿವೆ. ಇದಕ್ಕೆ ಬೆಸ್ಟ್ ಉದಾಹರಣೆ ಇದು.
ಅಹಮದಾಬಾದ್‌ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

ಇಂದು ನರೇಂದ್ರ ಮೋದಿ ಸ್ಟೇಡಿಯಂ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ಅಂಗಳ, ವಿಶ್ವದ ದೊಡ್ಡ ಸ್ಟೇಡಿಯಂ ಎನಿಸಿದೆ. ಒಂದು ಕಾಲದಲ್ಲಿ ಈ ಅಂಗಳವನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಇದನ್ನು ಗುಜರಾತ್ ಸ್ಟೇಡಿಯಂ ಮತ್ತು ಮೊಟೆರಾ ಸ್ಟೇಡಿಯಂ ಎಂದೂ ಕರೆಯಲಾಗುತ್ತಿತ್ತು. ಈ ಕ್ರೀಡಾಂಗಣವು 1982ರಲ್ಲಿ ಪೂರ್ಣಗೊಂಡಿತು.
ಈ ಕ್ರೀಡಾಂಗಣ ನಿರ್ಮಾಣದ ಎರಡು ವರ್ಷಗಳ ನಂತರ, ಅಂದರೆ 1984ರಲ್ಲಿ ಈ ಮೈದಾನದಲ್ಲಿ ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಾಯಿತು. ಸರಿಯಾಗಿ 39 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಪ್ರವೇಶಿಸಿತ್ತು.

1983ರ ವಿಶ್ವಕಪ್ ಗೆದ್ದ ನಂತರ ಭಾರತದ ಉತ್ಸಾಹ ಹೆಚ್ಚಿತ್ತು. ತವರು ಮೈದಾನ ಮತ್ತು ಭಾರತೀಯ ಅಭಿಮಾನಿಗಳ ಲಾಭ ಪಡೆದು ಭಾರತ ತಂಡವು ಅಬ್ಬರಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಸ್ಟ್ರೇಲಿಯಾ ತಂಡವು ಎಲ್ಲಾ ಮುನ್ಸೂಚನೆಗಳನ್ನು ತಪ್ಪಾಗಿ ಸಾಬೀತುಪಡಿಸಿತು ಮತ್ತು ಇಲ್ಲಿ ಏಕಪಕ್ಷೀಯವಾಗಿ ಗೆದ್ದಿತು.
ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಈ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆಸ್ಟ್ರೇಲಿಯಾದ ನಾಯಕ ಕಿಮ್ ಹ್ಯೂಸ್ ಅವರ ನಿರ್ಧಾರವು ಇಲ್ಲಿ ತಪ್ಪಾಗಿದೆ ಎಂದುಕೊಳ್ಳಲಾಗಿತ್ತು.

ಏಕೆಂದರೆ, ಭಾರತ ತಂಡದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿತು. ರವಿಶಾಸ್ತ್ರಿ ಮತ್ತು ರೋಜರ್ ಬಿನ್ನಿ ನಡುವೆ 104 ರನ್‌ಗಳ ಜೊತೆಯಾಟ ಮೂಡಿಬಂದಿತು.
ನಂತರ, ರೋಜರ್ ಬಿನ್ನಿ 57 ರನ್ ಗಳಿಸಿ ಟಾಮ್ ಹೊಗನ್‌ಗೆ ವಿಕೆಟ್ ಒಪ್ಪಿಸಿದರು. ಬಿನ್ನಿ ಔಟಾದ ನಂತರ ಇಡೀ ಭಾರತ ತಂಡ ವಿಕೆಟ್‌ಗಳು ಪಟಪಟನೆ ಬೀಳಲು ಆರಂಭಿಸಿದವು.
ರೋಜರ್ ಬಿನ್ನಿ ವಿಕೆಟ್ ಬಿದ್ದ ನಂತರ ರವಿಶಾಸ್ತ್ರಿ (45) ಕೂಡ ಪೆವಿಲಿಯನ್‌ಗೆ ಮರಳಿದರು. ದಿಲೀಪ್ ವೆಂಗ್‌ಸರ್ಕರ್ (14), ಸಂದೀಪ್ ಪಾಟೀಲ್ (3) ಮತ್ತು ನಾಯಕ ಸುನಿಲ್ ಗವಾಸ್ಕರ್ (4) ಕೂಡ ನಿರಾಸೆ ಅನುಭವಿಸಿದರು. ಭಾರತ ತಂಡ 145 ರನ್‌ಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು.
ಒಂದು ತುದಿಯಲ್ಲಿ ಕಪಿಲ್ ದೇವ್ ಖಂಡಿತವಾಗಿಯೂ ವೇಗವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ, 28 ರನ್ ಗಳಿಸಿದ ನಂತರ ಅವರೂ ಔಟಾದರು. ಭಾರತ ತಂಡ 161 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಇಲ್ಲಿಂದ ಕೀರ್ತಿ ಆಜಾದ್ (39) ಮತ್ತು ಮದನ್‌ಲಾಲ್ (6) ಅಜೇಯ 45 ರನ್‌ಗಳ ಜೊತೆಯಾಟ ನಡೆಸಿ ಭಾರತ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದರು.
ಇದೇ ಅಂಗಳದಲ್ಲಿ ಕ್ರಿಕೆಟ್ ದಿಗ್ಗಜ ಅಲನ್ ಬಾರ್ಡರ್ ಮುಂದಾಳತ್ವದಲ್ಲಿ ಆಸೀಸ್ ಗೆಲುವು ಸಾಧಿಸಿತ್ತು. ಈ ಪಂದ್ಯ ಕೇವಲ 46-46 ಓವರ್‌ಗಳದ್ದಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು.
ಇದಕ್ಕುತ್ತರವಾಗಿ ಆಸ್ಟ್ರೇಲಿಯ ತಂಡವೂ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ 67 ರನ್ ಸೇರಿಸಿದ ನಂತರ ಗ್ರೇಮ್ ವುಡ್ (32) ರನೌಟ್ ಆದರು. ಅವರ ಜೊತೆಗಾರ ಕೆಪ್ಲರ್ ವೆಸೆಲ್ಸ್ (42) ಕೂಡ ಒಟ್ಟು 89 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ನಂತರ ಅಲನ್ ಬಾರ್ಡರ್ ಅವರು ಕಿಮ್ ಹ್ಯೂಸ್ (29) ಜತೆ 73 ರನ್ ಜೊತೆಯಾಟ ನಡೆಸುವ ಮೂಲಕ ಆಸ್ಟ್ರೇಲಿಯಾಕ್ಕೆ ಆಧಾರವಾದರು. ಇದಾದ ಬಳಿಕ ಗ್ರಹಾಂ ಯಲ್ಲೊಪ್ (32) ಜೊತೆಗೂಡಿ ಆಸ್ಟ್ರೇಲಿಯ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ನಾಯಕ ಅಲನ್ ಬಾರ್ಡರ್ 90 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಆಸ್ಟ್ರೇಲಿಯ ತಂಡ 44ನೇ ಓವರ್‌ನಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications