For Quick Alerts
ALLOW NOTIFICATIONS  
For Daily Alerts
 

IND vs AUS: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿರುದ್ಧ ಸುನಿಲ್ ಗವಾಸ್ಕರ್ ಗರಂ; ಕಾರಣವೇನು?

ನವೆಂಬರ್ 19, ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2023ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಬ್ಯಾಟರ್‌ಗಳು ಒತ್ತಡಕ್ಕೆ ಒಳಗಾಗಿ ಸಾಧಾರಣ ಮೊತ್ತಕ್ಕೆ ಆಲೌಟ್ ಆದರು.

ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರು ಔಟ್ ಆಗಲು ಕಾರಣವಾದ ಶಾಟ್ ಆಯ್ಕೆಯನ್ನು ಭಾರತದ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

IND vs AUS Final: Sunil Gavaskar Questions Team India captain Rohit Sharmas Shot selection

ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಭಾರತ ತಂಡಕ್ಕೆ ರೋಹಿತ್ ಶರ್ಮಾ ವೇಗದ ಆರಂಭ ನೀಡಿದರು. ಕೇವಲ 31 ಎಸೆತಗಳಲ್ಲಿ 47 ರನ್ ಗಳಿಸಿದರು.

ರೋಹಿತ್ ಶರ್ಮಾ ಲೀಗ್ ಹಂತವನ್ನು 120ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 503 ರನ್‌ಗಳೊಂದಿಗೆ ಕೊನೆಗೊಳಿಸಿದರು ಮತ್ತು ಭಾರತದ ನಾಯಕ ಸೆಮಿಫೈನಲ್‌ನಲ್ಲಿ ದಾಳಿಯನ್ನು ಮುಂದುವರೆಸಿ 29 ಎಸೆತಗಳಲ್ಲಿ 47 ರನ್ ಗಳಿಸಿದರು.

ಆಸ್ಟ್ರೇಲಿಯಾ ವಿರುದ್ಧ ಫೈನಲ್‌ ಪಂದ್ಯದಲ್ಲಿ 47 ರನ್ ಗಳಿಸುವ ಮೂಲಕ ಒಟ್ಟಾರೆ ಈ ವಿಶ್ವಕಪ್‌ನಲ್ಲಿ 597 ರನ್‌ ಗಳಿಸಿ 2ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

IND vs AUS Final: Sunil Gavaskar Questions Team India captain Rohit Sharmas Shot selection

ಭಾರತ ಕೇವಲ 4 ಓವರ್‌ಗಳಲ್ಲಿ 30 ರನ್ ಗಳಿಸಿತು. ಆದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಭುತ ದಾಖಲೆ ಹೊಂದಿರುವ ಯುವ ಶುಭ್ಮನ್ ಗಿಲ್ ಒತ್ತಡದಲ್ಲಿ ಕುಸಿದು 5ನೇ ಓವರ್‌ನಲ್ಲಿ 4 ರನ್‌ ಗಳಿಸಿದ್ದಾಗ ಔಟಾದರು.

ಈ ವೇಳೆ ವಿರಾಟ್ ಕೊಹ್ಲಿ ಸೇರಿಕೊಂಡ ನಂತರ ರೋಹಿತ್ ಶರ್ಮಾ ಆಸ್ಟ್ರೇಲಿಯದ ವೇಗದ ಬೌಲರ್‌ಗಳನ್ನು ದಂಡಿಸುತ್ತಲೇ ಇದ್ದರು. 7ನೇ ಓವರ್‌ನಲ್ಲಿ ಸತತ 3 ಬೌಂಡರಿಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಸ್ವಲ್ಪ ಮೆರುಗು ತಂದರು.

ರೋಹಿತ್ ಶರ್ಮಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಲು ಉತ್ತಮವಾಗಿ ಕಾಣುತ್ತಿದ್ದರು. ಆದರೆ ಅರೆಕಾಲಿಕ ಆಫ್-ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಎರಡನೇ ಓವರ್‌ನಲ್ಲಿ ದೊಡ್ಡ ಶಾಟ್ ಬಾರಿಸಲು ಪ್ರಯತ್ನಿಸಿ ಔಟಾದರು.

ಶಾರ್ಟ್ ಕವರ್‌ನಿಂದ ಹಿಂದೆ ಓಡಿ ಟ್ರಾವಿಸ್ ಹೆಡ್ ಅದ್ಭುತ ಕ್ಯಾಚ್ ಪಡೆದು ಅಹಮದಾಬಾದ್ ಪ್ರೇಕ್ಷಕರನ್ನು ಮೌನಗೊಳಿಸಿದರು. 10ನೇ ಓವರ್‌ನಲ್ಲಿ ಆಗಲೇ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ್ದರಿಂದ ರೋಹಿತ್ ಶರ್ಮಾ ಅವರಿಂದ ಇದು ಅಪಾಯಕಾರಿ ಪ್ರಯತ್ನವಾಗಿತ್ತು.

"ಅದು ಟರ್ನಿಂಗ್ ಪಾಯಿಂಟ್ ಆಗಿದೆ. ಏಕೆಂದರೆ ಆ ಸಮಯದಲ್ಲಿ ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಿದ್ದರು. ಅವರು ಆ ಓವರ್‌ನಲ್ಲಿ ಈಗಾಗಲೇ ಸಿಕ್ಸರ್ ಮತ್ತು ಬೌಂಡರಿಯೊಂದಿಗೆ 10 ರನ್ ಗಳಿಸಿದ್ದರು. ಅವನು ಆ ಶಾಟ್ ಆಯ್ಕೆ ಮಾಡಬಾರದಾಗಿತ್ತು".

"ಆ ಚೆಂಡು ಸಿಕ್ಸರ್‌ಗೆ ಹೋಗಿದ್ದರೆ, ನಾವೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದೆವು ಎಂದು ನನಗೆ ಗೊತ್ತು. ಆದರೆ ಆ ಐದನೇ ಬೌಲರ್ ಯಾವಾಗಲೂ ಅವರು ಗುರಿಯಾಗಿಸಬಹುದು, ಆ ಹಂತದಲ್ಲಿ ಯಾವುದೇ ಆತುರ ಇರಲಿಲ್ಲ," ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ರೋಹಿತ್ ಶರ್ಮಾ ಅವರ ಶಾಟ್ ಆಯ್ಕೆಯನ್ನು ಪ್ರಶ್ನಿಸಿದರು.

ಭಾರತ ನಂತರದ ಓವರ್‌ನಲ್ಲಿ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಕಳೆದುಕೊಂಡಿತು ಮತ್ತು 11 ನೇ ಓವರ್‌ನಲ್ಲಿ 3 ವಿಕೆಟ್‌ಗೆ 81 ರನ್‌ಗಳಿಗೆ ಕುಸಿಯಿತು. ಚೆಂಡು ಹಳೆಯದಾಗುತ್ತಿದ್ದಂತೆ ಮತ್ತು ಪಿಚ್ ನಿಧಾನವಾವಾಗಿ, ರನ್ ಗಳಿಸುವುದು ಕಷ್ಟಕರವಾಯಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 109 ಎಸೆತಗಳಲ್ಲಿ 67 ರನ್ ಜೊತೆಯಾಟ ನಡೆಸಿದರು.

ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆದ ಕಾರಣ, ಅಂತಿಮ ಓವರ್‌ಗಳಲ್ಲಿ ಹೆಚ್ಚು ಅಗತ್ಯವಿರುವ ರನ್‌ಗಳನ್ನು ಪಡೆಯಲು ಭಾರತ ತಂಡದ ಕೆಳ ಕ್ರಮಾಂಕದ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ.

Story first published: Sunday, November 19, 2023, 20:32 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+