
ಒಂದೇ ರೀತಿ ಪ್ರದರ್ಶನ ಅಸಾಧ್ಯ
"ಪ್ರತಿ ಕ್ರಿಕೆಟರ್ ಕೂಡ ಇಂಥಾ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ವೃತ್ತಿ ಜೀವನದ ಆರಂಭದಿಂದ ಒಂದೇ ರೀತಿಯಾಗಿ ರನ್ ಬಾರಿಸಿರುವ ಯಾವುದಾದರೂ ಒಬ್ಬರನ್ನು ಹೆಸರಿಸಿ. ಹೀಗೆ ಆಗುವುದು ನಿಮಗೂ ಒಳ್ಳೆಯದು. ಇವುಗಳು ನಿಮಗೆ ನೋವುಂಟು ಮಾಡುತ್ತದೆ. ಇದರಿಂದಾಗಿ ಆಟಗಾರನಿಗೇನಾದರೂ ನೋವಾಗಿದ್ದರೆ ಅದು ನಮಗೆ ಒಳ್ಳೆಯದು. ಇತರರು ಆಡುತ್ತಿದ್ದಾಗ ನೀವು 12ನೇ ಆಟಗಾರನಾಗಿ ನೀರು ಕೊಡುತ್ತಿದ್ದರೆ ಅದು ನೋವುಂಟು ಮಾಡಲೇಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.

ಫಾರ್ಮ್ ಕಂಡುಕೊಳ್ಳಲು ವೇದಿಕೆಯಾಗಲಿದೆ ಐಪಿಎಲ್
ಇನ್ನು ಇದೇ ಸಂದರ್ಭದಲ್ಲಿ ಗೌತಮ್ ಗಂಭೀರ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕೆಎಲ್ ರಾಹುಲ್ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 600 ರನ್‌ಗಳಿಸುವ ಅಗತ್ಯವಿಲ್ಲ ಎಂದಿದ್ದು ಪರಿಣಾಮಕಾರಿಯಾಗಿ ತಂಡದ ಮೇಲೆ ಪ್ರಭಾವ ಬೀರುವಂತೆ 400 ರನ್ ಗಳಿಸಿದರೂ ಸಾಕು ಎಂದಿದ್ದಾರೆ ಗೌತಮ್ ಗಂಭೀರ್.

ಗಂಭೀರ್ ಖಡಕ್ ಮಾತು
"ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುವಾಗ ಅವರು ಯಾವುದನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಐಪಿಎಲ್‌ನಲ್ಲಿ ಅವರು ನಾಲ್ಕರಿಂದ ಐದು ಶತಕ ಗಳಿಸಿದ್ದಾರೆ. ಆದರೆ ನೀವು ತಂಡದಲ್ಲಿ ಸ್ಥಾನವನ್ನು ಪಡೆಯದೇ ಇದ್ದಾಗ ಇದನ್ನು ಅವಕಾಶವನ್ನಾಡಿ ನೋಡಿ ನಿಮ್ಮ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸಬೇಕು. ತಂಡ ನನ್ನಿಂದ ಬಯಸುವಂತೆ ನಾನು ಬ್ಯಾಟಿಂಗ್ ಮಾಡಬಲ್ಲೆನಾ? ಇಈ ದೇಶ ಬಯಸುವಂತೆ ರನ್ ಗಳಿಸಲು ಸಾಧ್ಯವಾ? ಇದನ್ನು ಕಂಡುಕೊಳ್ಳಬೇಕಿದೆ. ಐಪಿಎಲ್‌ನಲ್ಲಿ 600ಕ್ಕಿಂತ ಹೆಚ್ಚು ರನ್‌ಗಳಿಸುವುದು ಮುಖ್ಯವಲ್ಲ. 400 ರನ್ ಗಳಿಸಿ, ಆದರೆ ಅದು ನಿಮ್ಮ ತಂದ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬೇಕು" ಎಂದಿದ್ದಾರೆ ಗೌತಮ್ ಗಂಭೀರ್.

ಆಸಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಆಡುವ ಬಳಗದಿಂದ ಹೊರಬಿದ್ದ ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿ ಮಾರ್ಚ್ 17ರಿಂದ ಆರಂಭವಾಗಲಿದ್ದು ಈ ಸರಣಿಯ ಮುಕ್ತಾಯದ ಬಳಿಕ ಐಪಿಎಲ್ ಟೂರ್ನಿ ಆರಂಬವಾಗಲಿದೆ. ಮುಂಬರುವ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅವಕಾಶ ರಾಹುಲ್ ಮುಂದಿದೆ. ಆದರೆ ಅದನ್ನು ಕನ್ನಡಿಗ ಆಟಗಾರ ಯಾವ ರೀತಿಯಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.


Click it and Unblock the Notifications
