ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಅಪರಾಧಿಗಳಂತೆ ನೋಡುತ್ತಾರೆ ಎಂದ ಆಸ್ಟ್ರೇಲಿಯಾ ಬೌಲರ್

ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯೆಂದರೆ ಹಾಗೆ, ವಿಶ್ವದ ದಿಗ್ಗಜ ಬ್ಯಾಟರ್ ಬೌಲರ್ ಗಳ ನಡುವಿನ ಕದನ. ಆಟಗಾರರ ನಡುವೆ ನಡೆಯುವ ಮೈಂಡ್ ಗೇಮ್ ಸರಣಿಯನ್ನು ಮತ್ತಷ್ಟು ಕುತೂಹಲಕಾರಿಯಾಗಿಸುತ್ತದೆ.
ಆಸ್ಟ್ರೇಲಿಯಾದ ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು 7 ಬಾರಿ ಔಟ್ ಮಾಡುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ದೆಹಲಿ ಟೆಸ್ಟ್‌ಗೆ ಮುನ್ನ ನಾಥನ್ ಲಿಯಾನ್ ಈ ಬಗ್ಗೆ ಮಾತನಾಡಿದ್ದಾರೆ.
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿರುದ್ಧ ಬೌಲಿಂಗ್ ಮಾಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೊಹ್ಲಿ ತಮಗೆ ನೀಡಿದ ಚಾಲೆಂಜ್ ಅನ್ನು ನೆನಪಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಾಗ ಅವರು ಅದನ್ನು ಸಚಿನ್ ತೆಂಡೂಲ್ಕರ್ ಗೆ ಹೋಲಿಕೆ ಮಾಡಿದ್ದಾರೆ. ಕೊಹ್ಲಿ ವಿಕೆಟ್ ಪಡೆದಾಗ ಇಡೀ ಕ್ರೀಡಾಂಗಣ ಮೌನವಾಗುತ್ತದೆ. ಬೌಲರ್ ನನ್ನು ಅಪರಾಧ ಮಾಡಿದ್ದಾನೆ ಎನ್ನುವಂತೆ ನೋಡಲಾಗುತ್ತದೆ ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ವಿರುದ್ಧ ಆಡುವಾಗ ನಿಮ್ಮ ವಿರುದ್ಧ ಇಡೀ ದೇಶವೆ ಆಡುವಂತೆ ಭಾಸವಾಗುತ್ತದೆ. ಅವರ ವಿಕೆಟ್ ಪಡೆದರೆ, ಬೇಗನೆ ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದರೆ, ಆದಷ್ಟು ಕಡಿಮೆ ಸಮಯದಲ್ಲಿ ನೀವು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ದ್ವೇಷಿಸುವ ಕ್ರಿಕೆಟಿಗರಾಗುತ್ತೀರಿ. ಹಲವು ವರ್ಷಗಳ ಹಿಂದೆ ಸಚಿನ್ ವಿರುದ್ಧ ಬೌಲಿಂಗ್ ಮಾಡುವಾಗಲು ಇದೇ ರೀತಿಯ ಅನುಭವವಾಗಿದೆ." ಎಂದು ಅವರು ಹೇಳಿದ್ದಾರೆ.

ಕೊಹ್ಲಿ ಬಗ್ಗೆ ಲಿಯಾನ್‌ಗೆ ಗೌರವ
ವಿರಾಟ್ ಕೊಹ್ಲಿ ಬಗ್ಗೆ ನಾಥನ್ ಲಿಯಾನ್ ವಿಶೇಷ ಗೌರವವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ವಿರುದ್ಧ ಬೌಲಿಂಗ್ ಮಾಡುವಾಗ ನೀವು ಗಮನವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಟಾಡ್ ಮುರ್ಫಿ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಸಂಭ್ರಮಿಸಿದ್ದರು.
"ವಿರಾಟ್ ಕೊಹ್ಲಿ ವಿಶ್ವಕ್ರಿಕೆಟ್‌ನ ಅತ್ಯುತ್ತನ ಬ್ಯಾಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಅವರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. ಅವರಿಗೆ ಬೌಲಿಂಗ್ ಮಾಡುವುದು ವಿಶೇಷವಾಗಿದೆ. ಅವರ ವಿರುದ್ಧ ಬೌಲಿಂಗ್ ಮಾಡಲು ಯಾವಾಗಲೂ ಬಯಸುತ್ತೇನೆ. ವಿಶ್ವದ ಅತ್ಯುತ್ತಮ ಬ್ಯಾಟರ್ ಗಳಿಗೆ ಬೌಲಿಂಗ್ ಮಾಡಿದ್ದೇನೆ ಆದರೆ ಕೊಹ್ಲಿಗೆ ಬೌಲಿಂಗ್ ಮಾಡುವುದು ಸವಾಲಾಗಿದೆ" ಎಂದು ಲಿಯಾನ್ ಹೇಳಿದರು.

ಭಾರತದ ಬೌಲರ್‌ಗಳಿಂದ ಸಾಕಷ್ಟು ಕಲಿತಿದ್ದೇನೆ
ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ಲಿಯಾನ್ ನಡುವೆ ಉತ್ತಮ ಬಾಂಧವ್ಯ ಇದೆ. ಲಿಯಾನ್ ರವಿಚಂದ್ರನ್ ಅಶ್ವಿನ್‌ರನ್ನು ಬಹುವಾಗಿ ಶ್ಲಾಘಿಸಿದರು.ಅವರೊಂದಿಗೆ ಮಾತನಾಡುವಾಗ ಸಾಕಷ್ಟು ಜ್ಞಾನವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.
"ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ, ಅವರು ಸಾಕಷ್ಟು ಕಲಿಸಿದ್ದಾರೆ. ಅಶ್ವಿನ್ ಬಹಳಷ್ಟು ಸಂಗತಿಗಳನ್ನು ನನಗೆ ಹೇಳಿಕೊಟ್ಟಿದ್ದಾರೆ, ಭಾರತದಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲಿಯೂ ಸಹ ಅವರು ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಅಶ್ವಿನ್‌ರಲ್ಲಿ ಬಹಳಷ್ಟು ವಿಶೇಷವಾದ ಕೌಶಲ್ಯಗಳಿವೆ, ನಾನು ಇನ್ನೂ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳಲು ಬಯಸುತ್ತೇನೆ." ಎಂದು ಲಿಯಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications