IND vs AUS: ಯಶಸ್ವಿ ಜೈಸ್ವಾಲ್ ಗಳಿಸಲಿರುವ ಶತಕಗಳ ಸಂಖ್ಯಾಶಾಸ್ತ್ರದ ಭವಿಷ್ಯ ನುಡಿದ ಮ್ಯಾಕ್ಸ್‌ವೆಲ್!
ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಮೋಗ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆಸೀಸ್ ಬೌಲರ್‌ಗಳ ಬೆವರಿಳಿಸಿದ ಜೈಸ್ವಾಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಅದ್ಭುತ ಪ್ರದರ್ಶನದ ನಂತರ ಜೈಸ್ವಾಲ್ ಅವರನ್ನು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೊಗಳಿದ್ದಾರೆ.
ಜೈಸ್ವಾಲ್ ಯಾವುದೇ ಪರಿಸ್ಥಿತಿ ಬಂದರೂ ಬೇಗ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಬ್ಯಾಟಿಂಗ್ ಮಾಡುವಾಗ ಹೆಚ್ಚಿನ ದೌರ್ಬಲ್ಯಗಳು ಕಾಣಿಸುತ್ತಿಲ್ಲ. ಈ ಯುವ ಪ್ರತಿಭಾವಂತ ಆಟಗಾರ ಭವಿಷ್ಯದಲ್ಲಿ 40ಕ್ಕೂ ಹೆಚ್ಚು ಶತಕಗಳನ್ನು ಬಾರಿಸಬಹುದು. ಈಗಾಗಲೇ ಜೈಸ್ವಾಲ್ ಆನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಗುಣಗಾನ ಮಾಡಿದ್ದಾರೆ.

'ಚೆಂಡನ್ನು ರಕ್ಷಣಾತ್ಮಕ ಮತ್ತು ಆಕ್ರಮಣಕಾರಿಯಾಗಿ ಆಡುವ ಎರಡು ರೀತಿಯನ್ನು ಜೈಸ್ವಾಲ್ ಅವರಲ್ಲಿ ಕಾಣಬಹುದು. ಅಲ್ಲದೆ, ಬ್ಯಾಟಿಂಗ್ ಮಾಡುವಾಗ ಅವರ ಫೂಟ್‌ವರ್ಕ್ ಕೂಡ ಅದ್ಭುತವಾಗಿದ್ದು, ಶಾರ್ಟ್ ಬಾಲ್ ಚೆನ್ನಾಗಿ ಆಡುತ್ತಾರೆ. ಜೊತೆಗೆ ಡ್ರೈವ್ ಶಾಟ್ ಕೂಡ ಚೆನ್ನಾಗಿದೆ. ಸ್ಪಿನ್ ಮತ್ತು ವೇಗದ ಬೌಲಿಂಗ್‌ಗೆ ಜೈಸ್ವಾಲ್ ಉತ್ತಮವಾಗಿ ಆಡುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಅವರು ಒತ್ತಡವನ್ನು ನಿಭಾಯಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ 22 ಹರೆಯದ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಜೈಸ್ವಾಲ್, ಎರಡಣೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಖದರ್ ತೋರಿದರು. ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸಾರ್ಕ್, ಜೋಶ್ ಹ್ಯಾಜುಲ್‌ವುಡ್ ವೇಗದ ಬೌಲಿಂಗ್ ದಾಳಿಯನ್ನು ಜೈಸ್ವಾಲ್ ಸಮರ್ಥವಾಗಿ ಎದುರಿಸದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ದ್ವಿಶತಕದ ಹೊಸ್ತಿಯಲ್ಲಿದ್ದ ಜೈಸ್ವಾಲ್ 161 ರನ್ ಗಳನ್ನು ಕಲೆ ಹಾಕಿ ವಿಕೆಟ್ ಕಳೆದುಕೊಂಡರು.
ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿರುವ ಜೈಸ್ವಾಲ್ ಮತ್ತಷ್ಟು ವಿಶ್ವ ದಾಖಲೆಗಳನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ. ಇದುವರೆಗೆ ಟೀಮ್ ಇಂಡಿಯಾ ಪರ ಜೈಸ್ವಾಲ್ ಆಡಿರುವ ಒಟ್ಟು 15 ಟೆಸ್ಟ್ ಪಂದ್ಯಗಳಲ್ಲಿ 58.07 ರ ಸರಾಸರಿಯಲ್ಲಿ 1568 ರನ್ ಗಳಿಸಿದ್ದಾರೆ. ಇದಲ್ಲದೆ, ಪ್ರಸಕ್ತ ಸಾಲಿನಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications