For Quick Alerts
ALLOW NOTIFICATIONS  
For Daily Alerts
 

Perth Test: ಆಸ್ಟ್ರೇಲಿಯಾ ವಿರುದ್ಧವೂ ಮಂಕಾದ ಭಾರತದ ಟಾಪ್‌ ಆರ್ಡರ್; 150 ರನ್‌ಗಳಿಗೆ ಆಲೌಟ್‌

ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಂಕಾಗಿದೆ. ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 150 ರನ್‌ಗಳಿಗೆ ಆಲೌಟಾಗಿದೆ. ಆಸ್ಟ್ರೇಲಿಯಾದಲ್ಲಿಯೂ ಭಾರತದ ಟಾಪ್ ಆರ್ಡರ್‌ ಬ್ಯಾಟರ್‌ಗಳು ಮತ್ತೆ ವಿಫಲವಾಗಿದ್ದಾರೆ. ಪರಿಣಾಮ ಭಾರತ ಬಿಗ್ ಇನ್ನಿಂಗ್ಸ್ ಕಾಣಲು ಸಾಧ್ಯವಾಗಿಲ್ಲ. ಪರ್ತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮೊದಲ ದಿನ ಮೇಲುಗೈ ಸಾಧಿಸಿದೆ.

ಪರ್ತ್ ಟೆಸ್ಟ್ ಪಂದ್ಯದಲ್ಲಿ ಮೊದಲ ಟಾಸ್‌ ಗೆದ್ದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರೀಕ್ಷೆಗೆ ತಕ್ಕಂತೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಂತು ಉತ್ತಮ ಪ್ರದರ್ಶನ ನೀಡಲಿಲ್ಲ. ಆಸೀಸ್ ಬೌಲರ್‌ಗಳ ದಾಳಿಗೆ ನಡುಕಿದ ಭಾರತ 150 ರನ್ ಗಳಿಸವಷ್ಟರಲ್ಲಿ ತನ್ನಲ್ಲೇ ವಿಕೆಟ್ ಕಳೆದುಕೊಳ್ಳಬೇಕಾಯಿತು. ಪಾದರ್ಪಣೆ ಪಂದ್ಯದಲ್ಲಿ ಭರವಸೆ ಹುಟ್ಟು ಹಾಕಿದ ನಿತೀಶ್‌ಕುಮಾರ್ ರೆಡ್ಡಿ 41 ರನ್ ಕಲೆ ಹಾಕುವ ಮೂಲಕ ಟೀಮ್ ಇಂಡಿಯಾ ಪರ ಗರಿಷ್ಠ ಸ್ಕೋರರ್‌ ಆದರು. ಆಸೀಸ್‌ ಪರ ಜೋಶ್ ಹೇಜಲ್ವುಡ್ 4 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಮಿಚೆಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು.

IND vs AUS India bowled out for 150 runs in their first innings

ಪೆವಿಲಿಯನ್ ಪರೇಡ್‌

ಪರ್ತ್‌ನ ಆಪ್ಟಸ್ ಸ್ಟೇಡಿಯಂ ಪಿಚ್‌ನಲ್ಲಿ ಆಸೀಸ್‌ ವೇಗಿಗಳ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್‌ ನಡೆಸಿದರು. ಯಶಸ್ವಿ ಜೈಸ್ವಾಲ್ (0), ದೇವದತ್ ಪಡಿಕ್ಕಲ್ (0), ವಿರಾಟ್ ಕೊಹ್ಲಿ (5), ಕೆಎಲ್ ರಾಹುಲ್ (26), ಧ್ರುವ್ ಜುರೆಲ್ (11) ಮತ್ತು ವಾಷಿಂಗ್ಟನ್ ಸುಂದರ್ (4) ಈ ಎಲ್ಲಾ ಬ್ಯಾಟರ್‌ಗಳು ಆಸೀಸ್‌ ಬೌಲರ್‌ಗಳ ಮುಂದೆ ತಲೆಬಾಗಿದರು. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಮಾರ್ಷ್ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಕಾಡಿದರು. ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಪರ್ತ್ ಪಿಚ್‌ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟ ಬೇಗ ವಿಕೆಟ್‌ ಕಳೆದುಕೊಂಡರು.

ವಿವಾದಾತ್ಮಕ ಔಟ್‌

ಪರ್ತ್ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್‌ ಕೆಎಲ್ ರಾಹುಲ್ ವಿವಾದಾತ್ಮಕ ತೀರ್ಪಿಗೆ ಔಟಾದರು. ಭಾರತದ ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನಲ್ಲಿ ದಾಳಿಗಿಳಿದ ಮಿಚೆಲ್ ಸಾರ್ಕ್‌ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್‌ ಔಟಾದರು. ಮಿಚೆಲ್ ಸಾರ್ಕ್‌ ಓವರ್‌ನ ಎರಡನೇ ಎಸೆತವನ್ನು ರಾಹುಲ್ ಡಿಫೆಂಡ್ ಮಾಡಲು ಮುಂದಾದರು. ಆದರೆ ಚೆಂಡು ರಾಹುಲ್ ಬ್ಯಾಟ್‌ ಬಳಿ ಹೋಯಿತು. ಇದನ್ನು ಕಂಡ ಆಸ್ಟ್ರೇಲಿಯಾ ಆಟಗಾರರು ಔಟ್‌ಗಾಗಿ ಅಂಪೈರ್‌ ಬಳಿ ಮನವಿ ಮಾಡಿದರು. ಆದರೆ, ಅಂಪೈರ್‌ ನಟೌಟ್ ಎಂದು ನೀಡಿದಾಗ, ನಾಯಕ ಪ್ಯಾಟ್‌ ಕಮ್ಮಿನ್ಸ್‌ ಡಿಆರ್‌ಎಸ್‌ ಮನವಿ ಮಾಡಿದರು. ಇದನ್ನು ಮೂರನೇ ಅಂಪೈರ್‌ ಪರಿಶೀಲಿಸಿ ಔಟ್ ಎಂದು ನೀಡಿದರು. ಇದಾದ ಬಳಿಕ ರಾಹುಲ್ ಅವರ ವಿವಾದಾತ್ಮಕ ಔಟ್‌ ತೀರ್ಪಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Story first published: Friday, November 22, 2024, 13:09 [IST]
Other articles published on Nov 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+