Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS 1st T20: ಸ್ಮೃತಿ, ಶಫಾಲಿ ಸ್ಫೋಟಕ ಬ್ಯಾಟಿಂಗ್; ಆಸೀಸ್ ವನಿತೆಯರಿಗೆ ಮಣ್ಣುಮುಕ್ಕಿಸಿದ ಭಾರತ ತಂಡ

ಶುಕ್ರವಾರ, ಜನವರಿ 5ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಆತಿಥೇಯ ಭಾರತದ ವನಿತೆಯರು 9 ವಿಕೆಟ್‌ಗಳ ಅಮೋಘ ಗೆಲ್ಲುವು ಸಾಧಿಸಿದರು.

ಈ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಕಾರಣದಿಂದ 19.2 ಓವರ್‌ಗಳಲ್ಲಿ 141 ರನ್‌ಗಳಿಗೆ ಸರ್ವಪತನ ಕಂಡಿತು.

IND vs AUS: India Womens Beat Australia Womens Team By 9 Wickets In The 1st T20 Match

142 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಅರ್ಧಶತಕದ ನೆರವಿನಿಂದ 17.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ತಂಡಕ್ಕೆ ಗೆಲುವು ತಂದುಕೊಟ್ಟರು.

ಕಳೆದ 13 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಇದು ಎರಡನೇ ಗೆಲುವಾಗಿದೆ. ಏಕೆಂದರೆ ಭಾರತದ ಕೊನೆಯ ಗೆಲುವು ಕಳೆದ ವರ್ಷ ಸೂಪರ್ ಓವರ್‌ನಲ್ಲಿ ಬಂದಿತ್ತು.

ಆಸ್ಟ್ರೇಲಿಯಾ ಪರ ಅಲಿಸ್ಸಾ ಹೀಲಿ 8 ರನ್, ಬೆತ್ ಮೂನಿ 17 ರನ್, ತಹ್ಲಿಯಾ ಮೆಕ್‌ಗ್ರಾತ್ 0, ಎಲ್ಲಿಸ್ ಪೆರ್ರಿ 37 ರನ್, ಆಶ್ಲೇಗ್ ಗಾರ್ಡ್ನರ್ 0, ಫೋಬೆ ಲಿಚ್‌ಫೀಲ್ಡ್ 49 ರನ್, ಗ್ರೇಸ್ ಹ್ಯಾರಿಸ್ 1 ರನ್, ಅನ್ನಾಬೆಲ್ ಸದರ್ಲ್ಯಾಂಡ್ 12 ರನ್ ಗಳಿಸಿ ತಂಡದ ಮೊತ್ತ 140ರ ಗಡಿ ದಾಟಿಸಿದರು.

ಭಾರತ ಮಹಿಳಾ ತಂಡದ ಪರ ಟಿಟಾಸ್ ಸಾಧು 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶ್ರೇಯಾಂಕಾ ಪಾಟೀಲ್ 3.2 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ರೇಣುಕಾ ಸಿಂಗ್ ಮತ್ತು ಅಮನ್‌ಜೋತ್ ಕೌರ್ ತಲಾ ಒಂದೊಂದು ವಿಕೆಟ್ ಪಡೆದರು.

ನಂತರ ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಉಪನಾಯಕಿ ಸ್ಮೃತಿ ಮಂಧಾನ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 54 ರನ್ ಗಳಿಸಿ ಔಟಾದರು.

ಇನ್ನು ಶಫಾಲಿ ವರ್ಮಾ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 64 ರನ್ ಬಾರಿಸಿ ಭಾರತ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದರು. ಉಳಿದಂತೆ ಜೆಮಿಮಾ ರೋಡ್ರಿಗಸ್ ಗೆಲುವಿನ ಬೌಂಡರಿ ಬಾರಿಸಿದರು.

Story first published: Friday, January 5, 2024, 23:40 [IST]
Other articles published on Jan 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+