For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ್ ಪೂಜಾರ 100ನೇ ಟೆಸ್ಟ್ ಪಂದ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದ ಕೋಚ್ ರಾಹುಲ್ ದ್ರಾವಿಡ್

Ind vs Aus: Indian Coach Rahul Dravid praises Cheteshwar Pujara said everyone happy with his 100th Test

ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ 100ನೇ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಈವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ ದೆಹಲಿಯಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಈ ಅಪರೂಪದ ಸಾಧನೆ ಮಾಡಿದಂತಾಗುತ್ತದೆ. ಈ ವಿಶೇಷ ಸಾಧನೆಗೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಭಾರತದ ಅನುಬವಿ ಬ್ಯಾಟರ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತ ತಂಡದಲ್ಲಿ ಪೂಜಾರ ಬಹಳಷ್ಟು ಜನಪ್ರಿಯವಾಗಿದ್ದು ಎಲ್ಲರು ಕೂಡ ಪೂಜಾರ ಸಾಧನೆಗೆ ಹರ್ಷಗೊಂಡಿದ್ದಾರೆ ಎಂದಿದ್ದಾರೆ ರಾಹುಲ್ ದ್ರಾವಿಡ್. ಇನ್ನು ಪೂಜಾರ ಅವರ ಫಿಟ್‌ನೆಸ್, ಪ್ರತಿಭೆ, ಯಶಸ್ಸು ಹಾಗೂ ವೈಫಲ್ಯಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಮಾದರಿಯಲ್ಲಿ 100 ಪಂದ್ಯಗಳನ್ನಾಡುತ್ತಿರುವುದು ಅವರ ಸುದೀರ್ಘ ಕಾಲದ ಸಾಧನೆಗೆ ಪ್ರತಿಫಲನವಾಗಿದೆ ಎಂದಿದ್ದಾರೆ ಕೋಚ್ ರಾಹುಲ್ ದ್ರಾವಿಡ್.

2010ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುದೀರ್ಘ ಮಾದರಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಚೇತೇಶ್ವರ್ ಪೂಜಾರ ಭಾರತದ ಪರವಾಗಿ 100ನೇ ಪಂದ್ಯವನ್ನಾಡಿದ 13ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಇತರ 12 ಭಾರತೀಯ ಆಟಗಾರರಾಗಿದ್ದಾರೆ.

"ನೂರನೇ ಟೆಸ್ಟ್ ಪಂದ್ಯವನ್ನು ಆಡುವುದು ಯಾವುದೇ ಆಟಗಾರನಿಗೂ ಅತ್ಯಂತ ದೊಡ್ಡ ಸಾಧನೆಯಾಗಿದೆ. ಅಂಥಾ ದೊಡ್ಡ ಮೈಲಿಗಲ್ಲು ದಾಟಬೇಕಾದರೆ ಅಷ್ಟು ಅದಾಧವಾದ ಪ್ರತಿಭೆ ಬೇಕಾಗುತ್ತದೆ. ಅದರ ಜೊತೆಗೆ ಈ ಸಾಧನೆ ಪೂರ್ಣಗೊಳ್ಳಲು ಇನ್ನೂ ಹಲವು ವಿಚಾರಗಳ ಅಗತ್ಯವಿರುತ್ತದೆ. 100ನೇ ಪಂದ್ಯದಲ್ಲಿ ಆಡುವುದು ಎಷ್ಟು ಸುದೀರ್ಘವಾಗಿ ನೀವು ಆಡಿದ್ದೀರಿ ಎಂಬುದರ ಪ್ರತಿಫಲನವಾಗಿರುತ್ತದೆ. ನಿಮ್ಮ ಫಿಟ್‌ನೆಸ್, ಬದ್ಧತೆ, ಯಶಸ್ಸು ಹಾಗೂ ವೈಫಲ್ಯಗಳನ್ನು ನಿಭಾಯಿಸುವ ಸಾಮರ್ಥ್ಯ ಇದೆಲ್ಲವೂ ಬಹಳ ಮುಖ್ಯವಾಗುತ್ತದೆ. ಏರಿಳಿತಗಳನ್ನು ಕಾಣದೆ ಈ ಸಾಧನೆ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ರಾಹುಲ್ ದ್ರಾವಿಡ್.

100 ಟೆಸ್ಟ್ ಪಂದ್ಯಗಳನ್ನಾಡಲು ಕನಿಷ್ಠ 10 ವರ್ಷಗಳಾದರೂ ಬೇಕಾಗುತ್ತದೆ. ಪೂಜಾರ ಅದನ್ನು ಸಾಧಿಸಲು 13-14 ವರ್ಷ ತೆಗೆದುಕೊಂಡಿದ್ದಾರೆ. ಅವರ ಕೌಶಲ್ಯಕ್ಕೆ ಇದು ಪುರಸ್ಕಾರವಾಗಿದೆ, ಅಲ್ಲದೆ ನಾನು ಈಗ ಉಲ್ಲೇಖಿಸಿದ ಎಲ್ಲದಕ್ಕೂ ಇದು ಪ್ರಶಸ್ತಿಯಾಗಿದೆ. ಪೂಜಾರ ತಂಡದಲ್ಲಿ ಬಹಳ ಜನಪ್ರಿಯ ವ್ಯಕ್ತಿ. ಅವರ ಈ ಸಾಧನೆಯನ್ನು ಎಲ್ಲಾ ಆಟಗಾರರು ಕೂಡ ಸಂಭ್ರಮಿಸುತ್ತಾರೆ. ಈ ಟೆಸ್ಟ್ ಪಂದ್ಯ ಮಾತ್ರವಲ್ಲ ಭವಿಷ್ಯದಲ್ಲಿಯೂ ಅವರಿಂದ ಉತ್ತಮ ಪ್ರದರ್ಶನಗಳು ಬರುವ ನಿರೀಕ್ಷೆಯನ್ನುಯ ನಾನು ಹೊಂದಿದ್ದೇನೆ" ಎಂದಿದ್ದಾರೆ ರಾಹುಲ್ ದ್ರಾವಿಡ್.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯಲಿರುವ ಕಾರಣ ಭಾರತ ತಂಡದ ಆಟಗಾರರು ದೆಹಲಿಗೆ ಪ್ರಯಾಣ ಬೆಳೆಸಿದ್ದು ಈ ಸಂದರ್ಭದಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಬಳಿಕ ಟ್ವಿಟ್ಟರ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರನಿಗೆ ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.
ಚೇತೇಶ್ವರ್ ಪೂಜಾರ ದೆಹಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ 100ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಈ ವಿಶೇಷ ಮೈಲಿಗಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.

ಪ್ರಧಾನಿಯನ್ನು ಪತ್ನಿಯ ಜೊತೆಗೆ ಭೇಟಿಯಾದ ಬಳಿಕ ಚೇತೇಶ್ವರ್ ಪೂಜಾರ ಟ್ವಿಟ್ಟರ್‌ನಲ್ಲಿ ಫೋಟೊ ಹಂಚಿಕೊಂಡು ವಿಶೇಷ ಕ್ಷಣದ ಬಗ್ಗೆ ಬರೆದುಕೊಂಡಿದ್ದಾರೆ. "ಪ್ರಧಾನಿಯನ್ನು ಭೇಟಿಯಾಗಿದ್ದು ವಿಶೇಷವಾದ ಗೌರವವಾಗಿದೆ. 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಮಾತುಕತೆ ಪ್ರೋತ್ಸಾಹವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ" ಎಂದು ಚೇತೇಶ್ವರ್ ಪೂಜಾರ ಟ್ವೀಟ್ ಮಾಡಿದ್ದಾರೆ.

Story first published: Wednesday, February 15, 2023, 20:09 [IST]
Other articles published on Feb 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+