ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪರ್ತ್‌ನಲ್ಲಿ ಇದೇ 22 ರಂದು ಆರಂಭವಾಗಲಿದೆ. ಈ ಟೆಸ್ಟ್‌ಗೆ ಉಭಯ ತಂಡಗಳು ಭರದ ಸಿದ್ಧತೆ ನಡೆಸಿವೆ. ಈ ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಗಾಯದ ನೋವು ಬಹುವಾಗಿ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿ ಸಹ ತಂಡಕ್ಕೆ ಬಹುವಾಗಿ ಕಾಡಲಿದೆ. ಈ ಮಧ್ಯ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ. ಆದರೆ ಇವರ ಸ್ಥಾನವನ್ನು ತುಂಬುವದು ಯಾರು ಎಂಬ ಪ್ರಶ್ನೆಗಳು ಹಲವು ದಿನಗಳಿಂದ ಉದ್ಭವಿಸಿದ್ದವು. ಈಗ ಇದಕ್ಕೆ ಮೇಲ್ನೋಟಕ್ಕೆ ಉತ್ತರ ಸಿಕ್ಕಿದೆ. ಅಂದಹಾಗೆ ಟೀಮ್ ಇಂಡಿಯಾ ಪರ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸ ಬಹುದು ಎಂದು ಹೇಳಲಾಗುತ್ತಿದೆ. ಅಭ್ಯಾಸದ ವೇಳೆ ಶುಭಮನ್ ಗುಲ್ ಸಹ ಗಾಯಕ್ಕೆ ತುತ್ತಾಗಿದ್ದು, ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ.

ಟೀಮ್ ಇಂಡಿಯಾ ಈ ಬಾರಿ ಮೂರನೇ ಕ್ರಮಾಂಕದಲ್ಲಿ ಯಂಗ್ ಪ್ಲೇಯರ್‌ಗೆ ಅವಕಾಶ ನೀಡಬೇಕು. ಈ ಸ್ಥಾನದಲ್ಲಿ ಈಗಾಗಲೇ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಆಡಿದ ಟೀಮ್ ಮ್ಯಾನೇಜ್ಮೆಂಟ್ ಕೈ ಸುಟ್ಟುಕೊಂಡಿದೆ. ಹೀಗಾಗಿ ಈ ಸ್ಥಾನದಲ್ಲಿ ಯುವ ಆಟಗಾರನಿಗೆ ನೀಡಬೇಕು. ಅಲ್ಲದೆ ಆ ಬ್ಯಾಟರ್‌ಗೆ ನಿನ್ನ ನೈಜ ಬ್ಯಾಟ್ ಮಾಡಲು ತಿಳಿಸಬೇಕು. ಈ ಸ್ಥಾನಕ್ಕೆ ಸೂಕ್ತ ಎನ್ನುವ ಪ್ಲೇಯರ್ ಟೀಮ್ ಇಂಡಿಯಾದಲ್ಲೇ ಇದ್ದಾರೆ. ಆದರೆ ಅವರಿಗೆ ಈ ಸ್ಥಾನದಲ್ಲಿ ಆಡುವ ಅವಕಾಶ ನೀಡಬೇಕು. ಅವರೇ ಟೀಮ್ ಇಂಡಿಯಾದ ಎರಡನೇ ವಿಕೆಟ್ ಬ್ಯಾಟರ್ ಧ್ರುವ್ ಜುರೇಲ್.
ಧ್ರುವ್ ಜುರೇಲ್ ಒಬ್ಬ ಭರವಸೆಯ ವಿಕೆಟ್ ಕೀಪರ್ ಎನ್ನುವದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಇವರು ಒಬ್ಬ ಉತ್ತಮ ಬ್ಯಾಟರ್ ಸಹ ಹೌದು. ಇವರು ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ರಾಜ್‌ಕೋಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಧ್ರುವ್ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದರು.

ಧ್ರುವ್ ಜುರೇಲ್ ಈಗಾಗಲೇ ಭಾರತದ ಪರ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 63.33ರ ಸರಾಸರಿಯಲ್ಲಿ 190 ರನ್ ಸಿಡಿಸಿದ್ದಾರೆ. ಇದರಲ್ಲಿ 90 ರನ್‌ಗಳ ಅಮೋಘ ಇನಿಂಗ್ಸ್ ಸಹ ಸೇರಿದೆ. ಇವರು ಇತ್ತೀಚಿಗೆ ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲೂ ತಂಡಕ್ಕೆ ನೆರವಾಗಿದ್ದ ಆಟಗಾರ. ಇವರು ಮೂರನೇ ಸ್ಥಾನಕ್ಕೆ ಸೂಕ್ತ ರಾಗಬಲ್ಲರು. ಇವರು ಈ ಸ್ಥಾನದಲ್ಲಿ ಬ್ಯಾಟ್ ಮಾಡಿ ಆಂಕರ್ ರೋಲ್ ಪ್ಲೇ ಮಾಡಬಲ್ಲರು.
ಧ್ರುವ್ ಜುರೇಲ್ ಯಾವುದೇ ಸ್ಥಾನದಲ್ಲಾದ್ರೂ ಆಡುವ ಕ್ಷಮತೆಯನ್ನು ಹೊಂದಿರುವ ಪ್ಲೇಯರ್. ಇವರಿಗೆ ಕಚ್ಚಿಕೊಂಡು ಆಡುವ ಕಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಕೆಟ್ಟ ಬೌಲ್‌ಗಳಿಗೆ ದಂಡಿಸುವ ಕಲೆಯನ್ನು ಸಹ ಹೊಂದಿದ್ದಾರೆ. ಧ್ರುವ್ ಜುರೇಲ್ ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಅನಧಿಕೃತ ಟೆಸ್ಟ್‌ನಲ್ಲಿ ಮಿಂಚಿದ್ದಾರೆ. ಇವರು ಆಡಿದ 2 ಇನಿಂಗ್ಸ್‌ಗಳಲ್ಲಿ 148 ರನ್ ಸಿಡಿಸಿ ಭರವಸೆ ಮುಡಿಸಿದ್ದಾರೆ. ಹೀಗಾಗಿ ಇವರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂಬುದು ಅಭಿಮಾನಿಗಳ ಆಶಯ.