Ind vs Aust: ರಣಜಿ ಫೈನಲ್ ಆಡಲು ಭಾರತ ತಂಡದಿಂದ ಹೊರಗುಳಿದ ಪ್ರಮುಖ ವೇಗಿ!

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೂರನೇ ದಿನಕ್ಕೆ ಮುಕ್ತಾಯವಾದ ಬಳಿಕ ಇದೀಗ ಎರಡನೇ ಪಂದ್ಯಕ್ಕೆ ಎಲ್ಲರ ಚಿತ್ತ ನೆಟ್ಟಿದೆ. ಈ ಸಂದರ್ಭದಲ್ಲಿ ರಣಜಿ ಫೈನಲ್ ಪಂದ್ಯ ಕೂಡ ಆಯೋಜನೆಯಾಗಲಿದ್ದು ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಬೆಂಗಾಲ ತಂಡಗಲು ಮುಖಾಮುಖಿಯಾಗಲಿದೆ. ಈ ಫೈನಲ್ ಪಂದ್ಯದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಜಯ್‌ದೇವ್ ಉನಾದ್ಕಟ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಫೆಬ್ರವರಿ 17ರಿಂದ ದೆಹಲಿಯಲ್ಲಿ ಆರಂಭವಾಗಲಿದೆ. ಅದಕ್ಕೂ ಒಂದು ದಿನ ಮುಂಚಿತವಾಗಿ ರಣಜಿ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು ಸೌರಾಷ್ಟ್ರ ಹಾಗೂ ಬೆಂಗಾಲ ತಂಡಗಳ ಮಧ್ಯೆ ಪಂದ್ಯ ನಡೆಯಲಿದ್ದು ಕೊಲ್ಕತ್ತಾದಲ್ಲಿ ಪಂದ್ಯ ಆಯೋಜನೆಯಾಗಲಿದೆ. ಇದರಲ್ಲಿ ಸೌರಾಷ್ಟ್ರ ಪರವಾಗಿ ಆಡುವ ಹಿನ್ನೆಲೆಯಲ್ಲಿ ಜಯ್‌ದೇವ್ ಉನಾದ್ಕಟ್ ಅವರನ್ನು ಭಾರತ ತಂಡದಿಂದ ಬಿಡುಗಡೆಗೊಳಸಿಲಾಗಿದೆ.

ರಣಜಿಯಲ್ಲಿ ಸೌರಾಷ್ಟ್ರ ಸಾಧನೆ
ಕಳೆದ ನಾಲ್ಕು ರಣಜಿ ಟೂರ್ನಿಯ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡವನ್ನು ಬೆಂಗಾಲ ತಂಡ ಬೃಹತ್ ಅಂತರದಿಂದ ಸೋಲಿಸಿ ಫೈನಲ್ ಪಂದ್ಯದಲ್ಲಿ ಸ್ಥಾನ ದೃಢಪಡಿಸಿದೆ.

ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿದ್ದ ಉನಾದ್ಕಟ್
ಇನ್ನು ಕಳೆದ ವರ್ಷ ಬಾಂಗ್ಲಾದೇಶದ ಭಾರತ ಪ್ರವಾಸದ ಸಮಯದಲ್ಲಿ ಜಯದೇವ್ ಉನದ್ಕತ್ ಅವರು ಭಾರತ ಟೆಸ್ಟ್ ತಂಡಕ್ಕೆ ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್‌ಗಳಿಗೆ ತಂಡದಲ್ಲಿ ಆಯ್ಕೆಯಾಗಿದ್ದರು. ಇದೀಗ ಎರಡನೇ ಪಂದ್ಯಕ್ಕೆ ಜಯ್‌ದೇವ್ ಉನಾದ್ಕಟ್ ಅವರನ್ನು ಬಿಡುಗಡೆಗೊಳಿಸಲಾಗಿದ್ದರು ಕೂಡ ಅವರ ಸ್ಥಾನಕ್ಕೆ ಯಾವುದೇ ಯುವ ಆಟಗಾರನನ್ನು ಬಿಸಿಸಿಐ ಹೆಸರಿಸಿಲ್ಲ.

ಬಲಿಷ್ಠವಾಗಿದೆ ಭಾರತದ ಬೌಲಿಂಗ್ ವಿಭಾಗ
ಭಾರತವು 2ನೇ ಟೆಸ್ಟ್‌ಗೆ ತನ್ನ 16 ಆಟಗಾರರ ತಂಡದಲ್ಲಿ ವೇಗದ ದಾಳಿಯಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಅವರಂಥಾ ವೇಗಿಗಳನ್ನು ಹೊಂದಿದೆ. ಮೂರನೇ ಹಾಗೂ ನಾಲ್ಕನೇ ಪಂದ್ಯಕ್ಕೆ ಇನ್ನಷ್ಟೇ ಆಡುವ ಬಳಗವನ್ನು ಹೆಸರಿಸಬೇಕಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಭಾರತ ಸೋಲಿಸಿದ್ದು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಸ್ಪಿನ್ ಅವಳಿಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು 15 ವಿಕೆಟ್ ಕಬಳಿಸಿದ್ದರೆ ವೇಗಿಗಳಾಉ ಈ ಪಂದ್ಯದಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಭಾರತ ಈ ಪಂದ್ಯದಲ್ಲಿ ಶಮಿ ಮತ್ತು ಸಿರಾಜ್ ಅವರೊಂದಿಗೆ ಕಣಕ್ಕಿಳಿದಿದ್ದು ಉಮೇಶ್ ಯಾದವ್ ಹಾಗೂ ಉನಾದ್ಕಟ್ ಬೆಂಚ್ ಕಾದಿದ್ದರು. ಅಕ್ಷರ್ ಪಟೇಲ್ ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications