Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಯ್ಕೆಗಾರರ ಅಂತಿಮ ಕ್ಷಣದ ನಿರ್ಧಾರದತ್ತ ಬೊಟ್ಟು ಮಾಡಿದ ಮೊಹಮ್ಮದ್ ಕೈಫ್

IND vs AUS: Kaif points at India’s selection issues for lack of 6th bowling option

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಮೊದಲ ಪಂದ್ಯದ ಸೋಲಿನ ಪರಾಮರ್ಶೆಗಳು ಜೋರಾಗಿ ನಡೆಯುತ್ತಿದೆ. ಅದರಲಲೂ ಟೀಮ್ ಇಂಡಿಯಾದಲ್ಲಿ ಪಾರ್ಟ್‌ಟೈಮ್ ಬೌಲರ್‌ ಕೊರತೆ ಎದ್ದು ಕಾಣುತ್ತಿದೆ.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಈ ಬಗ್ಗೆ ಆಯ್ಕೆಗಾರರ ನಿರ್ಧಾರರದತ್ತ ಬೊಟ್ಟು ಮಾಡಿದ್ದಾರೆ. ಪಂದ್ಯ ಅಥವಾ ಸರಣಿಯ ಮಧ್ಯದಲ್ಲಿ ತಕ್ಷಣಕ್ಕೆ ಆರನೇ ಬೌಲರ್‌ನನ್ನು ಕಂಡುಕೊಳ್ಳುವುದು ನಾಯಕನ ಜವಾಬ್ಧಾರಿ ಅಲ್ಲ. ಅದು ಆಯ್ಕೆಗಾರರ ಹೊಣೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ. ಭಾರತ ಆರನೇ ಬೌಲರ್‌ನ ಕೊರತೆಯಿಂದಾಗಿ ಹೊಂದಾಣಿಕೆಯ ಕೊರತೆ ಕಾಣುತ್ತಿರುವುದು ನಿಜ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

"ವಿರಾಟ್ ಕೊಹ್ಲಿಗೆ ಈ ಪ್ರವಾಸದಲ್ಲಿ ಆರನೇ ಬೌಲಿಂಗ್ ಆಯ್ಕೆಯನ್ನು ನೀಡಲಾಗಿಲ್ಲ. ನಾಯಕನ ಪರಿಸ್ಥಿತಿಗೆ ಬೇಸರವಾಗುತ್ತದೆ. ನನಗನಿಸುತ್ತೆ ಆಯ್ಕೆಗಾರರು ಇಲ್ಲಿ ತಪ್ಪೆಸಗಿದ್ದಾರೆ ಎಂದು ಮೊಹಮ್ಮದ್ ಕೈಫ್ ಟ್ವೀಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಟ್ವೀಟ್‌ಗೆ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಟೀಮ್ ಇಂಡಿಯಾ ಏಕದಿನ ಪಂದ್ಯಕ್ಕೆ ಸೂಕ್ತವಾದ ಆರನೇ ಬೌಲಿಂಗ್ ಆಯ್ಕೆ ಯಾರಾಗಲು ಸಾಧ್ಯವಿದೆ ಎಂದಿದ್ದಾರೆ? ಈ ಮೂಲಕ ಆರನೇ ಬೌಲರ ಆಲ್‌ರೌಂಡರ್‌ನ ಕೊರತೆಯನ್ನು ಎದುರಿಸುತ್ತಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಯಾರನ್ನು ಅವರು ಆಐಕ್ಎ ಮಾಡಬೇಕಾಗಿತ್ತು? ಶಂಕರ್? ದುಬೆ? ಆರನೇ ಕ್ರಮಾಂಕದಲ್ಲಿ ಬ್ಯಾಟ್ ಹಾಗೂ ಬೌಲಿಂಗ್ ಮಾಡಬಲ್ಲವರು ಯಾರು? 50 ಓವರ್‌ಗಳ ಕ್ರಿಕೆಟ್‌ನಲ್ಲಿ ಈ ಕೌಶಲ್ಯವನ್ನು ಹೊಂದಿದ ಎಷ್ಟು ಆಟಗಾರರಿದ್ದಾರೆ ಎಂದು ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.

Story first published: Sunday, November 29, 2020, 8:50 [IST]
Other articles published on Nov 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+