IND vs AUS: ಬೌನ್ಸರ್ ಏಟು ತಿಂದ ಆಸಿಸ್ ನಾಯಕನನ್ನು ರಾಹುಲ್ ಪರೀಕ್ಷಿಸಿದ್ದು ಹೀಗೆ! ವಿಡಿಯೋ

ಆಸ್ಟ್ರೇಲಿಯಾ ಹಾಗೂ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಆರಂಭಿಕ ಆಟಗಾರರು ಭರ್ಜರಿ ಪ್ರದರ್ಶನವನ್ನು ನೀಡಿದ್ದಾರೆ. ಎರಡನೇ ಪಂದ್ಯದಲ್ಲೂ ವಾರ್ನರ್ ಹಾಗೂ ಫಿಂಚ್ ಜೊಡಿ ಆಸಿಸ್ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿದೆ. ಈ ಪಂದ್ಯದಲ್ಲಿ ತಮಾಷೆಯ ಕ್ಷಣಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸೈನಿ ಎಸೆದ ಚೆಂಡು ಫುಲ್ಟಾಸ್ ಆಗಿ ಬಂತು. ಈ ಎಸೆತವನ್ನು ಬಾರಿಸುವಲ್ಲಿ ವಿಫಲರಾದ ಫಿಂಚ್ ಹೊಟ್ಟೆಯ ಭಾಗಕ್ಕೆ ಬಡಿಯಿತು. ಕ್ಷಣಕಾಲ ಫಿಂಚ್ ನೋವನ್ನು ವ್ಯಕ್ತಪಡಿಸಿದರು. ಬಳಿಕ ಹಾಗೇ ಸವಾರಿಸಿಕೊಂಡರು. ಈ ಘಟನೆಗೆ ವೇಗಿ ನವ್‌ದೀಪ್ ಸೈನಿ ತಕ್ಷಣವೇ ಬ್ಯಾಟ್ಸ್‌ಮನ್ ಆರೋನ್ ಫಿಂಚ್ ಬಳಿ ಕ್ಷಮೆಯಾಚಿಸಿದರು.
ಈ ಸಂದರ್ಭದಲ್ಲಿ ಆರೋನ್ ಫಿಂಚ್ ಬಳಿಗೆ ವಿಕೆಟ್ ಕೀಪರ್ ಕೆಎಲ್ ರಾಹುಲ್ ಹಾಗೂ ಯುಜುವೇಂದ್ರ ಚಾಹಲ್ ಬಂದರು. ಆರೋನ್ ಫಿಂಚ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಿದ ಕೆಎಲ್ ರಾಹುಲ್ ತಕ್ಷಣವೇ ಆರೋನ್ ಫಿಂಚ್ ಅವರ ಹೊಟ್ಟೆಯ ಭಾಗವನ್ನು ಪರೀಕ್ಷಿಸಲು ತಮಾಷೆಯಾಗಿ ಮುಂದಾದರು. ಈ ಸಂದರ್ಭದಲ್ಲಿ ಫಿಂಚ್ ಕೂಡ ಅದಕ್ಕೆ ಪ್ರತಿಕ್ರಿಯಿಸಿದರು.
ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಪಂದ್ಯ ಅಂದರೆ ಅಲ್ಲಿ ಸಾಕಷ್ಟು ಗಂಭೀರ ಕ್ಷಣಗಳು ಸಾಮಾನ್ಯವಾಗಿರುತ್ತದೆ. ಮಾತಿನ ಚಕಮಕಿಗಳು ಸಾಮಾನ್ಯವಾಗಿರುತ್ತದೆ. ಐಪಿಎಲ್‌ನಲ್ಲಿ ಆಟಗಾರರ ನಡುವಿನ ವೈಯಕ್ತಿಕ ಬಾಂಧವ್ಯ ಉತ್ತಮವಾಗಿ ವೃದ್ಧಿಸಿರುವುದರಿಂದ ಇಂತಾ ತಮಾಷೆಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications