For Quick Alerts
ALLOW NOTIFICATIONS  
For Daily Alerts
 

IND vs AUS: ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಕೇವಲ 5ನೇ ಭಾರತೀಯ ಕೆಎಲ್ ರಾಹುಲ್!

ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾದವು.

ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗವು ಮೊದಲ ಬಾರಿಗೆ ಕೈಕೊಟ್ಟಿತು. ಅಗ್ರ ಬ್ಯಾಟರ್‌ಗಳು ಅಬ್ಬರಿಸಿದರೂ, ನಿಯಮಿತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಆಸ್ಟ್ರೇಲಿಯಾ ವಿರುದ್ಧ ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು.

IND vs AUS: KL Rahul only 5th Indian to achieve this feat in ODI World Cup Final!


ಇದೇ ವೇಳೆ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮ್ಮ 17ನೇ ಏಕದಿನ ಅರ್ಧಶತಕವನ್ನು ಬಾರಿಸಿದರು. ಇನ್ನು ಕೆಎಲ್ ರಾಹುಲ್ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ ಕೇವಲ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಈ ಗಣ್ಯರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ (2003), ಗೌತಮ್ ಗಂಭೀರ್ (2011), ಎಂಎಸ್ ಧೋನಿ (2011) ಮತ್ತು ವಿರಾಟ್ ಕೊಹ್ಲಿ (2023) ಅವರ ಸಾಲಿಗೆ ಕೆಎಲ್ ರಾಹುಲ್ ಸೇರಿದರು. ಕುತೂಹಲಕಾರಿಯಾಗಿ, ಇದು 2023ರ ಏಕದಿನ ವಿಶ್ವಕಪ್‌ನ ಅವರ ನಿಧಾನಗತಿ ಅರ್ಧಶತಕವಾಗಿದೆ.

ಕೆಎಲ್ ರಾಹುಲ್ 2023ರ ಏಕದಿನ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಭಾರತದ ರಕ್ಷಣೆಗೆ ಬಂದರು ಮತ್ತು ಪಂದ್ಯಾವಳಿಯಲ್ಲಿ ಅವರ ಮೂರನೇ 50 ಪ್ಲಸ್ ಸ್ಕೋರ್ ಗಳಿಸಿದರು. ಐದು ಎಸೆತಗಳ ಅಂತರದಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ಬಂದರು.

IND vs AUS: KL Rahul only 5th Indian to achieve this feat in ODI World Cup Final!

ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ 31 ಎಸೆತಗಳಲ್ಲಿ 47 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಔಟಾಗುವ ಮೊದಲು ಭಾರತ ತಂಡಕ್ಕೆ ವೇಗದ ಆರಂಭ ನೀಡಿದರು.

ಶ್ರೇಯಸ್ ಅಯ್ಯರ್ ಕೂಡ ಶೀಘ್ರದಲ್ಲೇ ತಮ್ಮ ನಾಯಕನ ಹಿಂದೆ ಪೆವಿಲಿಯನ್‌ಗೆ ಹಿಂತಿರುಗಿದ ಕಾರಣ ಭಾರತ ತಂಡ 3 ವಿಕೆಟ್‌ಗೆ 81 ರನ್‌ಗೆ ತತ್ತರಿಸುವಂತೆ ಮಾಡಿತು.

ಕೆಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ಜೊತೆಗೂಡಿ ಭಾರತದ ಇನ್ನಿಂಗ್ಸ್ ಅನ್ನು ಕಟ್ಟಲು ಪ್ರಯತ್ನಿಸಿದರು ಮತ್ತು 67 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ನಿರ್ಮಿಸಿದರು.

29ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿದ್ದಾಗ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಇನ್ನು ಕೆಎಲ್ ರಾಹುಲ್ ಫೈನಲ್‌ನಲ್ಲಿ ನಿಧಾನಗತಿ ಆಟಕ್ಕೆ ಮೊರೆ ಹೋಗಿ 86 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

2023ರ ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಫೈನಲ್‌ನ ನಂತರ, ಆಡಿದ ಹತ್ತು ಇನ್ನಿಂಗ್ಸ್‌ಗಳಲ್ಲಿ 75.33ರ ಸರಾಸರಿ ಮತ್ತು 90.76ರಲ್ಲಿ ಸ್ಟ್ರೈಕ್ ರೇಟ್‌ನಲ್ಲಿ 452 ರನ್ ಗಳಿಸಿದ್ದಾರೆ. ಇನ್ನು ಫೈನಲ್‌ನಲ್ಲಿ ಔಟಾಗುವ ಮುನ್ನ ಕೆಎಲ್ ರಾಹುಲ್ 107 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 66 ರನ್ ಗಳಿಸಿದರು.

Story first published: Sunday, November 19, 2023, 17:50 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+