Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Empty Chepauk Stadium: ಭಾರತ vs ಆಸ್ಟ್ರೇಲಿಯಾ ಪಂದ್ಯಕ್ಕೂ ಪ್ರೇಕ್ಷಕರ ಬರ; ಚೆನ್ನೈನಲ್ಲಿ ನೀರಸ ಪ್ರತಿಕ್ರಿಯೆ!

ಭಾನುವಾರ, ಅಕ್ಟೋಬರ್ 8ರಂದು 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ-ವೋಲ್ಟೇಜ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ವೇಳೆ ಖಾಲಿ ಆಸನಗಳು ಕಂಡುಬಂದಿದ್ದು, ಚೆನ್ನೈನಲ್ಲಿ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದಕ್ಕೂ ಮುನ್ನ ಅಕ್ಟೋಬರ್ 5ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಉದ್ಘಾಟನಾ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅರ್ಧದಷ್ಟು ಖಾಲಿ ಆಸನಗಳು ಕಾಣಿಸಿದ್ದವು.

Ind vs Aus Match: Fans Turned Away from India vs Australia World Cup Match; Dull Response in Chennai

ಆ ಬಳಿಕ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಪಂದ್ಯವು ಧರ್ಮಶಾಲಾದಲ್ಲಿನ HPCA ಕ್ರೀಡಾಂಗಣ ಹಾಗೂ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಪಂದ್ಯ ಕೂಡ ಖಾಲಿ ಕ್ರೀಡಾಂಗಣವನ್ನು ಕಂಡುಬಂದಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆಯೇ ಅಭಿಮಾನಿಗಳು ಹೆಚ್ಚಿನ ಆಸನಗಳನ್ನು ಆಕ್ರಮಿಸಿದರು.

ಹೈದರಾಬಾದ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ನ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ಹಣಾಹಣಿಯಲ್ಲೂ ಅಭಿಮಾನಿಗಳಿಲ್ಲದೆ ಖಾಲಿ ಸ್ಟ್ಯಾಂಡ್‌ಗಳು ಕಾಣಿಸಿದ್ದವು.

Ind vs Aus Match: Fans Turned Away from India vs Australia World Cup Match; Dull Response in Chennai

ಏಕದಿನ ವಿಶ್ವಕಪ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಆ್ಯಪ್‌ನಲ್ಲಿನ ಅಧಿಕೃತ ಟಿಕೆಟ್ ಬುಕ್ಕಿಂಗ್ ಪಾಲುದಾರರು ಕ್ರೀಡಾಂಗಣ ಸೋಲ್ಡ್ ಔಟ್ ಆಗಿದೆ ಎಂದು ತೋರಿಸಿದ್ದರಿಂದ ಕೆಲವು ಅಭಿಮಾನಿಗಳು ಖಾಲಿ ಸ್ಟ್ಯಾಂಡ್‌ಗಳಿಂದ ಗೊಂದಲಕ್ಕೊಳಗಾಗಿದ್ದಾರೆ.

ಟಿಕೆಟ್ ಬುಕ್ಕಿಂಗ್ ಸಮಸ್ಯೆ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೂ ಮೊದಲು, ಭಾರತ ಪಂದ್ಯಗಳಿಗೆ, ವಿಶೇಷವಾಗಿ ಭಾರಿ ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಟಿಕೆಟ್‌ಗಳನ್ನು ಬುಕ್ ಮಾಡಲು ಅಭಿಮಾನಿಗಳು ಆನ್‌ಲೈನ್‌ನಲ್ಲಿ ದೀರ್ಘಕಾಲದ ಸರತಿ ಸಾಲಿನಲ್ಲಿ ಕಾಯಬೇಕಾಯಿತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಕ್ಟೋಬರ್ 14ರಂದು (ಶನಿವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಶನಿವಾರ, ಅಕ್ಟೋಬರ್ 7ರಂದು 14,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ.

Story first published: Sunday, October 8, 2023, 17:02 [IST]
Other articles published on Oct 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+