Melbourne Test: ಟೀಮ್ ಇಂಡಿಯಾಗೆ ಗುಡ್ ನ್ಯೂಸ್; ಹೆಡ್ ಆಡೋದು ಡೌಟ್?
ಬ್ರಿಸ್ಬೇನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ಮಳೆ ದಯೆ ತೋರಲಿಲ್ಲ. ಇದರಿಂದಾಗಿ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವನ್ನು ಕಾಣಲಿಲ್ಲ. ಉಭಯ ತಂಡಗಳ ನಡುವಿನ ಮುಂದಿನ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ಆಸೀಸ್ ಸ್ಫೋಟಕ ಬ್ಯಾಟರ್ ಮೆಲ್ಬೋರ್ನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ತಂಡ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ, ಭಾರತದ ಗೆಲುವಿಗೆ ಆಸೀಸ್ ಬ್ಯಾಟರ್ ಅವಕಾಶವನ್ನು ಕೊಡುತ್ತಿಲ್ಲ. ಅಷ್ಟರ ಮಟ್ಟಿಗೆ ಭಾರತ ತಂಡವನ್ನು ಈ ಆಸೀಸ್ ಬ್ಯಾಟರ್ ಕಾಡಿದ್ದಾರೆ. ಭಾರತ ತಂಡದ ದೊಡ್ಡ ಶತ್ರು ಎಂದೇ ಕರೆಸಿಕೊಳ್ಳುವ ಟ್ರಾವಿಸ್ ಹೆಡ್ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಆಡುವುದು ಅನುಮಾನ ಎನ್ನಲಾಗುತ್ತಿದೆ. ಆಸೀಸ್ ಪಡೆ ಹೆಡ್ ಅವರನ್ನು ಕಳೆದುಕೊಂಡರೆ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಹೀಗಾಗಿ ಟ್ರಾವಿಸ್ ಹೆಡ್ ಅಲಭ್ಯತೆಯ ಲಾಭವನ್ನು ಟೀಮ್ ಇಂಡಿಯಾ ಬೌಲರ್‌ಗಳು ಪಡೆಯಬಹುದು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟ್ರಾವಿಸ್ ಹೆಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ, ಟ್ರಾವಿಸ್ ಹೆಡ್ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ತೊಡೆಸಂದು ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಆಡುವುದು ಅನುಮಾನವಾಗಿದೆ. ಇದೀಗ ಈ ಕುರಿತು ಸ್ವತಃ ಟ್ರಾವಿಸ್ ಹೆಡ್ ಮಾಹಿತಿ ನೀಡಿದ್ದಾರೆ.
ಅತ್ಯುತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್ ಹೆಡ್ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ತೊಡೆಸಂದು ಸಮಸ್ಯೆಯೊಂದಿಗೆ ಹೋರಾಡಿದ ನಂತರ ತಮ್ಮ ಫಿಟ್‌ನೆಸ್ ಬಗ್ಗೆ ಇರುವ ಊಹಪೋಹಗಳನ್ನು ತಳ್ಳಿಹಾಕಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಲಿದ್ದೇನೆ ಎಂದು ಹೆಡ್ ಹೇಳಿದ್ದಾರೆ. 'ನನ್ನ ಬ್ಯಾಟಿಂಗ್‌ನಿಂದ ನನಗೆ ತುಂಬಾ ಸಂತೋಷವಾಗಿದೆ. ಸ್ವಲ್ಪ ಊತವಿದ್ದರೂ ಮುಂದಿನ ಪಂದ್ಯದ ವೇಳೆಗೆ ಸರಿಯಾಗಲಿದೆ ಎಂದಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಗಾಯದ ನೋವಿನ ನಡುವೆ ಕೂಡ ಹೆಡ್ (152) ಶತಕ ಸಿಡಿಸಿದ್ದರು.
ಸರಣಿ ಅಧಿಕ ಸ್ಕೋರರ್
ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟ್ರಾವಿಸ್ ಹೆಡ್ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. ಇದರ ಪ್ರತಿಫಲವಾಗಿ ಅವರು ಈ ಸರಣಿಯಲ್ಲಿ ಮತ್ತು ಆಸ್ಟ್ರೇಲಿಯಾ ಪರ ಅತಿಹೆಚ್ಷು ರನ್ ಕಲೆ ಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೆಡ್ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 81.80 ಸರಾಸರಿಯಲ್ಲಿ 409 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಅಮೋಘ ಶತಕಗಳು ಸೇರಿವೆ. ಹೀಗಾಗಿ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವುದು ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ ಭಾರತ ತಂಡಕ್ಕೆ ಲಾಭದಾಯಕವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications