Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus: ಸಂಪೂರ್ಣ ಫಿಟ್ ಅಲ್ಲದಿದ್ದರೂ ಆಡಿಯೇ ಆಡುತ್ತೇನೆ ಎಂದ ಆಸಿಸ್ ಕ್ರಿಕೆಟಿಗ!

Ind vs Aus: Mitchell Starc set to play 3rd Test Test despite not recovering fully from injury

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿದೆ. ಇಂದೀರ್‌ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡು ತಂಡಗಳ ಆಟಗಾರರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್‌ನಲ್ಲಿ ಕೆಲ ಆಟಗಾರರ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್ ಈಗಾಗಲೇ ತವರಿಗೆ ವಾಪಸಾಗಿದ್ದು ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯವಾಗುವುದು ಖಚಿತವಾಗಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೂರನೇ ಪಂದ್ಯಕ್ಕೂ ಮುನ್ನ ತಾನು ಸಂಪೂರ್ಣವಾಗಿ ಫಿಟ್ ಆಗಿರದಿದ್ದರೂ ಆಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ಬುಧವಾರ ಆರಂಭವಾಗಲಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ತಮ್ಮ ತಾಯಿಗೆ ಅನಾರೋಗ್ಯದ ಕಾರಣ ತವರಿಗೆ ವಾಪಸಾಸಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಆಡುವ ಬಳಗಲ್ಲಿ ಮಿಚೆಲ್ ಸ್ಟಾರ್ಕ್ ಪಾತ್ರ ಮಹತ್ವದ್ದಾಗಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಸಿಸ್ ಸ್ಪಿನ್ನರ್‌ಗಳಿಗೆ ಪರಿಣಾಮಕಾರಿಯಾಗಿ ಸಾಥ್ ನೀಡಲು ಸಜ್ಜಾಗಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ.

"ನಾನು ಈಗ ಆರೋಗ್ಯವಂತನಾಗಿದಗದೇನೆ. ಈ ಹಂತದಲ್ಲಿ ಕೆಲ ಗೊಂದಲಗಳು ಹಾಗೂ ಅಸಹನೆಗಳು ಉಂಟಾಗುತ್ತವೆ. ಆದರೆ ನಾನು ನನ್ನ ಶೇಕಡಾ 100ರಷ್ಟು ಬೆಂಬಲವನ್ನು ತಂಡಕ್ಕೆ ನೀಡಲಿದ್ದೇನೆ" ಎಂದಿದ್ದಾರೆ ಮಿಚೆಲ್ ಸ್ಟಾರ್ಕ್. ಮೂರನೇ ಪಂದ್ಯಕ್ಕೂ ಮುನ್ನ ಕೆಲ ಪ್ರಮುಖ ಆಟಗಾರರು ಆಸ್ಟ್ರೇಲಿಯಾ ಪರವಾಗಿ ಆಡಲು ಅಲಭ್ಯವಾಗಿವಾಗಲಿದ್ದಾರೆ. ಹಾಗಾಗಿ ಕ್ಯಾಮರೂನ್ ಗ್ರೀನ್ ಹಾಗೂ ಮಿಚೆಲ್ ಸ್ಟಾರ್ಕ್ 3ನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ.

"ಈ ಹಿಂದೆ ಇಲ್ಲಿ ಹೆಚ್ಚಾಗಿ ಆಡಿದ ಅನುಭವ ಇಲ್ಲ. ಆದರೆ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಇತ್ತೀಚೆಗೆ ಆಡಿರುವ ಅನುಭವ ಹೊಂದಿದ್ದೇನೆ. ಆದರೆ ಭಾರತದ ಪರಿಸ್ಥಿತಿ ಭಿನ್ನವಾಗಿದೆ. ನಿಮ್ಮಲ್ಲಿರುವ ಕೌಶಲ್ಯದ ಜೊತೆಗೆ ಹೇಗೆ ಬೌಲಿಂಗ್ ದಾಳಿಯನ್ನು ಸಂಘಟಿಸುತ್ತೀರಿ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಈ ಹಿಂದೆ ಇಲ್ಲಿ ಏನಾಯಿತು ಎಂಬುದು ಮುಖ್ಯವಲ್ಲ. ಆಟಗಾರನಾಗಿ ನಿಮ್ಮ ಬೆಳವಣಿಗೆ ಹಾಗೂ ತಂಡವಾಗಿ ಪ್ರಗತಿ ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ ಮಿಚೆಲ್ ಸ್ಟಾರ್ಕ್.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಇಂದೋರ್‌ಗೆ ಆಗಮಿಸಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಟೀಮ್ ಇಂಡಿಯಾದ ಆಟಗಾರರು ಕೂಡ ನೆಟ್ಸ್‌ನಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದೆ.

Story first published: Monday, February 27, 2023, 17:22 [IST]
Other articles published on Feb 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+